ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ: ಗುರುವಂದನೆ

ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ: ಗುರುವಂದನೆ Alumni gather for a friendly reunion: Guru Vandane

ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ: ಗುರುವಂದನೆ 

ಬೀಳಗಿ 04: ಹಳೆ ನೆನಪು, ಹಳೇ ಸ್ನೇಹ ಚಿರಕಾಲವು ಸಂತಸ ನೀಡುವ ಸಂಗತಿ, ಇದನ್ನೆಲ್ಲ ನೆನಪಿಸಿಕೊಂಡರೆ ನಮಗೆ ಥಟ್ ಅಂತ ನೆನಪಿಗೆ ಬರುವುದು ಶಾಲೆ,  

          ವಿದ್ಯಾರ್ಥಿ ಜೀವನದ ಬಹುಪಾಲು ಶಾಲೆಯಲ್ಲಿ ಕಳೆದಿರುತ್ತೇವೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಆಗಬೇಕು, ಆ ಹಳೆಯ ನೆನಪುಗಳನ್ನು ಮೇಲಕು ಹಾಕುತ್ತ ಕುಳಿತರೆ ಮತ್ತೆ ವಿದ್ಯಾರ್ಥಿ ಜೀವನಕ್ಕೆ ಹೋಗಬೇಕು ಅಂತ ಅನಿಸುತ್ತದೆ, ಈ ಕನಸು ನನಸು ಮಾಡಿಕೊಳ್ಳುವುದರ ಸಲುವಾಗಿ ತಾಲೂಕಿನ ಕೊರ್ತಿ (ಪು.ಕೇ)ದಲ್ಲಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ 2005-06 ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಏರಿ​‍್ಡಸಿ, ಸುಮಾರು 19 ವರ್ಷ ನಂತರವೂ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು, ಅವರಿಗೆ ವಂದಿಸುವ ಕಾರ್ಯ ಮಾಡಿ ಹಳೆ ನೆನಪುಗಳನ್ನ ಮೆಲುಕು ಹಾಕಿ ಸಂಭ್ರಮಿಸಿದರು,  

ಬೆಳಿಗ್ಗೆ 11 ಗಂಟೆಗೆ ಕಲಿಸಿದ ಗುರುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆ ತರಲಾಯಿತು. ನಂತರ ಶಾಲೆಯ ಮುಖ್ಯ ದ್ವಾರದಿಂದ ಗುರುಗಳ ಮೇಲೆ ಹೂ ಮಳೆಗೈದು ವೇದಿಕೆಗೆ ಕರೆ ತರಲಾಯಿತು.  

ಸ,ಹಿ,ಪ್ರಾ, ಶಾಲೆ ಕೊರ್ತಿ ಪು. ಕೇ ದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವುದರ ಮೂಲಕ ಶಾಲೆಯ ಮುಖ್ಯ ಶಿಕ್ಷಕ ಎ ಆರ್ ಭಜಂತ್ರಿ ಕಾರ್ಯಕ್ರಮ ಉದ್ಘಾಟಿಸಿದರು.  

      ಒಟ್ಟು ಸ್ನೇಹಿತರನ್ನು ಒಂದೇ ವೇದಿಕೆಯ ಮೇಲೆ ತೋರಿಸುವ ಬೃಹತ್ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ತಮಗೆ ಕಲಿಸಿದ ಗುರುಗಳಾದ ವಿಶ್ರಾಂತ ಶಿಕ್ಷಕ ಎಸ್ ಬಿ ಬಡಿಗೇರ, ಸಹ ಶಿಕ್ಷಕ ಎಸ್ ಎಸ್ ಬಡಿಗೇರ, ಪಿಕೆ ಹಡಗಲಿ, ಎಸ್ ಎಚ್ ಲಮಾಣಿ, ಗುರುಮಾತೆ ಆರ್ ಪಿ ಹಿರೇಮಠ, ಎಂ ಎಂ ರೋಣದ ಇವರಿಗೆ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು.  

