ಗಡಿಯಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿರುವ ಅಮರೇಶ್ವರ ಮಹಾರಾಜರು: ಯತೀಂದ್ರ ಸಿದ್ದರಾಮಯ್ಯ
Amareshwar Maharaja is creating an education revolution on the border: Yathindra Siddaramaiah
ಲೋಕದರ್ಶನ ವರದಿ
ಕಾಗವಾಡ 11: ಗಡಿ ಭಾಗದ ಅತಿ ಸಣ್ಣದಾದ ಕವಲಗುಡ್ಡ ಗ್ರಾಮದಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಕಟ್ಟಿ, ಬೆಳಸಿ, ಶಿಕ್ಷಣ ಕ್ರಾಂತಿಯನ್ನು ಅಮರೇಶ್ವರ ಮಹಾರಾಜರು ಮಾಡುತ್ತಿದ್ದಾರೆ. ಸದರಿ ಶಾಲೆಯ ಪ್ರಗತಿಗಾಗಿ ಸರ್ಕಾರದ ವತಿಯಿಂದ 1 ಕೋಟಿ ರೂ.ಗಳನ್ನು ಮಂಜೂರು ಮಾಡಲು ಕ್ರಮ ಕೈಕೊಂಡಿರುತ್ತೇನೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ರವಿವಾರ ದಿ. 10 ರಂದು ತಾಲೂಕಿನ ಕವಲಗುಡ್ಡ ಕರಿಯೋಗಿ ಸಿದ್ದಾಶ್ರಮದ ಆವರಣದಲ್ಲಿ ಆಯೋಜಿಸಲಾಗಿದ್ದ ಕನಕ-ಬಸವ ಭಾವ-ಬೆಳಕು ಕಾರ್ಯಕ್ರಮದಲ್ಲಿ ಶತಾಯುಷಿ ರೈತರಪಾದ ಪೂಜೆ, ಸಿದ್ದಶ್ರೀ ಅನುಭವ ಮಂಟಪ ಅಡ್ಡಿಗಲ್ಲು ಸಮಾರಂಭ, ಸಿದ್ದರತ್ನ ಮದಗೊಂಡೇಶ್ವರ ಮಹಾರಾಜರ ಗುರು ಸ್ಮರಣೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಮರೇಶ್ವರ ಮಹಾರಾಜರು ಕವಲಗುಡ್ಡದಲ್ಲಿ ಅನೇಕ ಸಂತರ, ವಚನಕಾರರ ಭೋದನೆಗಳನ್ನು ಅದರಲ್ಲಿ ಕನಕದಾಸರು ಮತ್ತು ಬಸವೇಶ್ವರ ಚಿಂತನೆಗಳನ್ನು ಅಳವಡಿಸಿಕೊಂಡು, ಪ್ರತಿವರ್ಷ ವಿನೂತನ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ಬರಿ ಮಠವನ್ನು ಸ್ಥಾಪನೆ ಮಾಡದೆ ಅದರ ಜೊತೆ ಬಡ ಅನಾಥ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದಾರೆ. ಅಮರೇಶ್ವರ ಸ್ವಾಮೀಜಿಗಳ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಪ್ರಗತಿಗೆ ನಮ್ಮಿಂದ ಆಗುವ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ನಾಡಿನಲ್ಲಿ ಉತ್ತಮ ಕಾರ್ಯ ಮಾಡುವ ಸ್ವಾಮೀಜಿಗಳ ಸಾಲಿನಲ್ಲಿ ಅಮರೇಶ್ವರ ಮಹಾರಾಜರು ಒಬ್ಬರು. ಇವರ ಪ್ರಗತಿದ್ಯೋತಕ ಚಿಂತನೆಯಿಂದ ಇಂದು ಕವಲಗುಡ್ಡದಲ್ಲಿ ಶಿಕ್ಷಣ ಕ್ರಾಂತಿಯಾಗಲು ಸಹಾಯಕವಾಗಿದೆ. ಮನುಷ್ಯನ ಮನಸ್ಸುನ್ನು ಶುದ್ಧ ಮಾಡುವ ಕೇಂದ್ರಗಳೇ ಇಂದಿನ ಮಠ ಮಾನ್ಯಗಳಾಗಿವೆ. ಇಂತಹ ಮಠಗಳಲ್ಲಿ ಕವಲಗುಡ್ಡದ ಮಠವು ಒಂದಾಗಿದೆ. ರೈತರ ಪಾದಪೂಜೆ ಮಾಡಿ, ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಹೇಳಿದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಮರೇಶ್ವರ ಮಹಾರಾಜರಿಗೆ ಅವರ ಮಠ ಕಟ್ಟಲು 5 ಎಕರೆ ಜಾಗ ಕೊಡಲಾಗುವುದು ಎಂದು ಹೇಳಿದರು.
ದಿವ್ಯ ಸಾನಿದ್ಯವನ್ನು ಸಿರಿವಾಳದ ಸೋಮಲಿಂಗೇಶ್ವರ ಪಟ್ಟದ ಸ್ವಾಮೀಜಿ, ನಯಾನಗರದ ಅಭಿನವ ಸಿದ್ದಲಿಂಗೆಶ್ವರ ಸ್ವಾಮೀಜಿ ವಹಿಸಿ, ಆಶೀರ್ವಚನ ನೀಡಿದರು.
ಈ ವೇಳೆ ಶಾಸಕರಾದ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ಲಕ್ಷ್ಮಣರಾವ ಚಿಂಗಳೆ, ಬಸವರಾಜ ಬಸಳಿಗುಂದಿ, ಸತ್ಯಪ್ಪ ಬಾಗೆಣ್ಣವರ, ಸುರೇಶ ಮಾಯಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 