ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ದೇಶದಾದ್ಯಂತ ಗ್ರಾಹಕರ ಆಂದೋಲನ

 	ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ದೇಶದಾದ್ಯಂತ ಗ್ರಾಹಕರ ಆಂದೋಲನ All India Electricity Users Association Consumer Movement across the country

ಲೋಕದರ್ಶನ ವರದಿ 

ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ದೇಶದಾದ್ಯಂತ ಗ್ರಾಹಕರ ಆಂದೋಲನ 


ಧಾರವಾಡ 13 : ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ದೇಶದಾದ್ಯಂತ ಗ್ರಾಹಕರ ಆಂದೋಲನವನ್ನು ಬೆಳೆಸುತ್ತಿದೆ. ಅದರ ಭಾಗವಾಗಿ ದೇಶದ 4 ಭಾಗಗಳಲ್ಲಿ ವಲಯವಾರು ಸಮಾವೇಶವನ್ನು ಸಂಘಟಿಸುತ್ತಿ ದಕ್ಷಿಣ ಭಾರತ ವಲಯ ಸಮಾವೇಶವನ್ನು ಅಕ್ಟೋಬರ್ 26, 2025 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಸಂಘಟಿಸಲಾಗುತ್ತಿದೆ. ತನ್ಮೂಲಕ ಖಾಸಗೀಕರಣ ಮತ್ತು ಸ್ಮಾರ್ಟ್‌ ಮೀಟರ್ ವಿರುದ್ಧ ಹೋರಾಟವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಆಂಧ್ರ​‍್ರದೇಶ, ಕೇರಳ, ಕರ್ನಾಟಕ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಬುದ್ಧಿಜೀವಿಗಳು, ಗ್ರಾಹಕರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 

 ದೆಹಲಿಯಲ್ಲಿ ನಡೆದಂತಹ ಐತಿಹಾಸಿಕ ರೈತ ಹೋರಾಟದಲ್ಲಿ ಲಕ್ಷಾಂತರು ರೈತರು ಮೂರು ಕರಾಳ ಕೃಷಿ ಕಾಯ್ದೆಯ ಜೊತೆಗೆ ವಿದ್ಯುತ್ ಕಾಯ್ದೆ 2020 ನ್ನು ವಿರೋಧಿಸಿತ್ತು. ವಿದ್ಯುತ್ ಕಾಯ್ದೆಯನ್ನು ವಾಪಸ್ಸು ಪಡೆಯುತ್ತೇವೆಂದು ಕೇಂದ್ರ ಸರ್ಕಾರ ಭರವಸೆ ನೀಡಿ ದೇಶದ ರೈತರಿಗೂ ಸರ್ಕಾರ ಮೋಸಮಾಡಿದೆ. ಹಾಗಾಗಿ ಈ ಹೋರಾಟಕ್ಕೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯೂ (ಂಋಏಒಖ) ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. 


