ಇರಾನ್ ವಿರುದ್ಧದ ಯಾವುದೇ ಕಾರ್ಯಾಚರಣೆಯ ವಿರುದ್ಧ ಎಲ್ಲಾ ಅಗತ್ಯ ಕ್ರಮ; ವಿಶ್ವಸಂಸ್ಥೆಗೆ

ಇರಾನ್ವಿಶ್ವಸಂಸ್ಥೆ, ಜ. 8 ಇರಾನ್, ತನ್ನ ವಿರುದ್ಧದ ಯಾವುದೇ ಬೆದರಿಕೆ ಅಥವಾ ಕಾರ್ಯಾಚರಣೆಯ ವಿರುದ್ಧ ಎಲ್ಲಾ ಅಗತ್ಯ ಮತ್ತು ಪ್ರಮಾಣಾನುಸಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿಶ್ವಸಂಸ್ಥೆಯ ಇರಾನಿನ ರಾಯಭಾರಿ ಮಜೀದ್ ತಖ್ತ್ ರವಾಂಚಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಭದ್ರತಾ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮತ್ತು ಸ್ವರಕ್ಷಣೆಗಾಗಿ ಅದರ ಅಂತರ್ಗತ ಹಕ್ಕನ್ನು ಚಲಾಯಿಸುವಲ್ಲಿ, ಇರಾನ್ ಯಾವುದೇ ಬೆದರಿಕೆ ಅಥವಾ ಬಲದ ಬಳಕೆಯ ವಿರುದ್ಧ ಅಗತ್ಯ ಮತ್ತು ಪ್ರಮಾಣಾನುಗುಣವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಾವಂಚಿ ಮಂಗಳವಾರ ಹೇಳಿದ್ದಾರೆ.ಅಮೆರಿಕದ ಬೆದರಿಕೆಗಳು ಮತ್ತು ನೀತಿಗಳನ್ನು ಬಲವಾಗಿ ಖಂಡಿಸಬೇಕು ಮತ್ತು ಅದರ "ತಪ್ಪು" ಕೃತ್ಯಗಳಿಗೆ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ರಾವಂಚಿ ಭದ್ರತಾ ಮಂಡಳಿಗೆ ಕರೆ ನೀಡಿದರು. ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾಕ್ , ಅಮೆರಿಕದ ಎರಡು ಸೇನಾ ನೆಲೆಗಳಲ್ಲಿ ಒಂದು ಡಜನ್ಗೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿತ್ತು.