್ಖಕೋಟ್ ್ಖ  

ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ಶಿಕ್ಷಣ ಪಡೆದು, ಉಜ್ವಲ ಜೀವನ ನಿರ್ಮಿಸಬೇಕಾದರೆ ಗುರುವಿನ ಮಾರ್ಗದರ್ಶನ ಇದ್ದಾಗ ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ, ಇವತ್ತಿನ ಈ ಸುಂದರ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳನ್ನು ನೋಡಿ ನನಗೂ ಸಂತಸವಾಯಿತು.  

 ಎಸ್ ಎಸ್ ಬಡಿಗೇರಸಹ ಶಿಕ್ಷಕರು ಎಚ್ ಪಿ ಎಸ್ ಕೊರ್ತಿ  

ಗದ್ದನಕೇರಿ (ಮುರನಾಳ)ಶ್ರೀಮಳೆ ರಾಜೇಂದ್ರ ಮಠದ ಜಗನ್ನಾಥ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸಪ್ಪ ಜರಾಳಿ, ಉಪಾಧ್ಯಕ್ಷೇ ವಿಜಯಲಕ್ಷ್ಮಿ ವಿ ದೇಸಾಯಿ, ರೇವಣಪ್ಪ ಅಂಬಿಗೇರ, ಹಣಮಂತ ಮಳಗಾವಿ, ಚಿನ್ನಪ್ಪ ವಾಗಾತಿ, ಕಲ್ಲವ್ವ ದಳವಾಯಿ ಸೇರಿ ಇತರರು ಉಪಸ್ಥಿತರಿದ್ದರು.  

******************** 

ಗೀ ಗೀ ಸಂಭ್ರಮ: ಹರದೇಶಿ-ನಾಗೇಶಿ ವಿಚಾರ ಸಂಕಿರಣ  

ಲೋಕದರ್ಶನ ವರದಿ   

ಇಂಡಿ 04: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಭೀಮಾಂತರಂಗ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಕೇಂದ್ರ, ಇಂಡಿ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅವರ ಸಹಯೋಗದಲ್ಲಿ ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ದಿ. 7ರಂದು ಬೆಳಿಗ್ಗೆ 10 ಗಂಟೆಗೆ ಗೀಗಿ ಸಂಭ್ರಮ, ಸನ್ಮಾನ ಸಮಾರಂಭ, ಹರದೇಶಿ-ನಾಗೇಶಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಉದ್ಘಾಟಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೊದ್ದಾರ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಬಸವರಾಜ ಕುಮಸಗಿ ಆಗಮಿಸುವರು. ಬಾಗಲಕೋಟದ ಗೊಂದಲಿ ಪದ ಕಲಾವಿದರು, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ ವೆಂಕಪ್ಪ ಅಂಬಾಜಿ ಸುಗತೇಕರ ಸನ್ಮಾನಿತರಾಗಿ ಆಗಮಿಸುವರು.  

