ದಶಕದ ಬಳಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತಷ್ಟು ಗಟ್ಟಿಯಾದ ಸ್ನೇಹದ ಬಂಧ

ದಶಕದ ಬಳಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತಷ್ಟು ಗಟ್ಟಿಯಾದ ಸ್ನೇಹದ ಬಂಧ Alumni reunion after a decade: A bond of friendship strengthened further

ಲೋಕದರ್ಶನ ವರದಿ 

ಕಾಗವಾಡ 27: ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಮ್ಮಿಲನ- 2026 ಕಾರ್ಯಕ್ರಮವು ರವಿವಾರ ದಿ. 26 ರಂದು ಅರ್ಥಪೂರ್ಣವಾಗಿ ಹಾಗೂ ಉತ್ಸಾಹ ಭರಿತವಾಗಿ ಜರುಗಿತು.  

ಸನ್ 1927 ರಿಂದ 1966 ರ ವರೆಗೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು ದಶಕಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿ, ತಮ್ಮ ಬಾಲ್ಯದ ಸುವರ್ಣ ಕ್ಷಣಗಳನ್ನು ನೆನಪಿಸಿಕೊಂಡರು. ವಯಸ್ಸು ಬರೀ ಸಂಖ್ಯೆ, ಹುಮ್ಮಸ್ಸಿಗ್ಯಾವ ಅಂಕೆ..? ಎಂಬ ಘೋಷವಾಕ್ಯ ಕಾರ್ಯಕ್ರಮದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. 

ಭಾಗವಹಿಸಿದ ಹಿರಿಯರಿಗೆ ಆಯೋಜಕರಿಂದ ಪರಂಪರೆಯ ಟಾವೆಲ್, ಗಾಂಧಿಟೋಪಿ ಧರಿಸಿ, ಗ್ರಾಮದ ಪದ್ಮಾವತಿ ವೃತ್ತ ಸೇರಿದಂತೆ ವಿವಿಧ ರಸ್ತೆಗಳ ಮೂಲಕ ಸಕಲ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಗ್ರಾಮಸ್ಥರ ಗಮನ ಸೆಳೆಯಿತು. ಹಲವು ವರ್ಷಗಳ ಬಳಿಕ ಭೆಟ್ಟಿಯಾದ ಸ್ನೇಹಿತರು ಒಬ್ಬರನ್ನೊಬ್ಬರು ಆತ್ಮೀಯವಾಗಿ ಬರಮಾಡಿಕೊಂಡು, ಹಳೆಯ ನೆನಪುಗಳನ್ನು ಹಂಚಿಕೊಂಡು ಭಾವುಕರಾದ ಕ್ಷಣಗಳು ಕಂಡುಬಂದವು. 

ಬಾಲ್ಯವನ್ನು ಗುರುಗಳನ್ನು ಸ್ಮರಿಸಿ, ತಮ್ಮ ಜೀವನದಲ್ಲಿ ಶಾಲೆಯ ಪಾತ್ರವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು. ಕೆಲವರು ತಮ್ಮ ಸಾಧನೆಗೆ ಈ ಶಾಲೆಯೇ ಅಡಿಪಾಯವಾಗಿದೆ ಎಂದು ಹೇಳಿದರು. ಎಲ್ಲರಿಗೂ ಸ್ನೇಹಭೋಜನ ಆಯೋಜಿಸಿದ್ದರು. ಗ್ರಾಮದ ಗಣ್ಯರು ಹಾಗೂ ಯುವ ಪೀಳಿಗೆಯವರು ಸಹ ಈ ಸಮ್ಮಿಲನಕ್ಕೆ ಸಾಕ್ಷಿಯಾಗಿ, ಹಿರಿಯರ ಸ್ನೇಹಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಮೋಹನ ಶಹಾ, ಶೀತಲ ಕುಂಬಾರ, ಸಚಿನ ಕಾಂಬಳೆ, ಪುರಂದರ್ ತಳವಾರ, ಅಶೋಕ ಕೋರೆ, ಶೇಖರ ಕಾಟಕರ, ಭಗವಂತ ತಳವಾರ, ಬುಡ್ಡು ಜಮಖಾನೆ, ಬಂಡು ತಮದಡ್ಡಿ, ದೀಲೀಪ ಕುಸನಾಳೆ, ಪ್ರಕಾಶ ಹನಗಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈಶ್ವರ ಪಟಗಾರ ನಿರೂಪಿಸಿ, ವಂದಿಸಿದರು. ಇಂತಹ ಸಮ್ಮಿಲನಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಮೌಲ್ಯಗಳನ್ನು ಉಳಿಸಲು ಸಹಕಾರಿ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಒಟ್ಟಿನಲ್ಲಿ, ವಯಸ್ಸು ಎಷ್ಟೇ ಆಗಲಿ, ಸ್ನೇಹದ ನೆನಪುಗಳು ಎಂದಿಗೂ ಮಂಕಾಗುವುದಿಲ್ಲ ಎಂಬುದನ್ನು ಈ ಅಪೂರ್ವ ಸಮ್ಮಿಲನ ಮಾಡುವ ಮೂಲಕ ಉಗಾರ ಬುದ್ರುಕ್ ಯುವಕರ ಬಳಗ ಮತ್ತೆ ಸಾಬೀತುಪಡಿಸಿದೆ.