ವಿದ್ಯುತ್ ಜನರ ಹಕ್ಕು ಶ್ರಿ ಅದು ಅತ್ಯಗತ್ಯ ಸೇವೆ. ಅದನ್ನು ಲಾಭಕೋರರ ವ್ಯಾಪಾರದ ಸರಕಾಗಲು ಬಿಡಬಾರದು. ದೇಶ ಸ್ವತಂತ್ರಗೊಂಡ ತರುವಾಯದಲ್ಲಿ ವಿದ್ಯುತ್‌ಅನ್ನು ಉತ್ಪಾದಿಸಿ, ಲಾಭ ಮತ್ತು ನಷ್ಟ ನೋಡದೇ ಅದನ್ನು ಕಟ್ಟಕಡೆಯ ಗ್ರಾಹಕರಿಗೂ ಲಭಿಸುವಂತೆ ಕನಿಷ್ಠ ದರದಲ್ಲಿ ಒದಗಿಸುವುದು ಸರ್ಕಾರಗಳ ಬಾದ್ಯತೆಯಾಗಿತ್ತು. ಆದರೆ 90ರ ದಶಕದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಮೇಲೆ ಈ ಧೋರಣೆಯು ಬದಲಾಯಿತು. 2003 ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರುವುದರ ಮೂಲಕ ಖಾಸಗಿ ಕಂಪನಿಗಳಿಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿ ಅವಕಾಶ ಮಾಡಿ ಕೊಡಲಾಯಿತು. ಶೇಕಡಾ 50 ಕ್ಕೂ ಹೆಚ್ಚು ವಿದ್ಯುತ್ ಉತ್ಪಾದನೆ ಈಗ ಖಾಸಗಿಯವರ ಹಿಡಿತದಲ್ಲಿದೆ.  ಇತ್ತೀಚೆಗೆ ವಿದ್ಯುತ್‌ಚ್ಯಕ್ತಿ ಮಸೂದೆ 2022 ಮೂಲಕ ಹೊಸ ತಿದ್ದುಪಡಿ ಮಾಡಿ ಜನರ ವಿರೋಧದ ನಡುವೆಯೂ ಸಂಸತ್ತಿನಲ್ಲಿ ತರಾತುರಿಯಲ್ಲಿ ಮಂಡಿಸಿ ಕಾಯ್ದೆ ತರಲು ಯತ್ನಿಸಿ, ಸರಬರಾಜನ್ನು ಸಹ ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಲು ಕೇಂದ್ರ ಸರ್ಕಾರ ಹೊರಟ್ಟಿದ್ದು ನಮಗೆ ತಿಳಿದಿದೆ. ಈ ನೀತಿಗೆ ಎಲ್ಲಾ ರಾಜ್ಯ ಸರ್ಕಾರಗಳ ಸಹಮತವೂ ಇದೆ. ಚಂಡಿಘಡ ಹಾಗೂ ಪುದುಚೆರಿಯಲ್ಲಿ ಕಾಯ್ದೆಯಿಲ್ಲದಿದ್ದರೂ ಆಡಳಿತ ಕ್ರಮದ ಮೂಲಕ ಜಾರಿಗೆ ತರಲಾಗಿದೆ. ದಕ್ಷಿಣ ರಾಜ್ಯಗಳು ಇದಕ್ಕೆ ಹೊರತಾಗಿರದೆ ಹಿಂಬಾಗಿಲ ಮೂಲಕ ಈ ಕ್ರಮಗಳನ್ನು ಜಾರಿಗೆ ತರಲು ಹವಣಿಸುತ್ತಿವೆ. ಅದರ ಭಾಗವಾಗಿಯೇ ಸ್ಮಾರ್ಟ್‌ ಮೀಟರ್, ಪ್ರಿ ಪೈಡ್ ಮೀಟರ್ ಮತ್ತು ಟಿಓಡಿ ಎಂಬ ಹೊಸ ಕ್ರಮಗಳನ್ನು ಜಾರಿಗೆ ತರಲು ಹೊರಟಿದ್ದಾರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು, ಜನರ ತೀವ್ರ ಪ್ರತಿಭಟನೆಗಳಿಂದಾಗಿ ಸ್ಮಾರ್ಟ್‌ ಮೀಟರ್ ಅಳವಡಿಸುವ ಯತ್ನದಿಂದ ಹಿಮ್ಮೆಟ್ಟಬೇಕಾಯಿತು. ಉತ್ತರ​‍್ರದೇಶ, ಕಾಶ್ಮೀರ, ಪುದುಚೆರಿ, ಮಹರಾಷ್ಟ್ರ, ಪಂಜಾಬ್, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಸ್ವತಃ ನೌಕರರು ಬೀದಿಗಿಳಿದು ಈ ಖಾಸಗೀಕರಣ ಕ್ರಮದ ವಿರುದ್ಧ ಬೃಹತ್ ಹೋರಾಟವನ್ನು ಬೆಳೆಸುತ್ತಿರುವುದು ಆಶಾದಾಯಕ ವಿಷಯವಾಗಿದೆ. 

