ಕೃಷಿ ಸಚಿವರು ಎನ್‌. ಚಲುವರಾಯಸ್ವಾಮಿ ಭೇಟಿಯಾದ ಬೆಳೆ ಸಮೀಕ್ಷೆದಾರು

ಕೃಷಿ ಸಚಿವರು ಎನ್‌. ಚಲುವರಾಯಸ್ವಾಮಿ ಭೇಟಿಯಾದ ಬೆಳೆ ಸಮೀಕ್ಷೆದಾರು Agriculture Minister N. Chaluvarayaswamy meets crop surveyors

ಲೋಕದರ್ಶನ ವರದಿ 

ವಿಜಯಪುರ 14 : ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘಟನೆಯ ವಿಜಯಪೂರ ಜಿಲ್ಲಾಘಟಕದ ಮುಂದಾಳುಗಳು ಕಳೆದ ಮಾರ್ಚ್‌ 3ನೇ ತಾರೀಖಿನ ದಿನದಂದು 31 ಜಿಲ್ಲೆಗಳ ಬೆಳೆ ಸಮೀಕ್ಷೆದಾರರಿಗೆ ಎನ್ ಚಲುವರಾಯಸ್ವಾಮಿ ಮಾನ್ಯಕೃಷಿ ಸಚಿವರನ್ನು ಭೇಟಿ ಮಾಡಲು ಪತ್ರಿಕಾ ಪ್ರಕಟಣೆಯಲ್ಲಿ ಕರೆ ಕೊಟ್ಟಿದ್ದರು. 

ಆ ಒಂದು ಕರೆಗೆ ಓಗೊಟ್ಟು ಹಲವಾರು ಜಿಲ್ಲೆಯಿಂದ ಬೆಳೆ ಸಮೀಕ್ಷೆದಾರರು ಬಂದು ಭಾಗವಹಿಸಿ ಎಲ್ಲರೂ ಕೂಡಿ ಸೇರಿಕೊಂಡು ಮಾರ್ಚ್‌ 11ನೇ  ತಾರೀಖಿನ ದಿನದಂದು ಮಾನ್ಯಕ್ರಷಿ ಸಚಿವರನ್ನು ಭೇಟಿಯಾಗಿ, ಮಹಾ ಸ್ವಾಮಿ ನಾವೆಲ್ಲರೂ ಬೆಳೆ ಸಮೀಕ್ಷೆದಾರರು ಸುಮಾರು 8-10 ವರ್ಷಗಳ ಕಾಲ ದಿಂದ ಬೆಳೆ ಸಮೀಕ್ಷೆದಾರರಾಗಿ ಸರ್ಕಾರದ ಅಧೀನದಲ್ಲಿ  ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಅಂತ  ಹಂಗಾಮುವಾರು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ.

ಜೊತೆಗೆ ನಾವೆಲ್ಲರೂ ವಿದ್ಯಾವಂತ ಯುವಕರು, ನಮಗೆ ಒಂದು ವರ್ಷದಲ್ಲಿ ಹಂಗಾ ಮುವಾರು ಕೇವಲ ಎರಡು ತಿಂಗಳುಗಳಿಗೆ ಮಾತ್ರನೇ ಸೀಮಿತಗೊಳಿಸದೆ ಮತ್ತು ನಮ್ಮನ್ನು ಟಿಶ್ಯು ಪೇಪರ್‌ತರಹ ಉಪಯೋಗಿಸಿಕೊಳ್ಳದೆ , ಕನಿಷ್ಠ ವೇತನದ ನೀತಿಅಡಿಯಲ್ಲಿ ದಿನಗೂಲಿ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಂಡು ವರ್ಷದ 12 ತಿಂಗಳುಗಳ ಕಾಲ ಕೆಲಸವನ್ನು ನೀಡುವಂತೆ ಕರ್ನಾಟಕ ರಾಜ್ಯದ 23,720 ಬೆಳೆ ಸಮೀಕ್ಷೆದಾರರ ಪ್ರತಿನಿಧಿಯಾಗಿ ಭೀಮಪ್ಪ ಲಕ್ಷ್ಮಣ ತಳವಾರ ಅವರು ಕೈ ಮುಗಿದು ಕೇಳಿಕೊಂಡರು. 

ಈ ಒಂದು ನಿಯೋಗದ ಮುಂದಾಳುಗಳಾದ ನರಸಪ್ಪ ನಾವಿ, ಸುರೇಶ್ ಸಿಂಗ್ ಹಜೇರಿ, ಸದಾಶಿವ ಚಲವಾದಿ, ಸೋಮಶೇಖರ ನಾಯ್ಕೋಡಿ, ಮಲ್ಲಿಕಾರ್ಜುನ ಪೂಜೇರಿ, ರಾಜಕುಮಾರ್ ಪ್ರಬುದ್ಧಕರ, ಬಸವರಾಜ ದಾಸರ, ಅರುಣಕುಮಾರ್ ತಳವಾರ, ಸಾಗರ್‌ಕಿರಣಗಿ, ಹಿರಿಯಣ್ಣ ಜಂಬಗಿ, ರೋಹನ್ ಪಾರಶೆಟ್ಟಿ, ಸುರೇಶ್ ಜಕಾತಿ,ಪೀರಸಾಬ ಕೋಜಗೀರ, ಶಿವುಕುಮಾರ ಪೂಜೇರಿ ಇನ್ನು ಹಲವಾರು ಜಿಲ್ಲೆಯವರು ಸೇರಿಬೇಡಿಕೆ ಈಡೇರಿಕೆಗಾಗಿ ಮನವಿಪತ್ರಕೊಟ್ಟರು.  

ಮನವಿ ಪತ್ರ ಸ್ವೀಕರಿಸಿದ ಸಚಿವರು ನನ್ನ 25 ವರ್ಷದಆತ್ಮೀಯ ಸ್ನೇಹಿತನಾದ   ಮಲ್ಲಿಕಾರ್ಜುನ ಎಸ್ ಲೋಣಿಅವರ ನೇತೃತ್ವದಲ್ಲಿ ಬಂದು ಈ ಬೇಡಿಕೆ ಪತ್ರಕೊಟ್ಟಿದ್ದೀರಿ, ನೀವೆಲ್ಲರೂ ರೈತರ ಪರ ಮತ್ತು ಸರ್ಕಾರದ ಪರವಾಗಿ ಸೇವೆ ಮಾಡುವವರು ನೀವೆಲ್ಲರೂ ರೈತರ ಮಕ್ಕಳು, ನಿಮ್ಮ ಬೇಡಿಕೆ ಈಡೇರಿಕೆಗಾಗಿ ಇನ್ನೂ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು ಎಂದು ಸಚಿವರು ಮಾತುಕೊಟ್ಟರು.