ಧಾರವಾಡ ಅಲ್ಫಾನ್ಸೋ ಮಾವಿಗೆ ಜಿಐ ಟ್ಯಾಗ್ ಪಡೆಯುವ ಗುರಿ: ಡಾ. ರಾಜೇಂದ್ರ ಪೊದ್ದಾರ ಹೇಳಿಕೆ
Aim to get GI tag for Dharwad Alphonso mango: Dr. Rajendra Poddar's statement
ಧಾರವಾಡ 23: ಮಾವು ಅತ್ಯುತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಧಾರವಾಡ ಅಲ್ಫಾನ್ಸೋ (ಆಫೂಸ್) ಮಾವಿಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಪಡೆಯುವ ಗುರಿ ಹೊಂದಲಾಗಿದೆ ಎಂದು ಧಾರವಾಡ ಮಾವು ಬಳಗದ ಗೌರವಾಧ್ಯಕ್ಷ ಡಾ. ರಾಜೇಂದ್ರ ಪೊದ್ದಾರ ಹೇಳಿದರು. ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಧಾರವಾಡ ಮಾವು ಬಳಗದ ಮೊದಲ ವಾರ್ಷಿಕ (2024-25ನೇ ಸಾಲಿನ) ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಮಾವು ಬೆಳೆಯ ನಿರ್ವಹಣೆ, ಗುಣಮಟ್ಟದ ಉತ್ಪಾದನೆಗೆ ತಾಂತ್ರಿಕತೆ ಒದಗಿಸುವುದು ಹಾಗೂ ಉತ್ಪನ್ನಕ್ಕೆ ಅತ್ಯುತ್ತಮ ದರ ಕೊಡಿಸುವುದು ಸೇರಿದಂತೆ ಮಾವು ಬೆಳೆಗಾರರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈ ಬಳಗ ಹುಟ್ಟು ಹಾಕಲಾಗಿದೆ. ನಿಸರ್ಗದಲ್ಲಿನ ವೈಪರೀತ್ಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹುನ್ನಾರ ಮೆಟ್ಟಿ ನಿಲ್ಲಲು ರೈತರು ಸಂಘಟಿತರಾಗುವುದೊಂದೇ ದಾರಿ ಎಂದರು. ಸಂಕಲ್ಪ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಯಾವುದೇ ಕೆಲಸದಲ್ಲಿ ಯಶಸ್ಸು ಸಾಧ್ಯ. ಮಹಾರಾಷ್ಟ್ರದ ಸಹ್ಯಾದ್ರಿ ಫಾರ್ಮ್ಸ ಮಾದರಿಯಲ್ಲಿ ಧಾರವಾಡ ಮಾವು ಬಳಗ ಕಟ್ಟುವ ಉದ್ದೇಶವಿದೆ. ಹೊರಜಿಲ್ಲೆ, ಹೊರ ರಾಜ್ಯ ಹಾಗೂ ಅಮೆರಿಕ, ಸಿಂಗಪುರ ಸೇರಿದಂತೆ ವಿದೇಶಗಳಿಗೆ ಮಾವು ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಕೆಲವೆಡೆ ರಫ್ತು ಮಾಡಲಾಗಿದೆ.
ರೈತರು ಹಾಗೂ ಅವರ ಉತ್ಪನ್ನಗಳನ್ನು ತುಚ್ಛವಾಗಿ ಕಾಣುವ ಪ್ರವೃತ್ತಿಯಿದೆ. ರೈತರು ಮಾರುಕಟ್ಟೆಗೆ ಮಾರಾಟಕ್ಕೆ ತಂದ ಬೆಳೆಗಳನ್ನು ಹಣವಂತರು ಕಡಿಮೆ ಬೆಲೆಗೆ ಖರೀದಿಸುವ ಚಾಳಿ ಇಂದಿಗೂ ಕಾಣುತ್ತಿದ್ದೇವೆ. ಹೀಗಾಗಿ, ಬೆಳೆಗಾರರಿಂದ ಬಳಕೆದಾರರಿಗೆ ವಿನೂತನ ಕಲ್ಪನೆಯಡಿ ಧಾರವಾಡ ಸುತ್ತಮುತ್ತಲಿನ ರೈತರು ಬೆಳೆದ ಅತ್ಯುತ್ತಮ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸಲು ಯೋಜನೆ ರೂಪಿಸಲಾಯಿತು. ನಗರದ ಗಾಂಧಿ ಶಾಂತಿ ಪ್ರತಿಷ್ಠಾನ ಭವನದಲ್ಲಿ ಎರಡು ತಿಂಗಳು ಕಾಲ ಗ್ರಾಹಕರಿಗೆ ನೇರವಾಗಿ ಹಣ್ಣು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಉತ್ಕೃಷ್ಟ ಹಣ್ಣು ಹಾಗೂ ರೈತರಿಗೆ ಉತ್ತಮ ದರ ಕೊಡಿಸುವ ಮೂಲಕ ಬೆಳೆಗಾರರು- ಬಳಕೆದಾರರ ಮಧ್ಯೆ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಸುಭಾಸ ಆಕಳವಾಡಿ, ಉಪಾಧ್ಯಕ್ಷ ಪ್ರಮೋದ ಗಾಂವ್ಕರ್ ಮಾತನಾಡಿದರು. ಕಾರ್ಯದರ್ಶಿ ಸುರೇಶ ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಗಂಗಾಧರ ಹೊಸಮನಿ, ಸಹ ಕಾಯದರ್ಶಿ ನಾಗರಾಜ ತಿಮ್ಮಾಪುರ ನಿರ್ವಹಿಸಿದರು. ಗೀರೀಶ ಕೆರೂರ, ಡಾ. ಹೇಮಲತಾ ಮತ್ತು ಅನಸೂಯಾ ಕರಿಗೌಡರ, ವಿವೇಕಾನಂದ ದಾಸನಕೊಪ್ಪ, ಬಳಗದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 