ಅಮ್ಮಾಜೇಶ್ವರಿ ಏತ ನೀರಾವರಿ, ಅವ್ಯವಹಾರ ಸತ್ಯಕ್ಕೆ ದೂರ: ಬಿ.ಎ. ನಾಗರಾಜ್ ಸ್ಪಷ್ಟನೆ
Allegations of malpractice in the Ammajeshwari Lift Irrigation Project are far from the truth: B.A.
ಅಥಣಿ 21: ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ನೀರಾವರಿ ನಿಗಮದ ಅಧಿಕ್ಷಕ ಅಭಿಯಂತರ ಬಿ.ಎ. ನಾಗರಾಜ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 931.35 ಕೋಟಿ ಟೆಂಡರ್ ಮೊತ್ತಕ್ಕೆ ಅನುಮೋದನೆಗೊಂಡ ಈ ಯೋಜನೆಯ ಕಾರ್ಯ ಶೇಕಡ 90ರಷ್ಟು ಪೂರ್ಣಗೊಂಡಿದ್ದು ಇನ್ನುಳಿದ 10ಅ ಕಾರ್ಯವೂ ಕೂಡ ಇಷ್ಟರಲ್ಲಿಯೇ ಪೂರ್ಣಗೊಳ್ಳಲಿದೆ ಎಂದರು. ಅಧಿಕೃತವಾಗಿ ಟೆಂಡರ್ ಪಡೆದುಕೊಂಡ ಶಂಕರ್ ನಾರಾಯಣ ಕಂಪನಿಗೆ ಇಲ್ಲಿಯವರೆಗೆ 529.90 ಕೋಟಿ ರೂಪಾಯಿಗಳಷ್ಟು ಮಾತ್ರ ಬಿಲ್ ಸಂದಾಯವಾಗಿದೆ ಆದರೂ ಸಹ ಈ ಯೋಜನೆಯಲ್ಲಿ ರೂ.700 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆದಿದೆ ಎಂದು ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದರು.
ಕೃಷಿ ಹೊಂಡಗಳ ಬದಲಿಗೆ ಪೈಪ್ ಲೈನ್: ಈ ಯೋಜನೆಯ ಪ್ರಾರಂಭದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವ ಯೋಜನೆ ಇತ್ತು ಆದರೆ 13/06/2023 ರಂದು ಕಕಮರಿಯ ಅಮ್ಮಾಜೇಶ್ವರಿ ದೇವಸ್ಥಾನದಲ್ಲಿ ಈ ಯೋಜನೆ ವ್ಯಾಪ್ತಿಯ ಎಲ್ಲ ಗ್ರಾಮಗಳ ರೈತರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕೃಷಿ ಹೊಂಡ ಬೇಕೋ ಅಥವಾ ಪೈಪ್ ಲೈನ್ ಅಳವಡಿಕೆ ಮಾಡಬೇಕೋ ಎನ್ನುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು ಕೊನೆಗೆ ಕೃಷಿ ಹೊಂಡಗಳ ಬದಲಾಗಿ ಪೈಪ್ ಲೈನ್ ಅಳವಡಿಕೆಗೆ ರೈತರು ಒಕ್ಕೂರಿಲಿನಿಂದ ಒಪ್ಪಿಗೆ ನೀಡಿದ ಪರಿಣಾಮ ಕೃಷಿ ಹೊಂಡಗಳ ಬದಲಿಗೆ ಪೈಪ್ ಲೈನ್ ಅಳವಡಿಕೆಗೆ ಅನುಮೋದನೆ ನೀಡಲಾಯಿತು ಎಂದರು.
ಈ ಯೋಜನೆಯ ಪ್ರಕಾರ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅಂದಾಜು 1200 ಎಕರೆ ಭೂಮಿಯನ್ನು ರೈತರು ಬಿಟ್ಟು ಕೊಡಬೇಕಿತ್ತು ಹೀಗಾಗಿ ರೈತರು ಕೃಷಿ ಹೊಂಡಕ್ಕಿಂತ ಪೈಪ್ಲೈನ್ ಯೋಜನೆಯ ಸೂಕ್ತ ಎಂದು ಶಾಸಕರಾದ ಲಕ್ಷ್ಮಣ ಸವದಿ ಹಾಗೂ ನೀರಾವರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಗೆ ನೀಡಿದ್ದರಿಂದ ಬದಲಾವಣೆ ಮಾಡುವುದು ಅನಿವಾರ್ಯವಾಯಿತು ಎಂದ ಅವರು ಕೃಷಿ ಹೊಂಡಗಳ ಬದಲಿಗೆ ಪೈಪ್ ಲೈನ್ ಅಳವಡಿಕೆ ಯೋಜನೆಗೆ ನೀರಾವರಿ ಇಲಾಖೆಯ ಸ್ಥಳೀಯ ಅಧಿಕಾರಿಗಳೇ ಕಾರಣ ಎನ್ನುವ ಆರೋಪ ಸುಳ್ಳು ಎಂದರು.
ಈ ಯೋಜನೆಯ ಕಾರ್ಯವು ಸಂಪೂರ್ಣವಾಗಿ ಪಾರದರ್ಶಕವಾಗಿ ಅನುಷ್ಠಾನಗೊಳ್ಳುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಕಡ್ಡಾಯವಾಗಿ ನಡೆಯುತ್ತಿದ್ದು, ಇಲ್ಲಿಯವರೆಗೂ ಸ್ವಲ್ಪವೂ ಕೂಡ ಯಾವುದೇ ಒಂದು ತಪ್ಪು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಯೋಜನೆಗೆ ನಾಬಾರ್ಡ್ ದಿಂದಲೂ ಕೂಡ 550 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದರಿಂದ ಮೇಲಿಂದ ಮೇಲೆ ನಾಬಾರ್ಡ್ ತಾಂತ್ರಿಕ ಅಧಿಕಾರಿಗಳು ಕೂಡ ಪರೀಶೀಲಿಸುತ್ತಿದ್ದಾರೆ ಜೊತೆಗೆ ನೀರಾವರಿ ಇಲಾಖೆಯ ಉನ್ನತ ಮಟ್ಟದ ತಾಂತ್ರಿಕ ಅಧಿಕಾರಿಗಳು ಕೂಡ ಆಗಾಗ ಭೇಟಿ ನೀಡಿ ಕೂಲಂಕುಷವಾಗಿ ಪರೀಶೀಲನೆ ನಡೆಸುತ್ತಿದ್ದಾರೆ ಹೀಗಾಗಿ ಯಾರಿಂದಲೂ ಲೋಪವಾಗಲು ಸಾಧ್ಯವೇ ಇಲ್ಲ ಎಂದು ನಾಗರಾಜ್ ಸ್ಪಷ್ಟಪಡಿಸಿದರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 