ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ, ಸರ್ಕಾರಕ್ಕೆ ಸಂಘದ ಮನವಿ

ಬೆಂಗಳೂರು ,  ಎ 13, ರಾಜ್ಯದಲ್ಲಿ  ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಎಲ್ಲ  ಸನ್ನದುದಾರರಿಗೆ ಕೂಡಲೇ   ಅವಕಾಶ ಮಾಡಿಕೊಡಬೇಕು ಎಂದು  ಮದ್ಯ ಮಾರಾಟಗಾರ  ಸಂಘ ಸರ್ಕಾರವನ್ನು  ಒತ್ತಾಯ ಮಾಡಿದೆ. ಈ ಸಂಬಂಧ  ಸಂಘದ ಪಧಾದಿಕಾರಿಗಳು  , ಮುಖ್ಯಮಂತ್ರಿ ಮತ್ತು ಅಬಕಾರಿ  ಸಚಿವರಿಗೆ ಪತ್ರ ಬರೆದು ಮಧ್ಯ  ಮಾರಾಟಕ್ಕೆ ಅವಕಾಶಮಾಡಿ ಕೊಡಬೇಕು ಇದುವರೆಗೆ ಮದ್ಯ ಸಿಗದೆ ರಾಜ್ಯದಲ್ಲಿ  25 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಹಲವು ಅಂಗಡಿಗಳಲ್ಲಿ ಮದ್ಯ ಕಳ್ಳತನದ ಪ್ರಕರಣಗಳು ವರದಿಯಾಗಿದೆ. ಕರೋನ ಸಂಕಷ್ಟದಿಂದ  ಮಧ್ಯ ಮಾರಾಟಗಾರರಿಗೆ  ಭಾರಿ ನಷ್ಟವಾಗಿದೆ ಎಂದು  ಗಮನ ಸೆಳೆದಿದ್ದಾರೆ.  ಇದನ್ನು ತುಂಬಿಕೊಡಬೇಕು  ಮಧ್ಯ ಸಿಗದೆ ರಾಜ್ಯದಲ್ಲಿ  25 ಕ್ಕೂ ಹೆಚ್ಚು ಜನರು  ಈವರಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಗತಿಯನ್ನು  ಸಂಘ  ಸರಕಾರದ  ಗಮನಕ್ಕೆ ತಂದಿದೆ.  ಕೇವಲ  ಎಂ ಎಸ್ ಐಎಲ್  ಮೂಲಕ ಮದ್ಯ ಮಾರಾಟಕ್ಕೆ ಅವಕಾಶ  ನೀಡದೆ ಎಲ್ಲ ಸನ್ನದುದಾರರ ಹಿತ  ಕಾಪಾಡಬೇಕು   ಎಂದು  ಸಂಘ  ಮನವಿ ಮಾಡಿದೆ.
ಬೆಳಿಗ್ಗೆ  10 ರಿಂದ ಮಧ್ಯಾಹ್ನ   2 ಗಂಟೆಯವರಗೆ ಎಲ್ಲ  ಸನ್ನದುದಾರಿಗೆ ಮದ್ಯಮಾರಟ ಮಾಡಲು  ಅವಕಾಶ  ಮಾಡಿಕೊಡಬೆಕು ಎಂದು ಮನವಿ ಮಾಡಲಾಗಿದೆ. ಇದರ ಜೊತೆಗೆ  ಡ್ಯುಟಿ ಫ್ರೀ ಹೆಸರಿನಲ್ಲಿ  ಹೊರ ರಾಜ್ಯದ ಮದ್ಯವನ್ನು ದುಭಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಪರಿಣಾಮ ಅಬಕಾರಿ  ಉದ್ಯಮಕ್ಕೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ   ಮೇಲಾಗಿ  ದುಬಾರಿ   ಬೆಲೆಗೆ ಮದ್ಯ  ಖರೀದಿ ಮಾಡಲಾಗದೆ  ಹೆಚ್ಚಿನ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ರಾಜ್ಯದ ಮಟ್ಟಿದೆ ಇದು ಬಹಳ  ಅಪಾಯಕಾರಿ  ಬೆಳವಣಿಗೆಯಾಗಿದೆ  ಇಂತಹ ಅನಾಹುತ ತಡೆಯಲು ಕೂಡಲೆ ಎಲ್ಲ ಸನ್ನದುದಾರರಿಗೆ  ಮಧ್ಯ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು   ಒತ್ತಾಯ  ಮಾಡಲಾಗಿದೆ.
 ರಾಜ್ಯದ ಎಲ್ಲ  ಮದ್ಯ ಡಿಪೋಗಳಲ್ಲಿ ಕಳದೆ 21 ದಿನಗಳಿಂದ  ಮದ್ಯ,  ಬಿಯರ್ ಅನ್ ಲೋಡ್ ಆಗದೆ ಹಾಗೆಯೆ  ಉಳಿದಿದೆ  ಆದ್ದರಿಂದ  ಕೂಡಲೇ   ಬೆಳಿಗ್ಗೆ  10 ರಿಂದ ಮಧ್ಯಾಹ್ನ   2 ಗಂಟೆಯವರೆಗೆ ಮಧ್ಯ ಮಾರಾಟಮಾಡಲು ಅವಕಾಶ ಬೇಕು ಎಂದು ಮನವಿ ಮಾಡಲಾಗಿದೆ. ಸಿಎಲ್  4 , ಸಿಎಲ್  7 ಮತ್ತು ಸಿಎಲ್ 9 ಸನ್ನುದುದಾರರಿಗೆ  ಆಹಾರ ನಿರ್ಭಂದಿಸಿ  ಸಾಮಾಜಿಕ  ಆಂತರ ಕಾಪಾಡಬೇಕು  ಎಂಬ  ಕಟ್ಟುಪಟು ಹಾಕಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಕೆಂದೂ  ಕೋರಲಾಗಿದೆ.