ಉಡುಪಿ ಜಿಲ್ಲೆಯ ಎಲ್ಲ ಗಡಿಗಳು ಸಂಪೂರ್ಣ ಬಂದ್

ಉಡುಪಿ, ಏಪ್ರಿಲ್ 11, ಉಡುಪಿ ಜಿಲ್ಲೆಯ ಎಲ್ಲ ಗಡಿಗಳನ್ನೂ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಯಾರು  ಬರುವಂತಿಲ್ಲ  ಮತ್ತು ಜಿಲ್ಲೆಯಿಂದ ಯಾರೊಬ್ಬರು  ಹೊರಗೆ ಹೋಗುವಂತಿಲ್ಲ ಜಿಲ್ಲೆಯ ನಾಲ್ಕು ಗಡಿಗಳು ಪೂರ್ಣವಾಗಿ ಬಂದ್  ಆಗಿದ್ದು, ಉ.ಕ, ದ.ಕ, ಶಿವಮೊಗ್ಗ, ಚಿಕ್ಕಮಗಳೂರು ಗಡಿಗಳು ಇದರಲ್ಲಿ ಸೇರಿಕೊಂಡಿವೆ. ಜಿಲ್ಲೆಯೊಳಗೆ ಯಾರಿಗೂ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್, ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಲಾಕ್ ಡೌನ್ ಮುಗಿಯುವ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ  ಕೈಗೊಳ್ಳಲಾಗಿದೆ ಹೊರ ಜಿಲ್ಲೆಗಳಲ್ಲಿರುವ ಜಿಲ್ಲೆಯ ಜನರು ಉಡುಪಿಗೆ ಬರಲು ತಯಾರಿ ನಡೆಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಹಾಗೆಯೇ ಉಡುಪಿಯಲ್ಲಿ ಸಿಲುಕಿರುವ ಹೊರ ಜಿಲ್ಲೆಯ ಜನರು ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ  ಮಾಹಿತಿಯ ಕಾರಣ ಜಿಲ್ಲೆಯ  ಗಡಿಗಳನ್ನು ಸೀಲ್ ಮಾಡುವ  ಕಠಿಣ ಕ್ರಮ ಕೈಗೊಳ್ಳಲಾಗಿದೆ.ಸದ್ಯ ಉಡುಪಿ ಸುರಕ್ಷಿತವಾಗಿದೆ. ಹೊರ ಜಿಲ್ಲೆಯಿಂದ ಸೋಂಕು ಬರುವ ಅಪಾಯ ಬೇಡ. ಹಾಗಾಗಿ ಗಡಿ ಸೀಲ್ ಡೌನ್ ಮಾಡಿ ಯಾರು ಒಳಕ್ಕೆ ಬರದಂತೆ  ಮತ್ತು ಹೊರ ಹೋಗದಂತೆ  ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ .