ಶೌಚಾಲಯ ಗೋಡೆ ತೆರವು ಆರೋಪ; ಸ್ಥಳ ಪರೀಶೀಲನೆ ನಡೆಸಿದ ಪುರಸಭೆ ಅಧಿಕಾರಿಗಳು

ಶೌಚಾಲಯ ಗೋಡೆ ತೆರವು ಆರೋಪ; ಸ್ಥಳ ಪರೀಶೀಲನೆ ನಡೆಸಿದ ಪುರಸಭೆ ಅಧಿಕಾರಿಗಳು Allegations of toilet wall being removed; Municipal officials inspect the site

ಮುಗಳಖೋಡ 14 : ಪಟ್ಟಣದ ವಾರ್ಡ್‌ ನಂ 1 ಹಾಗೂ 2 ರಲ್ಲಿ ವಾಸಿಸುವ ನಿವಾಸಿಗಳು ಸರ್ಕಾರಿ ಗಾಯಾರಾಣ ಜಾಗದಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾದ ಬಯಲು ಶೌಚಾಲಯದ ಗೋಡೆಯನ್ನು ಕೆಲವರು ತೆರವುಗೊಳಿಸಿದ್ದಾರೆ ಎನ್ನಲಾದ ಘಟನಾಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಪವಾಡಿಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಗುರುವಾರ ಸಂಜೆ 5:00ಗೆ ಘಂಟೆಗೆ ಭೇಟ್ಟಿ ನೀಡಿ ಸ್ಥಳ ಪರೀಶೀಲನೆ ಮಾಡಿದರು. ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಬಂಧಪಟ್ಟವರನ್ನು ಪುರಸಭೆಗೆ ಕರೆಯಿಸಿ ಎಲ್ಲಾ  ದಾಖಲೆಗಳನ್ನು ಪರೀಶೀಲಿಸುವುದಾಗಿ ಭರವಸೆ ನೀಡಿದರು.  

ಮಹಿಳೆಯರು ನೀಡಿದ ಕೆಲವು ದಾಖಲೆಗಳು , ತಡೆಗೋಡೆಯ ಭಾವಚಿತ್ರ ಹಾಗೂ ಅರ್ಜಿಗಳನ್ನು ಪರೀಶೀಲಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ನಂತರ ಮಂಗಳವಾರ ಪುರಸಭೆ ಸದಸ್ಯರು ಹಾಗೂ ಉನ್ನತಮಟ್ಟದ ಅಧಿಕಾರಿಗಳ ತುರ್ತು ಸಭೆ ಕರೆದು ಚರ್ಚಿಸುತ್ತೇನೆ ಎಂದು ಬರವಸೆ ನೀಡಿದರು. ಪುರಸಭೆ ಸದಸ್ಯ ಪರ​‍್ಪಗೌಡ ಖೇತಗೌಡರ ಮಾತನಾಡಿ, ತೆರವುಗೊಳಿಸಿದ ತಡೆಗೋಡೆಯ ಅಕ್ಕ ಪಕ್ಕದಲ್ಲಿ ಸಾರ್ವಜನಿಕ ಪುರಾತನ ಬಾವಿ ಇಲ್ಲಿಯೇ ಇತ್ತು.

1 ಮತ್ತು 2 ನೇಯ ವಾರ್ಡಿನ ಮಹಿಳೆಯರು ಶೌಚಕ್ಕೆ ಹೋಗಲು ಮರ್ಯಾದೆಗಾಗಿ  ಸನ್ 2013-14ರಲ್ಲಿ  13ನೇ ಹಣಕಾಸು ಯೋಜನೆ ಅಡಿಯಲ್ಲಿ ತಡೆಗೋಡೆ ಮತ್ತು ಸಾರ್ವಜನಿಕ ಶೌಚಾಲಯ ಅಂದು  ನಿರ್ಮಿಸಲಾಗಿತ್ತು ಎಂದು ಮುಖ್ಯಾಧಿಕಾರಿಗಳಿಗೆ  ಜಾಗೆಯ ಹಳೆ ಮಾಹಿತಿ ಸಮಜಾಯಿಸಿ ಹೇಳಿದರು. ಸಾರ್ವಜನಿಕರ ಮೇಲೆ ಕೆಲವರು ಇಲ್ಲದ ಸಲ್ಲದ ಆರೋಪ ಮಾಡುತ್ತಾ 1 ಮತ್ತು 2ನೆಯ ವಾರ್ಡ್‌ ನ ಬಡ ಸಾರ್ವಜನಿಕರನ್ನು ಹೆದರಿಸಿ , ಬೆದರಿಸಿ, ದಬ್ಬಾಳಿಕೆ ನಡೆಸಿ ಸರಕಾರಿ ಗಾಯರಾಣ ಜಾಗೆಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ರಾಯಬಾಗ ತಹಸಿಲ್ದಾರ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ಪುರಸಭೆ ಸಿಬ್ಬಂದಿ ವರ್ಗ ಇದ್ದರು.