ಮಕ್ಕಳು, ಸೊಸೆಯಿಂದ ಚಿತ್ರಹಿಂಸೆ ಆರೋಪ: ವೃದ್ದ ಆತ್ಮಹತ್ಯೆಗೆ ಯತ್ನ
Alleged torture by children, daughter-in-law: Elderly man tries to commit suicide
ಮಾಂಜರಿ, 07 ; ಕೃಷ್ಣಾ ನದಿಗೆ ಹಾರಿ ಜೀವ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ವೃದ್ಧನನ್ನು ಸ್ಥಳೀಯರು ಕಾಪಾಡಿದ್ದಾರೆ. ನಂತರ ಕಷ್ಟ, ಸುಖ ವಿಚಾರಿಸಿದಾಗ ಮಗ, ಮಗಳಿಂದಲೇ ದೂರಾವಾದ ಕರುಣಾಜನಕ ಕತೆಯನ್ನು ಹೇಳಿದ್ದಾನೆ.
ಆಗಿದ್ದೇನು..?
ಅಂದ್ದಾಗೆ ಈ ಘಟನೆಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ (77) ನದಿಗೆ ಹಾರಲು ಯತ್ನಿಸಿದ ವೃದ್ಧ. ಇವರು ಮೂಲತಃ ಯಮಕನಮರಡಿ ಗ್ರಾಮದವರು. ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬ್ರಿಡ್ಜ್ ಮೇಲಿಂದ ನದಿಗೆ ಹಾರಲು ಯತ್ನಿಸುತ್ತಿರೋದನ್ನು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿಗೆ ಓಡಿದ ಸಾರ್ವಜನಿಕರು ಆತನ ರಕ್ಷಣೆ ಮಾಡಿದ್ದಾರೆ. ನೀವು ನನಗೆ ಏನೂ ಕೇಳಬ್ಯಾಡ್ರಿ.. ನಾನು ಹೋಗೇನ್ರಿ.. ಜೀವ ಬ್ಯಾಡ ಆಗಿದೆ. ನನ್ನ ಮುಟ್ಟಬ್ಯಾಡ್ರಿ. ನಂಗ ನಡಿಯಾಕ ಬರಲಿ. ನಂಗ ಬ್ಯಾಸರ ಆಗಿದೇರಿ.. ನೀವು ಹೋಗ್ರಿ. ನನ್ನ ಇಲ್ಲೇ ಬಿಡ್ರಿ. ಮಗ ಸೊಸೆ ಹಿಂಸೆ ನೀಡ್ತಾರ, ಮಗಳು ಮನೆಗೆ ಬರಬೇಡ ಅಂದಾಳ.
ಬಳಿಕ ಏನಾಯ್ತು..?
ಮಗ ಮತ್ತು ಸೊಸೆಯಿಂದ ಚಿತ್ರಹಿಂಸೆ ಅನುಭವಿಸಿದ ಕತೆಯನ್ನು ಹೇಳಿದ್ದಾನೆ. 'ಮಗ-ಸೊಸೆ ಮಾನಸಿಕ ಹಿಂಸೆ ನೀಡಿದರು. ಮಗಳು ಕೂಡ ಮನೆಗೆ ಬರಬೇಡ ಅಂದುಬಿಟ್ಟಳು. ಇನ್ನು, ನನಗೆ ಯಾರು ಗತಿ? ಹೀಗಾಗಿ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದೆ' ಎಂದು ಕಣ್ಣೀರು ಇಟ್ಟಿದ್ದಾನೆ.
ನಂತರ ಸ್ಥಳೀಯರಿಂದ ಅಂಕಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆಧುನಿಕತೆಯಲ್ಲಿ ಹಿರೀಜೀವಗಳಪ್ರಾಮುಖ್ಯತೆ ಮರೆಯಾಗುತ್ತಿದೆ. ಹೊತ್ತು ಸಾಕಿದ್ದ ತಂದೆ-ತಾಯಿಗಳು ಮಕ್ಕಳಿಗೆ ಬೇಡವಾಗ್ತಿದ್ದಾರೆ. ಅದಕ್ಕೆ ವಯೋವೃದ್ಧರು ಇಂಥ ನಿರ್ಧಾರ ಕೈಗೆತ್ತಿಕೊಳ್ತಿದ್ದಾರೆ. ಇದಕ್ಕೆಲ್ಲ ಕೊನೆಯಾಗಬೇಕಿದೆ.
ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 