ಏರ್ಮನ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳ ಗ್ರಂಥಾಲಯ ಭೇಟಿ
Airman Training School trainees visit library
ಬೆಳಗಾವಿ 22: ನಗರದ ಕೇಂದ್ರ ಗ್ರಂಥಾಲಯಕ್ಕೆ ,"ಏರ್ಮನ್ ತರಬೇತಿ ಶಾಲೆ," ಸಾಂಬ್ರಾ, ಬೆಳಗಾವಿಯ ತಾಂತ್ರಿಕೇತರ ವಿದೇಶಿ ಪ್ರಶಿಕ್ಷಣಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳು ಶೈಕ್ಷಣಿಕ ಭೇಟಿ ನೀಡಿದರು. ಉಪನಿರ್ದೇಶಕರಾದ ರಾಮಯ್ಯ ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಆಡಳಿತಾತ್ಮಕ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಿಬ್ಬಂದಿಗಳಾದ ಪ್ರಕಾಶ ಇಚಲಕರಂಜಿ, ಮತ್ತು ಸರಸ್ವತಿ ಅವರು ವಿವಿಧ ವಿಭಾಗಗಳ ಕಾರ್ಯನಿರ್ವಹಣೆ ಮತ್ತು ಗ್ರಂಥಾಲಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಏರ್ಮನ್ ತರಬೇತಿ ಶಾಲೆಯ ಶೈಕ್ಷಣಿಕ ಸಿಬ್ಬಂದಿಗಳಾದ ಸಾರ್ಜೆಂಟ್‌ರಾದ.. ಆಶಿಷ್ ಚಂದ್ರ, ಅಮಿತ್ ಕುಮಾರ್, ನಂದನ ಶರ್ಮಾ ಅವರೊಂದಿಗೆ ಶ್ರೀಲಂಕಾ, ಕೀನ್ಯಾ ಮತ್ತು ಫಿಲಿಪೈನ್ಸ್ ದೇಶದ ಪ್ರಶಿಕ್ಷಣಾರ್ಥಿಗಳು, ಇಲ್ಲಿನ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕ ಸೇವೆಗಳ ಬಗ್ಗೆ ಮಾಹಿತಿ ಪಡೆದು, ಮಕ್ಕಳ ವಿಭಾಗ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಅದೇ ರೀತಿ ನಗರದ ರವೀಂದ್ರ ಕೌಶಿಕ ಇ ಗ್ರಂಥಾಲಯಕ್ಕೂ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈ ಸಂಧರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು,ಎಸ್ ಎಸ್ ಸೀಮಿಮಠ, ಸುಮಿತ್ ಕಾವಳೆ, ಅಂಬೇಕರ, ಆನಂದ ಮುತ್ತಗಿ, ಸುನಿಲಕುಮಾರ್, ಎನ್ ವೈ ಪಾಟೀಲ್, ರಾಜು ಕಟ್ಟಿಮನಿ,ಲಕ್ಷ್ಮಿ, ರಾಜಶ್ರೀ ಮುಂತಾದವರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 