ಅಗ್ನಿವೀರ ನೇಮಕಾತಿ ರ್ಯಾಲಿ: ಜಿಲ್ಲಾಧಿಕಾರಿ ಪರೀಶೀಲನೆ

ಅಗ್ನಿವೀರ ನೇಮಕಾತಿ ರ್ಯಾಲಿ: ಜಿಲ್ಲಾಧಿಕಾರಿ ಪರೀಶೀಲನೆ  Agniveera recruitment rally: District Collector verification

ಲೋಕದರ್ಶನ ವರದಿ

ಅಗ್ನಿವೀರ ನೇಮಕಾತಿ ರ್ಯಾಲಿ: ಜಿಲ್ಲಾಧಿಕಾರಿ ಪರೀಶೀಲನೆ  

ವಿಜಯಪುರ ಸೆ.11: ನಗರದ ಡಾ. ಬಿ.ಆರ್‌. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿವೀರ ನೇಮಕಾತಿ ರ್ಯಾಲಿಯ ಎರಡನೇ ದಿನದ ನೇಮಕಾತಿ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪರೀಶೀಲಿಸಿದರು.  

ಜಿಲ್ಲಾಧಿಕಾರಿ ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳು ಹಾಗೂ ಅಭ್ಯರ್ಥಿಗಳ ಓಟ, ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕುಡಿಯುವ ನೀರು, ಊಟ, ವಿದ್ಯುತ್, ಬೆಳಕು, ಆರೋಗ್ಯ ಸೇವೆ ಹಾಗೂ ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.  

ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯುತ್ತಿದ್ದು, ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಅಭ್ಯರ್ಥಿಗಳ ಪ್ರವೇಶ, ಸಂಚಾರ ಹಾಗೂ ಕ್ರೀಡಾಂಗಣದ ಸುತ್ತಲಿನ ಭದ್ರತೆಗೆ ಅಗತ್ಯ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.  

ಮಂಗಳೂರಿನ ಆರ್ಮಿ ರಿಕ್ರೂಟ್ಮೆಂಟ್ ಕಚೇರಿಯ ಕರ್ನಲ್ ಜಿ. ಸೋಮು ಮಹಾರಾಜನ್ ಅವರು ರ್ಯಾಲಿಯ ವಿವಿಧ ಹಂತಗಳು ಹಾಗೂ ನೇಮಕಾತಿ ಪ್ರಕ್ರಿಯೆಯ ಕುರಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದರು.