ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೆಂಟರ​‍್ಸ‌ ಫಾರ್ ಕಿಡ್ಸ್‌, ಬೆಂಗಳೂರು ಇವರ ಜೊತೆಗೆ ಒಡಂಬಡಿಕೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೆಂಟರ​‍್ಸ‌ ಫಾರ್ ಕಿಡ್ಸ್‌, ಬೆಂಗಳೂರು ಇವರ ಜೊತೆಗೆ ಒಡಂಬಡಿಕೆ  Agreement with Rani Channamma University Mentors for Kids, Bangalore

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೆಂಟರ​‍್ಸ‌ ಫಾರ್ ಕಿಡ್ಸ್‌, ಬೆಂಗಳೂರು ಇವರ ಜೊತೆಗೆ ಒಡಂಬಡಿಕೆ  


ಬೆಳಗಾವಿ, 14 : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠವು ಜು. 10ರಂದು ಮೆಂಟರ​‍್ಸ‌ ಫಾರ್ ಕಿಡ್ಸ್‌, ಬೆಂಗಳೂರು ಇವರ ಜೊತೆಗೆ ಒಂದು ವರ್ಷದ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. 

       ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ, ಮೆಂಟರ್ಸ್‌ ಫಾರ್ ಕಿಡ್ಸ್‌, ಬೆಂಗಳೂರು ಇವರೊಂದಿಗೆ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಒಂದು ವರ್ಷದ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು, ಈ ಒಡಂಬಡಿಕೆಯು ವಿಶೇಷವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳ ಆಯೋಜನೆ ಮಾಡುವುದು, ವಾಣಿಜ್ಯೋದ್ಯಮದ ಬಗ್ಗೆ ಜಾಗೃತಿ ಹೆಚ್ಚಿಸುವ ಕಾರ್ಯಾಗಾರಗಳು ಹಾಗೂ ಆನಲೈನ್ ಪಾಠಗಳ ಮೂಲಕ ಸಿ.ಎ. ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ತರಬೇತಿ ನೀಡುವುದು, ಈ ಯೋಜನೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದ್ದು, ವಿದ್ಯಾರ್ಥಿಗಳಿಗೆ ಸಂಶೋಧನಾ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಸಹಕಾರ ನೀಡುವ ಉದ್ದೇಶವಿದೆ. ಅಗತ್ಯ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಲ್ಯಾಪ್‌ಟಾಪ್‌ಗಳನ್ನು ನೀಡಲಿದ್ದು ವಿದ್ಯಾರ್ಥಿಗಳಿಗೆ ಅನುಕೂಲಕರ ಯೋಜನೆ ಇದಾಗಿದ್ದು ಉದ್ಯೋಗದ ಅವಕಾಶಗಳನ್ನು ಕಲ್ಪಿಸಲು ಸಹ ಈ ಒಡಂಬಡಿಕೆಯು ಬದ್ಧವಾಗಿದೆ. ಈ ಸಮಯ ಯೋಚಿತ ಪ್ರಯತ್ನ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ದಿಕ್ಕು ತೋರುತ್ತದೆ. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಸಿ. ಎಮ್‌. ತ್ಯಾಗರಾಜ, ಕುಲಸಚಿವರಾದ ಸಂತೋಷ ಕಾಮಗೌಡ, ಮೆಂಟರ​‍್ಸ‌ ಫಾರ್ ಕಿಡ್ಸ್‌, ಬೆಂಗಳೂರು ನಿರ್ದೇಶಕರಾದ ಶ್ರೀ. ಪವನ ಶರ್ಮಾ,  ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಬಿ. ಎಸ್‌. ನಾವಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ. ಜಿ. ಹೆಗಡೆ, ಪ್ರೊ. ಮುಕುಂದ ಮುಂಡರಗಿ, ಅರ್ಜುನ ಜಂಬಗಿ, ಡಾ. ಶಿವಲಿಂಗಯ್ಯಾ ಗೊಠೆ, ಮತ್ತು ಕು. ಯಲ್ಲಪ್ಪಾ ಮೂಡಲಗಿ ಇವರು ಉಪಸ್ಥಿತರಿದ್ದರು.