ಗುಳೇದಗುಡ್ಡದ ವಿಶ್ರಾಂತ ಪ್ರಾಚಾರ್ಯ ಸಿ ಎಂ ಜೋಶಿ ಅಭಿನಂದನಾ ನುಡಿಗಳನ್ನಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ  ರಾಘವೇಂದ್ರ ಕುಲಕರ್ಣಿ, ಬಿಎಡ್ ಕಾಲೇಜಿನ ಪ್ರಾಚಾರ್ಯೆ ಸುಧಾ ಸುಣಗಾರ ಉಪಸ್ಥಿತರಿರುವರು.ಮಧ್ಯಾನ್ಹ 12 ಗಂಟೆಗೆ ಹರದೇಶಿ-ನಾಗೇಶಿ ಸ್ವರೂಪ ಕುರಿತು ಜರುಗಲಿರುವ ಗೋಷ್ಠಿಯ ಅಧ್ಯಕ್ಷತೆ ಸಾಲೋಟಗಿಯ ಸಾಹಿತಿ ಗೀತಯೋಗಿ ವಹಿಸುವರು. ಸಾಹಿತಿ ಸಿ ಎಂ ಬಂಡಗರ ವಿಷಯ ಮಂಡನೆ ಮಾಡುವರು. ಶಿಕ್ಷಕ ವೈ ಜಿ ಬಿರಾದಾರ, ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪಸ್ಥಿತರಿರುವರು. ಮಧ್ಯಾನ್ಹ 2.15 ಕ್ಕೆ ಜಾನಪದ ಕಲಾ ಪ್ರದರ್ಶನ, ಮದರಿಯ ಭಾಗಪ್ಪ ತಳವಾರ ತಂಡದಿಂದ ಹರದೇಶಿ ಸ್ವರೂಪ, ಗಣಿಹಾರದ ರೇಣುಕಾ ಮಾದರ ತಂಡದಿಂದ ನಾಗೇಶಿ ಸ್ವರೂಪ, ಸಾಲೋಟಗಿಯ ಬಸವೇಶ್ವರ ರೈತ ಹಂತಿ ಸಂಘದ ರಾಮಗೊಂಡ ಕಾಳಿ ಅವರ ಹಂತಿ ಹಾಡು, ಹನಮಂತ ಸುಗತೇಕರ ತಂಡದಿಂದ ಗೊಂದಲು ಹಾಡಿನ ಪ್ರದರ್ಶನ ಇರುವದು.  

ಈ ಎಲ್ಲ ಕಾರ್ಯಕ್ರಮಗಳಲ್ಲಿ ಅಕಾಡೆಮಿ ಸದಸ್ಯರು, ಜಗಲಿ ಕೇಂದ್ರದ ಸದಸ್ಯರು, ಕಾಲೇಜಿನ ಸಿಬ್ಬಂದಿ ವರ್ಗ, ಪ್ರಶಿಕ್ಷಣಾರ್ಥಿಗಳು ಭಾಗವಹಿಸುವರು. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎನ್ ನಮೃತ, ಸದಸ್ಯ ಸಂಚಾಲಕ ಡಾ ಎಂ ಎಂ ಪಡಶೆಟ್ಟಿ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪಿ ಬಿ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

