ಗೋಕಾಕ ಕಾಲೇಜಿನಲ್ಲಿ ಸಸಿ ನೀಡಿ ಪರಿಸರ ಜಾಗೃತಿ ಮೂಡಿಸಿದ ಹಳೆ ವಿದ್ಯಾರ್ಥಿಗಳು
Alumni spread environmental awareness by planting saplings at Gokak College
ಗೋಕಾಕ 24 : ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಗುರು ಶಿಷ್ಯ ಪರಂಪರೆ ಒಂದು. ಅನುದಿನವು ಕಾಯಕ ಮಾಡುತ್ತಾ ನಮ್ಮ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು. ಗುರು ಶಿಷ್ಯರ ನಡುವೆ ಇರುವ ಸಂಬಂಧ ಭಾವನಾತ್ಮಕ ಸಂಬಂಧವಾಗಿದ್ದು ಜೊತೆಗೆ ಸ್ನೇಹಿತರಲ್ಲಿಯೂ ಅದೇ ಭಾವನಾತ್ಮಕ ಸಂಬಂಧವಿದೆ ಎಂದು ಗೋಕಾಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಕ್ಷ್ಮಣ ಭೀಮಪ್ಪ ಪಟಾಯಿತ ಅಭಿಪ್ರಾಯ ಪಟ್ಟರು ಅವರು ತಾಲೂಕಿನ ಶಿಂದಿಕುರಬೇಟ ಗ್ರಾಮದ ಸಿದ್ದರಾಮೇಶ್ವರ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯ ಸನ್ 1999-2000 ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮ ಹಾಗೂ ಸ್ನೇಹಿತರ ಪುನರ್ಮಿಲನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮನುಷ್ಯ ಸಮಾಜದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಉತ್ತಮ ಚಾರಿತ್ರ್ಯ ಮುಖ್ಯವಾಗಿದೆ ಎಂದರಲ್ಲದೇ ಚಾರಿತ್ರ್ಯವೇ ಜೀವನದ ಕೀರೀಟ ವಾಗಿದೆ. ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅವರಿಗೆ ಸತ್ಕಾರದ ಜೊತೆಗೆ ಸಸಿ ನೀಡಿ ಪರಿಸರ ಜಾಗೃತಿ ಮೂಡಿಸಿದ ಹಳೆ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಗುರು ಎಂ.ಆರ್.ಕಡಕೋಳ ಮಾತನಾಡಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಾ ತಮ್ಮ ಉತ್ತಮ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ನಮಗೆ ತುಂಬಾ ಸಂತೋಷವಾಗಿದೆ ಎಂದರು.
ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎಸ್.ಎಸ್.ದೊಡಮನಿ ಮಾತನಾಡಿ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನಾವು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದ್ದು ತಾವುಗಳು ಕೂಡ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಅವರನ್ನು ಜೀವನದಲ್ಲಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರೇರಣೆ ನೀಡಬೇಕೆಂದು ಕರೆ ನೀಡಿದರು. ವೇದಿಕೆ ಮೇಲೆ ಶಿಕ್ಷಕರಾದ ಎಸ್.ಆರ್.ತರಾಳ, ಎಸ್.ಎಲ್.ಅಂಬಿ, ಬಸವರಾಜ ಪೂಜೇರಿ, ಎಲ್.ಆರ್.ಭೋವಿ, ಟಿ.ಐ.ಕಟ್ಟಿಮನಿ, ಎಸ್.ಆರ್. ಅರಳಿಮಟ್ಟಿ, ಪಿ.ಎನ್.ಬಡಕುಂದ್ರಿ, ಆರಿ್ಬ.ಕರೆಪ್ಪಗೋಳ, ವಿಠ್ಠಲ ಕರೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿಕೊಂಡರು. ವಿದ್ಯೆ ಕಲಿಸಿದ ಸಿದ್ದರಾಮೇಶ್ವರ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಸಂಗೀತಾ ಬಳಗಾರ ಸ್ವಾಗತಿಸಿದರು. ರಾಜೇಶ್ವರಿ ನಿಪ್ಪಾಣಿ ನಿರೂಪಿಸಿದರು. ನಾಗೇಶ್ ಬಂಬಲಾಡಿ ವಂದಿಸಿದರು.ಫೋಟೋ: ಗೋಕಾಕ: ತಾಲೂಕಿನ ಶಿಂದಿಕುರಬೇಟ ಗ್ರಾಮದ ಸಿದ್ದರಾಮೇಶ್ವರ ಶಾಲೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 