ನಸಲಾಪೂರ ಗ್ರಾಮದ ಕಾಮಗಾರಿಗೆ ಐಹೊಳೆ ಅವರಿಂದ ಭೂಮಿ ಪೂಜೆ
Aihole performs Bhoomi Puja for Nasalapur village work
ರಾಯಬಾಗ 06 : ತಾಲ್ಲೂಕಿನ ನಸಲಾಪೂರ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತು ಫೇವರ್ಸ್ ಬ್ಲಾಕ್ ಅಳವಡಿಕೆ ಮಾಡುವ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ, ನಸಲಾಪುರ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯಗಳು ಒದಗಿಸಬೇಕೆನ್ನುವ ಮಹದಾಸೆಯಿಂದ ಗ್ರಾಮದ ಮುಖಂಡರ ಬೇಡಿಕೆಗಳನ್ನು ಪ್ರತಿಯೊಂದು ಈಡೇರಿಸುತ್ತ ಬಂದಿದ್ದೇನೆ. ಗ್ರಾಮದ ಮುಖಂಡರ ಸಹಕಾರ ನೀಡಿದ್ದಾರೆ ಎಂದು ಹೇಳಿದರು.ಮುಖಂಡರಾದ ಭರತೇಶ ಬನವಣೆ ಮಾತನಾಡಿ, ಗ್ರಾಮದ ಸರ್ವಾಂಗಿನ ಅಭಿವೃದ್ಧಿಗೆ ಶಾಸಕರ ಪಾತ್ರ ಬಹಳ ಮಹತ್ವ ಇದೆ. ಇನ್ನೂ ಗ್ರಾಮದ ಅಭಿವೃದ್ದಿಗೆ ಹಣ ನೀಡಲಾಗುವುದು ಎಂದು ಭರವಸೆ ನೀಡಿದ್ದು ಸಂತಸವಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಭರತೇಶ ಬನವಣೆ, ಸದಾಶಿವ ಘೋರೆ್ಡ, ರಾಜುಗೌಡ ಪಾಟೀಲ, ಜಯಪಾಲ ಬನವಣೆ, ಚೌಗೊಂಡಾ ಪಾಟೀಲ, ಅರುಣ ನಾಯಿಕ, ಸುರೇಂದ್ರ ಸಮಾಜೆ, ಶಿವಾನಂದ ಕುಂಬಾರ, ಮಹಾದೇವ ಕಾಂಬಳೆ, ಅಣ್ಣಾಸಾಹೇಬ ಸಮಾಜೆ, ಬಾಳಾಸಾಹೇಬ ಪಾಟೀಲ, ಯಾಕೂಬ ತಾಂಬಟ, ಪ್ರಕಾಶ ಖೋಬಾರೆ, ನಿಂಗಪ್ಪ ಕುಂಬಾರ, ವೆಂಕಟೇಶ ಬನವಣೆ, ದಿನೇಶ ಕಾಂಬಳೆ, ಆನಂದ ಸಮಾಜೆ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 