ಜಾಗತೀಕರಣ, ಉದಾರೀಕರಣದಿಂದ ಕೃಷಿ ಬಿಕ್ಕಟ್ಟು:ಡಾ. ರಾಜೇಂದ್ರ ಪೋದ್ದಾರ

 ಧಾರವಾಡ 04:  ಭಾರತದ ಕೃಷಿ ಬಿಕ್ಕಟ್ಟಿಗೆ ಜಾಗತೀಕರಣ ಹಾಗೂ ಉದಾರೀಕರಣ ನೀತಿಯೇ ಕಾರಣವಾಗಿದ್ದು ಈ ಬಿಕ್ಕಟ್ಟು ಇಂದು ವಿಶ್ವವ್ಯಾಪಿಯಾಗಿದೆ, ಕೃಷಿ ಸಾಗುವಳಿ ಕ್ಷೇತ್ರ ದಿನದಿಂದ ದಿನಕ್ಕೆ ನಶಿಸುತ್ತಿದೆ. ಭೂಮಿಯ ಫಲವತ್ತತೆ ಕಡಿಮೆಯಾಗಿ ಕೃಷಿ ಉತ್ಪಾದನೆಯೂ ಕಡಿಮೆಯಾಗಿದೆ. ಕೃಷಿ ಬಿಕ್ಕಟ್ಟಿಗೆ ಜಲಸಂಕಷ್ಟವೂ ನೇರ ಕಾರಣವಾಗಿದ್ದು ಜಲ ಮಾಲಿನ್ಯದಿಂದ ಗುಣಮಟ್ಟದ ನೀರೂ ಸಿಗದಾಗಿದೆ, ರೈತರ ಕೃಷಿ ಉತ್ಪಾದನಾ ವೆಚ್ಚ ಅಧಿಕವಾಗಿದ್ದು, ರೈತರು ಸಾಲದ ಋಣಭಾರದ ವಿಷ ವತರ್ುಲದಲ್ಲಿ ಸಿಲುಕಿ ಕೃಷಿ ದಿವಾಳಿಯಾಗಿರುವುದು ದುರದೃಷ್ಟಕರ ಸಂಗತಿ ಎಂದು ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ನಿದರ್ೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು. 

ಕನರ್ಾಟಕ ವಿದ್ಯಾವರ್ಧಕ ಸಂಘವು, ದಿ. ಬಸಪ್ಪ ಶ. ಮುಂದಿನಮನಿ ಸ್ಮರಣೆ ದತ್ತಿ ಅಂಗವಾಗಿ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  `ಕೃಷಿ ಬಿಕ್ಕಟ್ಟು ಹಾಗೂ ಪರಿಹಾರ' ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶದ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು ಕಳವಳಕಾರಿಯಾಗಿದೆ. ಸಕರ್ಾರ ಸಮಾಜವಾದಿ ತತ್ವದಡಿಯಲ್ಲಿ  ಭೂಸುಧಾರಣೆ ಜಾರಿಗೆ ತಂದರೂ ಅದು ಸಮರ್ಪಕವಾಗಿಲ್ಲ. ಹವಾಮಾನ ವೈಪರಿತ್ಯವೂ ಸಹ ಭವಿಷ್ಯದಲ್ಲಿ ಕೃಷಿಗೆ ಮಾರಕವಾಗಿದೆ.  ದೇಶದ ಪ್ರತಿಯೊಬ್ಬ ರೈತರು ಆರೋಗ್ಯಪೂರ್ಣ ನೆಮ್ಮದಿಯ ಜೀವನ ಸಾಗಿಸಬೇಕಾದರೆ `ಸಮಗ್ರ ಸುಸ್ಥಿರ ಕೃತಿ ನೀತಿ ಜಾರಿಗೆ ಬರಬೇಕು, ಜೊತೆಗೆ ನೈಸಗರ್ಿಕ ಸಂಪನ್ಮೂಲಗಳ ಶೋಷಣೆ ನಿಲ್ಲಬೇಕು. ಕೃಷಿ ಭಾರತೀಯರ ಜೀವನ ಸಂಸ್ಕೃತಿಯಾದರೆ ಮಾತ್ರ ಕೃಷಿ ಬಿಕ್ಕಟ್ಟು ಪರಿಹಾರವಾಗಲು ಸಾಧ್ಯ ಎಂದು ಹೇಳಿದರು.

