ಅಕ್ಕಮಹಾದೇವಿಯ ಹಾಗೂ ಜಗಜ್ಯೋತಿ, ವಿಶ್ವಗುರು ಗುರುಬಸವಣ್ಣನವರ ಜಯಂತೋತ್ಸವ

ಅಕ್ಕಮಹಾದೇವಿಯ ಹಾಗೂ ಜಗಜ್ಯೋತಿ, ವಿಶ್ವಗುರು ಗುರುಬಸವಣ್ಣನವರ ಜಯಂತೋತ್ಸವ Akka Mahadevi and Jagajyoti, the birth anniversary of Vishwaguru Guru Basavanna

ಲೋಕದರ್ಶನ ವರದಿ 

ಹುಬ್ಬಳ್ಳಿ 27: ಅಕ್ಷಯ ಕಾಲೋನಿಯ ಮಹಾಶರಣೆ ಗಂಗಾಂಬಿಕಾ ಬಳಗದವರು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀ  ಶಕ್ತಿಯ ಪ್ರತಿಪಾದಕಿಯಾಗಿ, ಮಹಾನ್ ಸಾಧಕಿ, ಕನ್ನಡದ ​‍್ರ​‍್ರಥಮ ಕವಯಿತ್ರಿ, ವೈರಾಗ್ಯನಿಧಿ, ಶಿವಶರಣೆ ಅಕ್ಕಮಹಾದೇವಿಯ ಜಯಂತಿ ಹಾಗೂ ಜಗಜ್ಯೋತಿ, ವಿಶ್ವಗುರು,  ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಗುರುಬಸವಣ್ಣನವರ 893ನೇ. ಜಯಂತೋತ್ಸವ ಮತ್ತು ವಚನ ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ  ಹಾಗೂ ವೈರಾಗ್ಯನಿಧಿ, ಶಿವಶರಣೆ ಅಕ್ಕಮಹಾದೇವಿಯ ಅವರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.  ವಚನ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಹಿಂದೂಸ್ತಾನಿ ಸಂಗೀತ್ ಕಲಾವಿದೆ,  ಕೆಸಿಡಿ  ಯ ವಿದ್ಯಾರ್ಥಿನಿ  ಶಿವಾನಿ ಕವಠೇಕರ್  ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಅಭಿಮಾನದಿಂದ  ಶಾಲು, ಮಾಲಾರೆ​‍್ಣ ಮಾಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ,  ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಿ ನೆರವೇರಲಿ, ಸಂಗೀತ  ಕ್ಷೇತ್ರದಲ್ಲಿ  ಅಪಾರ ಸಾಧನೆ  ಮಾಡಲಿ ಎಂದು  ಶುಭ ಕೋರಿದರು.