ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹಾನೀಯರ ಮಾರ್ಗದಲ್ಲಿ ನಡೆಯೋಣ: ಸಚಿವರಾದ ಅಹ್ಮದ್ ಖಾನ್


ಹಾವೇರಿ:16: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗಮಾಡಿರುವ ಮಹಾನೀಯರ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದು  ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ಖಾನ್ ಅವರು ಹೇಳಿದರು.

ಬುಧವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ  ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಆಂಗ್ಲರ ದಾಸ್ಯದಲ್ಲಿದ್ದ ಭಾರತ ದೇಶವನ್ನು, ಸ್ವಾತಂತ್ರ್ಯ ರಾಷ್ಟ್ರವಾಗಿಸಲು ನಡೆದ ಹೋರಾಟಕ್ಕೆ ವಿರೋಚಿತವಾದ ಇತಿಹಾಸವಿದೆ. ಕನರ್ಾಟಕ ಸೇರಿದಂತೆ ದೇಶಾದ್ಯಂತ ಅಸಂಖ್ಯಾತ ಮಹಾನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಆಂಗ್ಲರ ಆಡಳಿತ ವಿರೋಧಿ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾಜಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ದೋಂಡಿಯ ವಾಘಾ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ಭಗತಸಿಂಗ್, ನೇತಾಜಿ ಸುಭಾಷಚಂದ್ರ ಭೋಸ್, ಮಹಾತ್ಮಾ ಗಾಂಧಿಜೀ, ಜವಾಹರಲಾಲ್ ನೆಹರೂ, ಸದರ್ಾರ್ ವಲ್ಲಭಾಯಿ ಪಟೇಲ್, ಬಾಬಾಸಾಹೇಬ ಅಂಬೇಡ್ಕರ್, ಬಾಲಗಂಗಾಧರ ತಿಲಕ್,  ಮೈಲಾರ ಮಹದೇವಪ್ಪ, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡ್ರ ಒಳಗೊಂಡಂತೆ ಸಾವಿರಾರು ಸಂಖ್ಯೆಯ ನಾಯಕರ ಹೋರಾಟ ಅವೀಸ್ಮರಣೀಯ ಎಂದರು.

ಈ ಮಹಾನೀಯರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ತ್ಯಾಗಮಾಡಿದ ಮಹನೀಯರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಾತೃ ಭೂಮಿಯ ಬಿಡುಗಡೆಗಾಗಿ ನಡೆಸಿದ ಈ ಮಹನೀಯರ  ಆಶಯ, ಕನಸುಗಳ ನನಸು ಮಾಡಲು ನಾವೆಲ್ಲ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಕನ್ನಡ ನೆಲದಲ್ಲಿ ಶಿಶುನಾಳ ಷರೀಫರು, ಕನಕದಾಸರು, ಸರ್ವಜ್ಞರು, ಶರಣರು, ಸಂತರು, ಸೂಫಿಗಳು ಜನಿಸಿ  ಬ್ರಾತೃತ್ವ, ಸೋದರತೆ, ಜಾತ್ಯಾತೀತ ಪರಂಪರೆಯನ್ನು ನಮಗೆ ಬಿಟ್ಟುಹೋಗಿದ್ದಾರೆ. ಬಹು ಸಂಸ್ಕೃತಿ, ಬಹು ಭಾಷೆ , ಜನಾಂಗ, ಆಚಾರ ವಿಚಾರಧಾರೆ ಹೊಂದಿರುವ ಭಾರತ ದೇಶದ ಭಿನ್ನತೆಯಲ್ಲಿಯೂ ಏಕತೆಯನ್ನು ಬಿಂಬಿಸುವ ಜಗತ್ತಿನ ಅತ್ಯಂತ ಶ್ರೇಷ್ಠ ದೇಶವಾಗಿದೆ ಎಂದರು.

ಅಖಂಡತೆ, ಸೋದರತೆ, ಸಮಾನತೆ, ಅಹಿಂಸೆಯೇ ನಮ್ಮ ಮಂತ್ರ. ನಮ್ಮ ಹಿರಿಯರು ಹಾಕಿಕೊಟ್ಟ  ಜಾತ್ಯಾತೀತ, ಧಮರ್ಾತೀತ ಮಾರ್ಗದಲ್ಲಿ ರಾಷ್ಟ್ರೀಯತೆ ಬೆಳೆಯಬೇಕು. ಅಖಂಡ ಕನರ್ಾಟಕ, ಅಖಂಡ ಭಾರತ ಉಳಿಸಿ-ಬೆಳೆಸಲು ಸ್ವಾತಂತ್ರ್ಯ ದಿನವಾದ ಇಂದು ನಾವೇಲ್ಲ ಸಂಕಲ್ಪ ಮಾಡೋಣ ಎಂದು ಹೇಳಿದರು.

 ಸಮಾರಂಭದಲ್ಲಿ ಶಾಸಕರಾದ ನೆಹರು ಓಲೇಕಾರ ಸಂಸದರಾದ ಶಿವಕುಮಾರ ಉದಾಸಿ, ಜಿ.ಪಂ.ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ತಾ.ಪಂ.ಅಧ್ಯಕ್ಷ ಕರಿಯಲ್ಲಪ್ಪ ಉಚಿಡಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಇತರರು ಉಪಸ್ಥಿತರಿದ್ದರು.

  ಧ್ವಜವಂದನೆ: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪೊಲೀಸ್, ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್ ಆಂಡ್ ಗೈಡ್ಸ್ ಒಳಗೊಂಡಂತೆ ವಿವಿಧ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಜರುಗಿತು. ದೇಶಭಕ್ತಿ ಗೀತೆಗಳಿಗೆ ವಿವಿಧ ಶಾಲೆಯ ಮಕ್ಕಳು ನಡೆಸಿಕೊಟ್ಟ ಆಕರ್ಷಕ ನೃತ್ಯ ಪ್ರದರ್ಶನಗಳು ಗಮನಸೆಳೆದವು.

ಸಮಾರಂಭಕ್ಕೂ ಮುನ್ನ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿರುವ ಮಹದೇವಪ್ಪನವರ ಪುತ್ಥಳಿಗೆ ಮಾಲಾರ್ಪಣೆ  ಮಾಡಲಾಯಿತು. ಭಾರತಾಂಭೆಯ ಭಾವಚಿತ್ರ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಹಾಗೂ ಶಾಲೆಯ ನೂರಾರು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.