******************** 

ಜೀವನದಲ್ಲಾಗುವ ತಿರುವುಗಳಿಂದ ಬದಲಾವಣೆಯಾಗುತ್ತದೆ: ಡಾ.ಕೃಷ್ಣ ಕೊಲ್ಹಾರಕುಲಕರ್ಣಿವಿಜಯಪುರ 04: ಜೀವನದಲ್ಲಿ ತಿರುವುಗಳು ಯಾವಾಗಲಾದರೂ ಬರಬಹುದು ಮಹಿಪತಿ ದಾಸರಿಗೆ ನಂಗಾಶಾಹಿ ಸೂಫಿಯ ಮೂಲಕವಾಗಿ ಅವರು ಆಧ್ಯಾತ್ಮದತ್ತ ಹೊರಳಿದರು ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಹೇಳಿದರು.ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ನಡೆದ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜನೆ ಮಹಿಪತಿದಾಸರ ಜೀವನ, ಸಾಹಿತ್ಯ ಹಾಗೂ ಸಮಕಾಲೀನ ಇತಿಹಾಸ ವಿಷಯ ಮೇಲೆ ಮಾತಾಡಿದ ಅವರು ಮಲ್ಲಿಕ್ ಕಾಫೂರ್, ಮಹಮ್ಮದ್ ಬಿನ್ ತುಘಲಕ್ ದಾಳಿಯ ನಂತರ ದಕ್ಷಿಣದ ತುಂಗಭದ್ರಾ ನದಿಯ ಕೆಳಗಿನ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯ ; ನದಿಯ ಮೇಲ್ಬಾಗ ಬಹುಮನಿ ಸಾಮ್ರಾಜ್ಯಗಳು ಉದಯಿಸಿದವು. ಬಹುಮನಿ ಸಾಮ್ರಾಜ್ಯದಲ್ಲಿ ವಿಜಯಪುರ ಒಂದು ಸುಬೆಯಾಗಿದ್ದು ‘ಯೂಸುಫ್' ಈ ಸುಬೆಯ ಸರ್ದಾರನಾಗಿದ್ದನು. ಅವನೇ ಮುಂದೇ ಆದಿಲ್ ಶಾಹಿ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾನೆ. ಈ ಆದಿಲ್ ಶಾಹಿ ಮನೆತನದ ಎರಡನೇ ಅಲಿ ಆದಿಲ್ ಶಾಹಿ ಕಾಲದಲ್ಲಿ ಮಹಿಪತಿದಾಸರು ಹಣಕಾಸು ಇಲಾಖೆಯಲ್ಲಿದ್ದರು.ಅವರಿಗೆ ನಂಗಾಶಾಹಿ ಸೂಫಿಯ ಮೂಲಕ ಪರಿವರ್ತನೆಗೊಂಡು ಭಾಸ್ಕರಸ್ವಾಮಿಗಳ ಶಿಷ್ಯರಾಗುತ್ತಾರೆ.  ಮಹಿಪತಿದಾಸರು ಯೋಗ ಸಾಧನ ಮೂಲಕ ದಿವ್ಯತೆಯನ್ನು ಪಡೆದರು. ಅದನ್ನು ಅವರ ಅನೇಕ ಕೀರ್ತನೆಗಳಲ್ಲಿ ಶಬ್ದದಲ್ಲಿ ಹಿಡಿದಿಟ್ಟಿದ್ದಾರೆ' ಎಂದು ಮಹಿಪತಿದಾಸರ ಚರಿತ್ರೆಯನ್ನು ವಿವರಿಸಿದರು.ಮಹಿಪತಿದಾಸರ ಕೀರ್ತನೆಗಳು ಈ ವರೆಗೂ ಸಂಪೂರ್ಣವಾಗಿ ಮುದ್ರಣವಾಗಿಲ್ಲ, ಮುದ್ರಣವಾಗಬೇಕೆಂದು ಇನ್ನೋರ್ವ ಉಪನ್ಯಾಸಕಾರ ನಾರಾಯಣ ಬಾಬಾನಗರ ಆಶಿಸಿದರು. ದಾಸರ, ಶರಣ, ಹಳೆಗನ್ನಡ ಕವಿಗಳ ಕುರಿತು ಸಾಹಿತ್ಯಕ ಕಾರ್ಯಕ್ರಮ ಆಗಾಗ ಆಗುತ್ತಿರಬೇಕೆಂದು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಹರ್ಷವರ್ಧನ ಸರಾಫ್ ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಾರ್ಥನೆ ಪ್ರಿಯಾ ಹರಿದಾಸ, ಸ್ವಾಗತಪರಿಚಯ ಆನಂದ ಗೋಡ್ಸೆ, ನಿರೂಪಣೆ ರಾಹುಲ್ ಮರಳಿ, ವಂದನಾರೆ​‍್ಣ ಶ್ರೀರಂಗ ಕುಲಕರ್ಣಿ ನಿರ್ವಹಣೆ ಮಾಡಿದರು.ವಿವೇಕ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ, ಸುಕಾಂತ ಕುಲಕರ್ಣಿ, ವರಣು ಸೋಲಾಪುರ, ಮಯೂರ ತಿಳಗೂಳಕರ, ಆನಂದ ಜೋಶಿ, ಶಶಿಧರ ಶಿರಾಳಶೆಟ್ಟಿ, ರವೀಂದ್ರ ಹಲ್ಯಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. 

ಧನ್ಯವಾದಗಳುಅಖಿಲ ಭಾರತೀಯ ಸಾಹಿತ್ಯ ಪರಿಷತ್ತು(ರಿ) ವಿಜಯಪುರ ಜಿಲ್ಲಾ ಸಮಿತಿ