ಗ್ರಾಮದಲ್ಲಿ ಮದ್ಯಪಾನ, ಮಟ್ಕಾ, ಇಸ್ಪೇಟ್ ನಿಷೇಧ
Alcohol, matka banned in the village
ಲೋಕದರ್ಶನ ವರದಿ
ಕಾರಟಗಿ 30: ಕಾರಟಗಿ ತಾಲ್ಲೂಕಿನ ಸಿದ್ದಾಪುರ ಸಮೀಪದ ಉಳೇನೂರು ಗ್ರಾಮದಲ್ಲಿ ಮದ್ಯಪಾನ, ಮಟ್ಕಾ ಮತ್ತು ಇಸ್ಪೇಟ್ ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡ ಊರಿನ ನಾಗರಿಕರು.
ಉಳೇನೂರಿನಲ್ಲಿ ಕಳೆದ ಭಾನುವಾರ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸಭೆಯಲ್ಲಿ ಮಧ್ಯಪಾನವನ್ನು ಯಾರು ಕೂಡ ಊರಲ್ಲಿ ಮಾರ ಕೂಡದು ಮತ್ತು ಮಟ್ಕಾ ಹಾಗೂ ಇಸ್ಪೇಟ್ ಗಳನ್ನು ಆಡಕೂಡದು. ಹಾಗೇ ಗ್ರಾಮಸ್ಥರು ಯಾರು ಸಹ ಇಂತಹ ದುಶ್ಚಟಗಳನ್ನು ಬೆಂಬಲಿಸುವ ಕಾರ್ಯವನ್ನು ಮಾಡಬಾರದು ಎಂದು ಉಳೇನೂರು ಗ್ರಾಮದ ಹಿರಿಯರು ಮತ್ತು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದರು. ಮಟ್ಕಾ ಹಾಗೂ ಇಸ್ಪೇಟ್ ಆಟದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ ಇನ್ನೂ ಮಧ್ಯಪಾನ ದುಶ್ಚಟಕ್ಕೆ ಹಲವರು ದಾಸರಾಗುತ್ತಿದ್ದು ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುಶ್ಚಟಕ್ಕೆ ಯಾರೊಬ್ಬರೂ ಸಹ ಬಲಿಯಾಗಬಾರದು ಗ್ರಾಮಸ್ಥರೆಲ್ಲರು ನೆಮ್ಮದಿಯ ಜೀವನ ನಡೆಸಬೇಕು. ಇದಕ್ಕಾಗಿ ನಾವೆಲ್ಲರೂ ಈ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಗತ್ ಸಿಂಗ್ ನೇತಾಜಿ ಮುಂತಾದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡ ಅನೇಕ ಯುವಕರು ಈ ಕಾರ್ಯಕ್ಕೆ ಮುಂದೆ ಬಂದು ಊರಿನ ಹಿರಿಯರ ಸಮ್ಮುಖದಲ್ಲಿ ಎಲ್ಲಾ ಊರಿನ ಜನರ ಸಭೆಯನ್ನು ಸೇರಿಸಿ ಈ ನಿರ್ಧಾರವನ್ನು ಕೈಗೊಂಡರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 