2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನೇಕಾರ ಸಮುದಾಯಕ್ಕೆ 5-6 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು
All political parties should give tickets to the weaver community in 5-6 constituencies in the 2028
ರಾಣೇಬೆನ್ನೂರು 28: ರಾಜ್ಯದಲ್ಲಿ 52 ಲಕ್ಷ ನೇಕಾರ ಸಮಾಜದ ಜನರಿದ್ದು ಸ್ವಂತ ಬಲದಿಂದ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದ್ದು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಮ್ಮ ಸಮಾಜಕ್ಕೆ ಕನಿಷ್ಠ 5-6 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಂಟಪದಲ್ಲಿ ಶನಿವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಶ್ರೀ ದೇವರ ದಾಸಿಮಯ್ಯ ಉತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನೇಕಾರ ಸಂತ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತ್ಯುತ್ಸವದ ಅಂಗವಾಗಿ ಏರಿ್ಡಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನೇಕಾರ ಸಮಾಜ ಬೆಳೆಯಬೇಕಾದರೆ ಇತರೆ ಸಮಾಜದವರು ಕೂಡ ಒಗ್ಗೂಡಬೇಕು. ಯಡಿಯೂರ್ಪ ಸಿಎಂ ಆಗಿದ್ದ ವೇಳೆ ಹತ್ತಾರು ಕೋಟಿ ಅನುದಾನ ನೀಡಿ ದಾಸಿಮಯ್ಯ ಹುಟ್ಟೂರಿನಲ್ಲಿ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಿದರು ಎಂದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಯಡಿಯೂರ್ಪ ಸಿಎಂ ಆಗಿದ್ದ ಸಮಯದಲ್ಲಿ ನಾಡಿನ ರೈತ ಮತ್ತು ನೇಕಾರ ಎರಡು ಕಣ್ಣುಗಳು ಎಂದು ಪರಿಭಾವಿಸಿ ನೇಕಾರರಿಗೆ ಉಚಿತ ವಿದ್ಯುತ್ ನೀಡಿದ್ದರು. ದೇವರ ದಾಸಿಮಯ್ಯ ಜಯಂತಿ ಸರ್ಕಾರದ ವತಿಯಿಂದ ಆಚರಿಸುವಂತೆ ಯಡಿಯೂರ್ಪ ಮಾಡಿದರು. ಯಾರೇ ಚುನಾವಣೆಗೆ ಸ್ಪರ್ಧಿಸಲಿ, ನೇಕಾರರು ನಮಗೆ ಬೇಕು. ಸಮಾಜದ ಅಭಿವೃದ್ಧಿಗೆ ಯಾವಾಗಲೂ ಕಟ್ಟಿಬದ್ಧವಾಗಿದ್ದೇವೆ ಎಂದರು.
ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿ, ಸಮಾನತೆ ಕೂಗು ಹಿಂದಿನಿಂದಿಲೂ ಬಂದಿದೆ. ನೇಕಾರ ದ್ವನಿ ಹೆಚ್ಚಿಸುವ ಕೆಲಸವಾಗಬೇಕಿದೆ. ಸಮಾಜ ಸಂಘಟನೆಯಾದಾಗ ಮಾತ್ರ ಆರ್ಥಿಕ, ಸಾಮಾಜಿಕ, ರಾಜಕೀಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ, ದೇವರ ದಾಸಿಮಯ್ಯ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿದರು. ನಗರದ ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕುರುಹಿನಶೆಟ್ಟಿ ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ಹರೀಶಕುಮಾರ, ಜಿಲ್ಲಾ ನೇಕಾರ ಮಹಿಳಾ ಸಮುದಾಯಗಳ ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ ಏಕಬೋಟೆ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಪಟ್ಟಸಾಲಿ ಸಮಾಜದ ಅಧ್ಯಕ್ಷ ರಮೇಶ ಗುತ್ತಲ, ಪದ್ಮಸಾಲಿ ಸಮಾಜದ ಅಧ್ಯಕ್ಷ ಕರಬಸಣ್ಣ ಕಡ್ಲಿಬಾಳ, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಬಸವರಾಜ ಮೈಲಾರ, ತೋಗಟವೀರ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಬ್ಯಾಡಗಿ, ವೆಂಕಟೇಶ ಕಾಕಿ, ಲಕ್ಷ್ಮೀಕಾಂತ ಹುಲಗೂರ, ವೆಂಕಟೇಶ ಕಾಕಿ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕಿ ಲಕ್ಷ್ಮೀ ಅಡಕಿ ಉಪನ್ಯಾಸ ನೀಡಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷ ಹನುಮಂತಪ್ಪ ಕಾಕಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಸದಸ್ಯರಾದ ಯುವರಾಜ ಬಾರಾಟಕ್ಕಿ, ಗೀರೀಶ ಗುಳೇದಗುಡ್ಡ, ಲಿಂಗರಾಜ ಬೂದನೂರ, ಪ್ರೀತಂ ಬಜ್ಜಿ, ಕರಬಸಪ್ಪ ನೀಲಗುಂದ, ಪ್ರಕಾಶ ಅಗಡಿ, ಈರಣ್ಣ ಕುದರಿ, ಅರವಿಂದ ಏಕಬೋಟೆ ಸೇರಿದಂತೆ ಮತ್ತಿತರರಿದ್ದರು. ಇದಕ್ಕೂ ಪೂರ್ವದಲ್ಲಿ ನಗರದ ದೊಡ್ಡಪೇಟೆ ಅಂಭಾಭವಾನಿ ದೇವಸ್ಥಾನದ ಬಳಿಯಿಂದ ಹೊರಟ ದೇವರ ದಾಸಿಮಯ್ಯ ಭಾವಚಿತ್ರದ ಮೆರವಣಿಗೆ ಎಡಿಬಿ ಸರ್ಕಲ್, ಎಂ.ಜಿ.ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಕಾಕಿಗಲ್ಲಿ, ನಾಡಿಗ್ಗೇರ ಓಣಿ, ಹಳೇ ಪಿ.ಬಿ.ರಸ್ತೆ, ದೇವರ ದಾಸಿಮಯ್ಯ ಸರ್ಕಲ್ ಮಾರ್ಗವಾಗಿ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 