ನಿರುದ್ಯೋಗ ಯುವಕರಿಗೆ ಭತ್ಯೆ: ಪಿಎಂ ಗೆ ದೇಶಪಾಂಡೆ ಪತ್ರ

ಬೆಂಗಳೂರು , ಏ 17, ದೇಶದಲ್ಲಿನ  ಕರೋನ ಅವಧಿಯನ್ನು ತಾತ್ಕಾಲಿಕ  ರಾಷ್ಟ್ರೀಯ ತುರ್ತು ಪರಿಸ್ಥಿತಿ  ಎಂದು ಘೋಷಿಸಿ,   ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್  ಮುಖಂಡ,  ಮಾಜಿ ಸಚಿವ ಆರ್.ವಿ.ದೇಶಪಾಂಡೆ  ಪ್ರಧಾನಿಗೆ ಪತ್ರ ಬರೆದು  ಆಗ್ರಹಪಡಿಸಿದ್ದಾರೆ. ಮಾರಣಾಂತಿಕ ಕೊರೊನಾ ಹಾವಳಿಯಿಂದ  ಇಡೀ ದೇಶವೇ ಲಾಕ್ದೌನ್ ಆಗಿದ್ದು, ಸಂಪೂರ್ಣವಾಗಿ ಆರ್ಥಿಕ ಚಟುವಟಿಕೆಗಳು ನಿಂತು ಹೋಗಿವೆ. ಅದರಲ್ಲೂ ಸೂಕ್ಶ್ಮ, ಸಣ್ಣ ಹಾಗೂ ಕೈಗಾರಿಕೆಗಳ ಕೆಲಸ ಸಂಪೂರ್ಣ   ಸ್ಥಗಿತವಾಗಿದೆ. ಹೀಗಾಗಿ ದುಡಿಯುವ  ಕೈಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಅವಧಿಯನ್ನು     " ರಾಷ್ಟ್ರೀಯ ವಿಪತ್ತಿನಿಂದಾಗಿ ತಾತ್ಕಾಲಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ " ಎಂದು ಘೋಷಿಸಬೇಕು ಮತ್ತು ಸಣ್ಣ ಮಧ್ಯಮ ಕೈಗಾರಿಗಳ ನೆರವಿಗೆ ಕೇಂದ್ರ  ಕೂಡಲೇ ಧಾವಿಸಬೇಕು  ಎಂದು ಮನವಿ ಮಾಡಿದ್ದಾರೆ. 
ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ ಯೋಜನೆ ಹಾಗೂ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಮುಖಾಂತರ ಕಾರ್ಮಿಕರ   ರಾಜ್ಯ ವಿಮಾ ನಿಗಮದ ಮೂಲಕ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಆಗ್ರಹಿಸಿದ್ದಾರೆ.ಜೊತೆಗೆ ಕಾರ್ಮಿಕರ ಹಾಗೂ ನೌಕರರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು  ಮುಂದಿನ ಮೂರು ತಿಂಗಳಿಗೆ  ಇ.ಎಸ್.ಐ.ಸಿ ಯಲ್ಲಿ ಸರ್ಕಾರದ ಭಾಗ 3.25ಕ್ಕೆ ಹಾಗೂ ನೌಕರರ ಭಾಗ 0.75ಕ್ಕೆ ಸೇರಿಸಬೇಕು ಎಂದು  ಒತ್ತಾಯಿಸಿದ್ದಾರೆ. ಜೊತೆಗೆ ಇದಕ್ಕೆ ಬೇಕಾದ ನಿಯಮಗಳಲ್ಲಿ  ಬದಲಾವಣೆ ತರುವಂತೆ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಗೆ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.