ಶೂನ್ಯ ಸಂಪಾದನಾ ಹುಣಸಿಕೂಳ್ಳ ಮಠದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ
Akka Mahadevi Jayanti celebrated at Zero Income Hunasikulla Math
ಯಮಕನಮರಡಿ 03: ಸ್ಥಳೀಯ ಶೂನ್ಯ ಸಂಪಾದನಾ ಹುಣಸಿಕೊಳ್ಳ ಮಠದಲ್ಲಿ ದಿನಾಂಕ್ 2ರಂದು 12ನೇ ಶತಮಾನದಲ್ಲಿ ಆಗಿಹೋದ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು ಶ್ರೀಮಠದ ಉತ್ತರಾಧಿಕಾರಿಗಳಾದ ಪರಮಪೂಜ್ಯ ಸಿದ್ದ ಬಸವ ದೇವರು ಉತ್ತರಾಧಿಕಾರಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಮಹಿಳೆಯರು ಅಭಯ್ ಅಲ್ಲ ಅವರು ಕ್ರಾಂತಿಕಾರಿ ಮಹಿಳೆಯರು 12ನೇ ಶತಮಾನದಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ ತೋರಿಸುವಲ್ಲಿ ಯಶಸ್ವಿಯಾಗಿರುವ ಶಿವಶರಣೆ ಅಕ್ಕಮಹಾದೇವಿಯನ್ನು ನಾವು ನಿತ್ಯವೂ ಸ್ಮರಿಸಬೇಕು ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು .
ಅವರ ವಚನಗಳನ್ನು ನಿತ್ಯವೂ ನಾವು ಅವುಗಳನ್ನು ಓದಿ ಮನಸ್ಸಿಗೆ ನೆಮ್ಮದಿ ಪಡೆಯಬೇಕು ವೈರಾಗ್ಯ ಮೂರ್ತಿಯಾಗಿದ್ದ ಶಿವಶರಣೆ ಅಕ್ಕಮಹಾದೇವಿಯು ನನಗೆ ಯಾವ ಸಂಪತ್ತು ಬೇಡ ಶ್ರೀ ಮಲ್ಲಿಕಾರ್ಜುನ ನನಗೆ ನಿಜವಾದ ಸಂಪತ್ತು ಅವನೇ ನನ್ನ ದಿವ್ಯ ಸ್ವರೂಪವಾಗಬೇಕು ಎಂದು ಆಗಿನ ಕಾಲದಲ್ಲಿ ಶಿವಶರಣೆ ಅಕ್ಕಮಹಾದೇವಿಯವರು ಸಾಕಷ್ಟು ವಚನಗಳನ್ನು ರಚಿಸಿದ್ದಾರೆ ಅದೇ ವಚನಗಳ ಸಂಪತ್ತು ಇಂದಿನ ಮಹಿಳೆಯರಿಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಶ್ರೀಮಠದ ಅಕ್ಕನ ಬಳಗದ ಎಲ್ಲ ಮಹಿಳೆಯರು ತೊಟ್ಟಿಲು ಪೂಜೆ ಮಾಡಿ ಜೋಗುಳ ಹಾಡಿ ನಾಮಕರಣ ಮಾಡಿ ಶಿವಶರಣೆ ಅಕ್ಕಮಹಾದೇವಿಯ ಗುಣಗಾನವನ್ನು ಮಾಡುವಲ್ಲಿ ಯಶಸ್ವಿಯಾದರು ಎಲ್ಲರಿಗೂ ಶ್ರೀಮಠದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 