ಆಕಾಶವಾಣಿ ವಾಕಥಾನ್ ಚಾಲನೆ
All India Radio Walkathon launched
ಲೋಕದರ್ಶನ ವರದಿ
ಕಾರವಾರ ಮೇ.15: ಆಕಾಶವಾಣಿ 90ರ ವರ್ಷಾಚರಣೆಯ ಅಂಗವಾಗಿ ಕಾರವಾರ ಆಕಾಶವಾಣಿ ಕೇಂದ್ರವು ರವೀಂದ್ರ ಠಾಗೋರ್ ಕಡಲ ತೀರದಲ್ಲಿ ಹಮ್ಮಿಕೊಂಡಿದ್ದ ಸಮೂಹ ನಡಿಗೆಗೆ ಕಾರವಾರದ ಅವರ್ ಸೋಷಿಯಲ್ ಗುಡ್ ಸಂಸ್ಥೆಯ ಪವನ್ ಸಾವಂತ್, ಬ್ರಹ್ಮಕುಮಾರಿ ಈಶ್ವರೀಯವಿಶ್ವ ವಿದ್ಯಾಲಯದ ಜಿಲ್ಲಾ ಸಂಯೋಜಕಿ ಬಿ.ಕೆ.ಕವಿತಾ ಹಾಗೂ ಆಕಾಶವಾಣಿ ಕಾರವಾರ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಟಿ.ಶ್ಯಾಮ ಪ್ರಸಾದ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ನಡಿಗೆಯು ಠಾಗೋರ್ ಕಡಲ ತೀರದಿಂದ ಆರಂಭಗೊಂಡು ಹೆಂಜಾ ನಾಯ್ಕ ವೃತ್ತ, ಕೋಡಿಭಾಗ್ ರಸ್ತೆಯ ಮೂಲಕ ಸಾಗಿ ಬಂದ ಮೆರವಣಿಗೆ ಆಕಾಶವಾಣಿ ಕಾರವಾರ ಕಚೇರಿ ಆವರಣದಲ್ಲಿ ಸಮಾಪನಗೊಂಡಿತು. ದಾರಿಯುದ್ದಕ್ಕೂ ಆಕಾಶವಾಣಿ-ಮಧುರವಾಣಿ,ಉಲಿ-ಬಾನುಲಿ, ಆಕಾಶವಾಣಿ-ನಮ್ಮ ವಾಣಿ ಮೊದಲಾದ ಉದ್ಘೋಷಗಳು ಮೊಳಗಿದವು. ಕಾರ್ಯಕಮದಲ್ಲಿ ಕಾರವಾರದ ಆಕಾಶವಾಣಿ ಸಿಬ್ಬಂದಿ, ಕಾರ್ಯಕ್ರಮ ಸಹಾಯಕರು, ರೋಟರಿ ಕಾರವಾರ,ಅವರ್ ಸೋಷಿಯಲ್ ಗುಡ್ ಸಂಸ್ಥೆ ಹಾಗೂ ಇನ್ನಿತರರು ಸೇರಿದಂತೆ 100ಕ್ಕೂ ಹೆಚ್ಚು ಜನರು ನಡಿಗೆಯಲ್ಲಿ ಭಾಗವಹಿಸಿದರು.ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 