ನಮ್ಮ ರಾಜ್ಯದಲ್ಲಿ ಸಹ ಸರ್ಕಾರ ಸ್ಮಾರ್ಟ್‌ ಮೀಟರ್ ಅಳವಡಿಕೆಗೆ, ವಾಣಿಜ್ಯ ದರ ಏರಿಕೆ, ಫಿಕ್ಸ್‌ ದರ ಏರಿಕೆ ಕ್ರಮಕ್ಕೆ ಮುಂದಾಗಿದೆ. ಅಲ್ಲದೇ ನೌಕರರಿಗೆ ಗ್ರಾಚ್ಯೂಟಿ ಕೊಡಬೇಕಾದ ತನ್ನ ಜವಬ್ದಾರಿಯಿಂದ ನುಣುಚಿಕೊಂಡು ಅದನ್ನು ಪ್ರತಿ ಯೂನಿಟ್‌ಗೆ ರೂ0.36 ಪೈಸೆ ದರ ವಿಧಿಸುವ ಮೂಲಕ ಗ್ರಾಹಕರ ಹೆಗಲಿಗೆ ವರ್ಗಾಯಿಸಿ ಇನ್ನಷ್ಟು ಅವರ ಹೊರೆಯನ್ನು ಹೆಚ್ಚಿಸಿದೆ. ಸ್ಮಾರ್ಟ್‌ ಮೀಟರ್ ಅಳವಡಿಸಿರುವ ಕಡೆಗಳಲ್ಲಿ ಬಳಕೆಯಲ್ಲಿ ಏನೂ ವ್ಯತ್ಯಾಸವಿರದಿದ್ದರೂ ವಿದ್ಯುತ್ ಬಿಲ್ ಹೆಚ್ಚಾಗಿದೆಯೆಂದು ತಿಳಿದು ಬಂದಿದೆ. ಅಂತೆಯೇ ಅಲ್ಲೆಲ್ಲಾ ಪ್ರತಿಭಟನೆಗಳು ನಡೆಯುತ್ತ್ದಿವೆ. ಮೊದಲು ವಿದ್ಯುತ್ ಬಳಸಿ ನಂತರ ಹಣ ಪಾವತಿಸಲಾಗುತ್ತಿತ್ತು; ಈಗ ಮೊದಲು ಹಣ ಕಟ್ಟಿದ ಮೇಲೆ ವಿದ್ಯುತ್ ದೊರೆಯುತ್ತದೆ.ಈ ಯೋಜನೆಯಿಂದ ಕ್ರಾಸ್ ಸಬ್ಸಿಡಿ ತೆಗೆದುಹಾಕಿ, ಅದನ್ನು ಫಲಾನುಭವಿಗಳಿಗೆ ನೇರ ವರ್ಗಾವಣೆ (ಆಃಖಿ) ಮೂಲಕ ನೀಡುವರಂತೆ ಶ್ರಿ ಈಗಾಗಲೇ ಎಲ್‌ಪಿಜಿ ಅಡುಗೆ ಅನಿಲಕ್ಕೆ  ಸಬ್ಸಿಡಿ ಕೊಡುವುದಾಗಿ ನಂಬಿಸಿ ಪಂಗನಾಮ ಹಾಕಿದ್ದನ್ನು ಮರೆಯಲಾದೀತೆ? ಅಂತೆಯೇ ಸ್ಮಾರ್ಟ್‌ ಮೀಟರ್‌ಗಾಗಿ ಡಿಪೋಸಿಟ್ ಹಣ, ನಿರ್ವಹಣೆ, ಸೇವೆ ಇತ್ಯಾದಿ ಹೆಚ್ಚಿನ ಹಣಕಾಸಿನ ಹೊರೆ ಗ್ರಾಹಕರಿಗೆ ತಗಲುವುದರಿಂದ, ಫ್ರೀಪೇಯ್ಟ್‌ ಹಣ ಮುಗಿದ ತಕ್ಷಣ ವಿದ್ಯುತ್ ಕಡಿತವಾಗುವುದರಿಂದ, ಗ್ರಾಹಕರ ಒಪ್ಪಿಗೆಯಿಲ್ಲದೆ ಅಳವಡಿಸುವುದರಿಂದ, ಗ್ರಾಹಕರ ಮಾಹಿತಿಯ ದುರುಪಯೋಗ ಸಾಧ್ಯತೆಯಿರುವ ಎಲ್ಲಾ ಕಾರಣಗಳಿಂದ ನಾವು ಈ ಸ್ಮಾರ್ಟ್‌ ಮೀಟರ್ ಅಳವಡಿಕೆ ವಿರೋಧಿಸಬೇಕಿದೆ.    

 ಸರ್ಕಾರಗಳು ದಿನದ ಸಮಯದ ಪ್ರಕಾರ (ಖಿಓಆ) ದರವನ್ನು ಕೂಡ ಜಾರಿಗೊಳಿಸುತ್ತಿವೆ. ಹಗಲು ಹೊತ್ತಿನ ನಂತರದ ಪೀಕ್ ಅವಧಿಯಲ್ಲಿ ದರ 10-20ಅ ಹೆಚ್ಚಾಗುತ್ತದೆ. ಈ ಅನ್ಯಾಯದ ದರ ಹೆಚ್ಚಳದಿಂದ ಬಡವರ ಮೇಲೆ ಮತ್ತಷ್ಟು ಹೆಚ್ಚಿನ ಹೊರೆ ಬೀಳುತ್ತದೆ. 

ಆದ್ದರಿಂದ, ಈ ದಕ್ಷಿಣ ಭಾರತ ವಲಯ ವಿದ್ಯುತ್ ಬಳಕೆದಾರರ ಸಮಾವೇಶವನ್ನು ನಡೆಸುವ ಅತಿಥೇಯ ರಾಜ್ಯವಾಗಿ ಇದನ್ನು ಯಶಸ್ವಿಗೊಳಿಸಲು ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಕರು, ಸಣ್ಣ ವ್ಯಾಪಾರಿಗಳು, ಹಿರಿಯ ನಾಗರಿಕರು ಇತ್ಯಾದಿ ಎಲ್ಲಾ ಪ್ರಜ್ಞಾವಂತ ಜನರು ಎಲ್ಲಾ ರೀತಿಯ ಸಹಾಯ-ಸಹಕಾರ ನೀಡಲು ಮುಂದೆ ಬರಬೇಕೆಂದು  ಂಋಅಂ ಗೆ ಸಂಯೋಜಿತವಾದ  ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘವು ಮನವಿ ಮಾಡುತ್ತದೆ.