ಆಲೂರು ವೆಂಕಟರಾಯರು ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿ ಜಾಗೃತಗೊಳಿಸಿದರು
Alur Venkataraya ignited the fire of self-respect among Kannadigas and awakened their consciousness.
ಧಾರವಾಡ 12: ಕ.ವಿ.ವ. ಸಂಘವು ಕರ್ನಾಟಕದ ಏಕೀಕರಣ ಸ್ಫೂರ್ತಿಯ ಕೇಂದ್ರವಾಗಿತ್ತು. ಕರ್ನಾಟಕದ ಗತ ವೈಭವದ ಗ್ರಂಥವನ್ನು ಆಲೂರ್ ವೆಂಕಟರಾಯರು ಕನ್ನಡಿಗರ ಕೈಗಿಟ್ಟು ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿಕನ್ನಡಿಗರನ್ನು ಜಾಗೃತಗೊಳಿಸಿದರು ಎಂದು ದೀಪಕ ಆಲೂರ್ ಹೇಳಿದರು.
ಅವರು ದಿ: 11-11-2025 ರಂದುಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಕ.ವಿ.ವ. ಸಂಘದಆಲೂರ ವೆಂಕಟರಾಯರ ವೇದಿಕೆಯಿಂದ ಅವರ ಮೊಮ್ಮಗನಾಗಿ ಮಾತನಾಡುವ ಅವಕಾಶವನ್ನು ಕ.ವಿ.ವ. ಸಂಘ ನನಗೆ ನೀಡಿದ್ದು ನನ್ನ ಸೌಭಾಗ್ಯ. ದಿ. ಆಲೂರ್ ವೆಂಕಟರಾಯರು ತಮ್ಮ ಇಡೀ ಜೀವನವನ್ನೇ ಏಕೀಕರಣಕ್ಕಾಗಿ ಸಮರ್ಿಸಿಕೊಂಡವರು.ಕನ್ನಡಿಗರ ಉದಾಶೀನತೆ ನಿರಾಭಿಮಾನ ದುಸ್ಥಿತಿ ಕಂಡು ಮರುಗಿದ ಅವರುಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಕ.ವಿ.ವ. ಸಂಘವೇ ವೇದಿಕೆಯಾಗಿತ್ತು.ಕನ್ನಡ ಸಾಹಿತ್ಯ ಪರಿಷತ್, ಏಕೀಕರಣ ಪರಿಷತ್‌ಉದಯವಾಗಲುಕಾರಣರಾದ ಅವರು ಧಾರವಾಡದಲ್ಲಿ ಗ್ರಂಥಕರ್ತರ ಸಮ್ಮೇಳನ ಆಯೋಜಿಸಿದ ಕೀರ್ತಿಅವರದಾಗಿದೆಎಂದು ಹೇಳಿದರು.
ಸಾಧಕರ ಸನ್ಮಾನ ಪುರಸ್ಕೃತರಾದ ರಂಗಭೂಮಿಯ ನಟದಂಪತಿಗಳಾದ ಮಹಾದೇವ ಹಡಪದ ಮತ್ತುಗಾಯತ್ರಿ ಹಡಪದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಹಾದೇವ ಹಡಪದ ಮಾತನಾಡಿ, ಕನ್ನಡರಂಗಭೂಮಿಗೆ ಮೊದಲಿನಂತಹ ವೈಭವ ಇಲ್ಲದಿರುವುದು ವಿಷಾದನೀಯ.ರಂಗಭೂಮಿ ಸದಾ ಚಲನಶೀಲವಾದುದು. ರಂಗಭೂಮಿ ಶಕ್ತಿ ಕುಗ್ಗಿದಂತೆಕಂಡರೂಅದುಇನ್ನೂತನ್ನತನವನ್ನು ಉಳಿಸಿಕೊಂಡಿದೆ. ಕ.ವಿ.ವ. ಸಂಘ ಕಳೆದ ಮೂರಾ್ನಲ್ಕು ವರ್ಷಗಳಿಂದ ವೈವಿಧ್ಯಮಯಕಾರ್ಯಕ್ರಮಆಯೋಜಿಸುತ್ತಿದ್ದು, ಸರ್ಕಾರ ವಿಸ್ತೃತ ಕಾರ್ಯಕ್ರಮಗಳಿಗೆ ಕ.ವಿ.ವ. ಸಂಘಕ್ಕೆ 10 ಎಕರೆಜಾಗೆ ನೀಡಬೇಕು.ಅಂದಾಗಅಲ್ಲಿ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಇತಿಹಾಸದ ವಿಸ್ಮಯ ಸನ್ನಿವೇಶ ಸೃಷ್ಟಿ ಮಾಡಲು ಸಾಧ್ಯಎಂದು ಹೇಳಿದರು.
ವೇದಿಕೆಯ ಮೇಲೆ ಶಶಿಕಲಾ ಲಮಾಣಿ, ಸಂಗಮೇಶ ನೀಲಾ ಸಂತ, ಶಂಕರ ಕುಂಬಿ ಇದ್ದರು. ಪ್ರಾರಂಭದಲ್ಲಿಡಾ.ಗುರುಬಸವ ಮಹಾಮನೆ ಮತ್ತು ಸಂಗಡಿಗರಿಂದ ವಾದ್ಯಗೋಷ್ಠಿ ಜರುಗಿತು.ಚಿತ್ತಾಪೂರ ಸಂಗಮೇಶ ನೀಲಾ ಸಂತಅವರಿಂದ ಸಂಗೀತಕಾರ್ಯಕ್ರಮಜರುಗಿತು. ಕಲಘಟಗಿಯ ಲಂಬಾಣಿ ನೃತ್ಯತಂಡದಿಂದ ಲಂಬಾಣಿ ನೃತ್ಯ ಪ್ರದರ್ಶನಗೊಂಡವು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿಕಿರಣ ಸಿದ್ಧಾಪೂರ, ಸಿ.ಎಸ್. ಪಾಟೀಲಕುಲಕರ್ಣಿ, ಭೀಮುಖಟಾವಿ, ಪ್ರೊ. ಬಿ. ಎಚ್.ಕೋಟಿಗೌಡ್ರ, ಎಂ.ಎಂ. ಚಿಕ್ಕಮಠ, ಕೆ.ಎಚ್.ನಾಯಕ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 