ಆಲಮಟ್ಟಿ: ಮಂಜಪ್ಪನ ಸನ್ನಿಧಿಯಲ್ಲಿ ನುಗ್ಗಲಿಗೆ ಸನ್ಮಾನ

ಆಲಮಟ್ಟಿ: ಮಂಜಪ್ಪನ ಸನ್ನಿಧಿಯಲ್ಲಿ ನುಗ್ಗಲಿಗೆ ಸನ್ಮಾನ Almatti: Honored for entering Manjappa's presence

ಆಲಮಟ್ಟಿ: ಮಂಜಪ್ಪನ ಸನ್ನಿಧಿಯಲ್ಲಿ ನುಗ್ಗಲಿಗೆ ಸನ್ಮಾನ 

ಆಲಮಟ್ಟಿ 29:ಕರುನಾಡು ಗಾಂಧಿ ಮಂಜಪ್ಪ ಹರ್ಡೇಕರ ಸನ್ನಿಧಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಗೆ ಅಭೂತಪೂರ್ವ ಸನ್ಮಾನ ನೀಡಿ ಗೌರವಿಸಲಾಯಿತು. 

   ಶಿಕ್ಷಕರ ಸಂಘದ ಹೊಸ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕ ಭವನಕ್ಕೆ ಬೇಟಿ ನೀಡಿದ ಚಂದ್ರಶೇಖರ ನುಗ್ಗಲಿ ಮಂಜಪ್ಪನವರ ಕಂಚಿನ ಪುತ್ಥಳಿ ದರ್ಶನ ಪಡೆದು ನಮಿಸಿದರು. ಮಂಜಪ್ಪನವರ ಮೂತಿ9ಗೆ ಹೂಮಾಲೆ ಹಾಕಿ ಪೂಜಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಅಂಗ ಸಂಸ್ಥೆಗಳ ಮುಖ್ಯಸ್ಥರು ಶಾಲಾ, ಸಂಸ್ಥೆಯ ಪರವಾಗಿ ಗೌರವಪೂರ್ವಕವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಧನ್ಯತೆ ಭಾವ ಮೆರೆದರು. ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಹಾಗೂ ಆಲಮಟ್ಟಿ ಎಸ್‌.ವಿ.ವಿ.ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅವರು ದೂರವಾಣಿ ಮೂಲಕ ನುಗ್ಗಲಿ ಅವರನ್ನು ಸಂಪಕಿ9ಸಿ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿರುವುದಕ್ಕೆ ಅಭಿನಂದಿಸಿದರು. ತಮ್ಮ ಕಾಲಾವಧಿಯಲ್ಲಿ ಶಿಕ್ಷಕರ ಸಂಘ ಉತ್ತಮ ರಚನಾತ್ಮಕ ಕಾರ್ಯ ಚಟುವಟಿಕೆಗಳ ಮೂಲಕ ಬಲಾಢ್ಯ ಹೊಂದಲಿ. ರಾಜ್ಯದ ಸಮಸ್ತ ಶಿಕ್ಷಕರ ಪಾಲಿಗೆ ಇದೀಗ ನವ ಆಶಾಕಿರಣವಾಗಿರುವ ತಾವು ಶಿಕ್ಷಕರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ದಾಪುಗಾಲಿರಿಸಿ ಸ್ಪಂದಿಸಿ. ಶಿಕ್ಷಕರ ವಲಯದಲ್ಲಿ ಭರವಸೆಯ ಬೆಳಕು ಚೆಲ್ಲಿ.ಶೈಕ್ಷಣಿಕ ರಂಗ ಗುಣಮಟ್ಟದತ್ತ ಸಾಗಲು ಮನಪೂರ್ವಕ ಶ್ರಮಿಸಿ ಕೈಜೋಡಿಸಿ ಎಂದು ನುಗ್ಗಲಿ ಅವರಿಗೆ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಸಲಹೆಯಿತ್ತು ಶುಭ ಹಾರೈಸಿ ಅಭಿನಂದಿಸಿದರು. 

   ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್‌.ಆಯ್‌.ಗಿಡ್ಡಪ್ಪಗೋಳ ಇತರರು ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಗೆ ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು. ಸ್ಮಾರಕದ ಕಾರ್ಯದರ್ಶಿ ಎಸ್‌.ವಿ.ಪಟ್ಟಣಶೆಟ್ಟಿ, ವಾಗ್ಮಿ ಮಹೇಶ್ ಗಾಳಪ್ಪಗೋಳ ಸೇರಿದಂತೆ ಅನೇಕ ಶಿಕ್ಷಕ ಮುಖಂಡರು ಉಪಸ್ಥಿತರಿದ್ದರು. 

ಪೋಟೋ(1) : ಆಲಮಟ್ಟಿಯಲ್ಲಿನ ಕರುನಾಡು ಗಾಂಧಿ ಮಂಜಪ್ಪ ಹಡೇ9ಕರ ಸ್ಮಾರಕ ಭವನಕ್ಕೆ ಬೇಟಿ ನೀಡಿ ಮಂಜಪ್ಪನವರ ಆಶೀವಾ9ದ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಗೆ ಎಸ್‌.ವಿ.ವಿ.ಶಿಕ್ಷಣ ಸಂಸ್ಥೆಯ ಶಾಲಾ ಮುಖ್ಯಸ್ಥರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್‌.ಆಯ್‌.ಗಿಡ್ಡಪ್ಪಗೋಳ ಸೇರಿದಂತೆ ಪ್ರಮುಖ ಶಿಕ್ಷಕರು, ಮುಖಂಡರು ಜೊತೆಗಿದ್ದರು.ಪೋಟೋ (2): ಆಲಮಟ್ಟಿ ಮಂಜಪ್ಪ ಹಡೇ9ಕರ ಸ್ಮಾರಕ ಭವನಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಭೇಟಿ ನೀಡಿ ಮಂಜಪ್ಪನವರ ಕಂಚಿನ ಪುತ್ಥಳಿಗೆ ಹೂಮಾಲೆ ಹಾಕಿ ನಮಿಸಿದರು.ಈ ವೇಳೆ ಪೂಜಿಸಿ ಆಶೀವಾ9ದ ಪಡೆದರು.ಪ್ರಮುಖ ಶಿಕ್ಷಕರು, ಮುಖಂಡರು ಇತರರಿದ್ದರು.