ಉಚಿತ ದಿನಸಿ, ಮಾಸ್ಕ್ ವಿತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ಹಾವೇರಿ, ಮೇ 2,ಕೋವಿಡ್-19 ಹರಡದಂತೆ ತಡೆಯುವ ಉದ್ದೇಶದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ತಾಲೂಕಿನ ಚಿಂದಿ ಆಯುವವರಿಗೆ ಉಚಿತ ದಿನಸಿ ಸಾಮಾನುಗಳನ್ನು ವಿತರಿಸಿದರು.
ಅಲ್ಲದೇ ಆರೋಗ್ಯ ಇಲಾಖೆ, ರಟ್ಟಿಹಳ್ಳಿ, ಹಿರೇಕೆರೂರು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಮಾಸ್ಕ್‌ಗಳನ್ನು ವಿತರಿಸಿದರು.ಈ ವೇಳೆ ಚಿಂದಿ ಆಯುವ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವರು, ಸ್ವಚ್ಛತೆ ಜೊತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಚೀಲ ಹಾಗೂ ಮುಖಗೌಸುಗಳನ್ನು ಧರಿಸಬೇಕು. ಲಾಕ್ ಡೌನ್ ವಿಸ್ತರಣೆಯಿಂದ ಯಾರೂ ಆತಂಕಕ್ಕೊಳಗಬಾರದು. ಸಾಮಾಜಿಕ ಅಂತರವೊಂದೇ ಸದ್ಯಕ್ಕೆ ಕೊರೊನಾದಿಂದ ದೂರ ಉಳಿಯಬಲ್ಲ ಉಪಾಯವಾಗಿದೆ. ಸರ್ಕಾರ ಕಾರ್ಮಿಕರು ಕೃಷಿಕರೂ ಸೇರಿದಂತೆ ಎಲ್ಲರ ನೆರವಿಗೆ ಬದ್ಧವಾಗಿದೆ. ಧೃತಿಗೆಡದೇ ಎಲ್ಲರೂ ಒಟ್ಟಾಗಿ ಈ ಮಹಾಮಾರಿಯನ್ನು ಹೊಡೆದೋಡಿಸಬೇಕೆಂದು ಕರೆ ನೀಡಿದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ ಬಣಕಾರ್, ಮಹೇಂದ್ರ ಬಡಳ್ಳಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 