ಅತಿಥಿಯಾಗಿ ಆಗಮಿಸಿದ್ದ `ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ ಮಾತನಾಡಿ, ಇಂದು ಕಾಪರ್ೋರೇಟ್ ಕಂಪನಿಗಳು ಲಾಭಗಳಿಕೆಯೇ ಮೂಲ ಗುರಿ ಹೊಂದಿವೆ. ಸಬ್ಸಿಡಿ ಕಡಿತ, ರಫ್ತು ಉತ್ತೇಜನ ನೀತಿಯಿಂದ ರೈತರ ಬದುಕು ದಿವಾಳಿಯಾಗುತ್ತಿದೆ. ರೈತರಿಗೆ ಸಕರ್ಾರ ಬೆಂಬಲ ಬೆಲೆ ನೀಡಿದ್ದು, ಮಾರುಕಟ್ಟೆ ಬೆಲೆಗಿಂತ ಕಡಿಮೆ ಇದೆ. ಬದಲಾಗಿ ಇಂದು ರೈತರಿಗೆ ಬೇಕಾದದ್ದು ಬೆಂಬಲ ಬೆಲೆ ಅಲ್ಲ, ವೈಜ್ಞಾನಿಕ ಬೆಲೆ ನೀತಿ. 1991ರ ನವ ಆಥರ್ಿಕ ನೀತಿ ಕೃಷಿ ಬಿಕ್ಕಟ್ಟಿಗೆ ಮಾರಕವಾಗಿದೆ, ರೈತ ಪ್ರಜ್ಞೆ ಬಂದಾಗ ಮಾತ್ರ ಕೃಷಿ ಬಿಕ್ಕಟ್ಟು ಪರಿಹಾರವಾಗಬಲ್ಲದು ಎಂದರು. 

ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಧಾರವಾಡ ಲಾ ಅಕಾಡೆಮಿ ಅಧ್ಯಕ್ಷ ಕೆ. ಬಿ. ನಾವಲಗಿಮಠ ಮಾತನಾಡಿ, ಇಂದು ಕೃಷಿ ಉತ್ಪಾದನಾ ವೆಚ್ಚ ಅಧಿಕಗೊಂಡು ಉತ್ಪನ್ನಗಳ ಬೆಲೆ ಕುಂಠಿತವಾಗಿದ್ದಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿವೆ. ಗಾಂಧೀಜಿಯವರ ಗ್ರಾಮಸ್ವರಾಜದ ಕನಸು ನನಸಾದಾಗ ಕೃಷಿ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು ಎಂದು ಹೇಳಿದರು.

ದಿ. ಬಸಪ್ಪ ಶಿ. ಮುಂದಿನಮನಿ ಅವರ ಭಾವಚಿತ್ರಕ್ಕೆ  ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ  ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ದತ್ತಿದಾನಿ ಸದಾನಂದ ಮುಂದಿನಮನಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಬ. ಗಾಮನಗಟ್ಟಿ ವಂದಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಪ್ರಶಾಂತ ಕುಲಕಣರ್ಿ ಪ್ರಾಥರ್ಿಸಿದರು. 

ಸಂಘದ ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ, ಬಸವಪ್ರಭು ಹೊಸಕೇರಿ, ರಾಜೇಶ ನಾವಲಗಿಮಠ, ಅಶೋಕ ಗುಡಿ, ರಾಜೇಶ ನವಲಗುಂದ, ಬಿ. ಬಿ. ಕಲ್ಲನಗೌಡರ,  ನಾಗರಾಜ ಕೊಲ್ಲೂರಿ, ಕಲ್ಮೇಶ ಬಡಿಗೇರ, ಸಂತೋಷ ಗೋಡಿ, ಪ್ರಭು ಕೇಶಗೊಂಡ, ಎ. ಜಿ. ಸಬರದ,  ಲಕ್ಷ್ಮಣ ಬಕ್ಕಾಯಿ, ಮಹಾಂತೇಶ ನರೇಗಲ್ಲ ಹಾಗೂ ಮುಂದಿನಮನಿ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.