ಎಲ್ಲ ಮಕ್ಕಳು ತಮ್ಮ ತಂದೆ ತಾಯಿಯನ್ನು ಪ್ರೀತಿಯಿಂದ ಕಾಣಬೇಕು -ಸಿ ಆರ್ ಲಕ್ಕುಂಡಿಮಠ
All children should treat their parents with love – C.R. Lakkundimath
ಲಕ್ಷೇಶ್ವರ 26: ಎಲ್ಲ ಮಕ್ಕಳು ತಮ್ಮನ್ನು ಹೆತ್ತ ತಂದೆ ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು ಅವರು ಪಟ್ಟ ಪರಿಶ್ರಮದಿಂದ ನೀವು ಉತ್ತಮ ನಾಗರಿಕರಾಗಿ ಬೆಳೆದಿದ್ದೀರಿ ನಿಮ್ಮ ಉತ್ತಮ ಬೆಳವಣಿಗೆಗಾಗಿ ಅವರು ತಮ್ಮ ಜೀವನವನ್ನೇ ಶ್ರಮಿಸಿದ್ದಾರೆ ಅವರನ್ನು ಪ್ರೀತಿಯಿಂದ ಕಾಣಿ ಎಂದು ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕ ಅಧ್ಯಕ್ಷ ಸಿ ಆರ್ ಲಕ್ಕುಂಡಿ ಮಠ ಹೇಳಿದರು. ಅವರು ಪಟ್ಟಣದ ಬಾಳಿಕಾಯಿ ಅವರ ಜೀನಿನ ಆವರಣದಲ್ಲಿ ಗುರುವಾರ ಜರುಗಿದ ಸಂಘದ ಮಾಸಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ’ಸಂಘದಲ್ಲಿ ಈವರೆಗೆ ನೂರಾರು ಹಿರಿಯರು ಸದಸ್ಯತ್ವ, ಪಡೆದುಕೊಂಡಿದ್ದು ಅವರಿಗೆ ಸಂಘದ ವತಿಯಿಂದ ಗುರುತಿನ ಚೀಟಿ ವಿತರಿಸಲಾಗಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳು ಅನುಷ್ಠಾನಕ್ಕೆ ಬರಲಿದ್ದು ಅವುಗಳ ಸೌಲಭ್ಯ ಪಡೆದುಕೊಳ್ಳಲು ಸಹಕಾರ ನೀಡಲಾಗುವುದು’ ಎಂದು ಹೇಳಿದ ಅವರು ’ಕಳೆದ ಮೂರು ತಿಂಗಳಿಂದ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಬರಬೇಕಾದ ಪಿಂಚಣಿ ಹಣ ಬಂದಿಲ್ಲ. ಕಾರಣ ಹಣ ಬಾರದವರು ಸಂಘಕ್ಕೆ ಅರ್ಜಿ ಕೊಡಬೇಕು’ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಚಂದ್ರಶೇಖರ ಸವದತ್ತಿ ಮಾತನಾಡಿ ’ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದನ್ನು ಯಾರೂ ಮರೆಯಬಾರದು, ಎಲ್ಲರೂ ಒಂದಾಗಿದ್ದರೆ, ಯಾವುದೇ ಕೆಲಸವನ್ನಾದರೂ ಸಾಧಿಸಲು ಸಾಧ್ಯ’ ಎಂದ ಅವರು ’ಸಂಘದ ಚಟುವಟಿಕೆಗಳನ್ನು ನಡೆಸಲು ಸ್ಥಳದ ಅಗತ್ಯ ಇದ್ದು ಪುರಸಭೆ ಸ್ಥಳವನ್ನು ಒದಗಿಸಿಕೊಡಬೇಕು’ ಎಂದು ಆಗ್ರಹಿಸಿದರು.
ನಿವೃತ್ತ ಉಪನ್ಯಾಸಕಿ ಸುವರ್ಣ ಹಿರೇಮಠ ಮಾತನಾಡಿ, ’ಹಿರಿಯ ನಾಗರಿಕರು ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವುದನ್ನು ಕಲಿಯಬೇಕು. ವಯಸ್ಸಾದ ಮೇಲೆ ಬೇರೆಯವರ ಆಶ್ರಯ ಬೇಕೇಬೇಕು ಎಂಬುದನ್ನು ಮರೆಯಬಾರದು’ ಎಂದರು.ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಅಳಗವಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಐ.ಎಸ್, ಮಡಿವಾಳರ, ನಿವೃತ್ತ ಶಿಕ್ಷಕ ಎಲ್.ಆರ್. ಮಲ್ಲಸಮುದ್ರ, ಪವಾಡಶೆಟ್ಟಿ, ಚನ್ನಪ್ಪ ಕೋಲಕಾರ, ವಾಲಿಶೆಟ್ಟರ, ಡಾ.ಎಸ್.ಜಿ. ಹೂವಿನ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಜೂನ್ ತಿಂಗಳಲ್ಲಿ ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಹಿರಿಯರ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಲಾಗಿತ್ತು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 