ಅಗ್ನಿವೀರ್ ನೇಮಕ: ಯುವಕ ಬಸವರೆಡ್ಡಿ ಎಂ. ಗೋನಾಳಗೆ ಗ್ರಾಮಸ್ಥರಿಂದ ಸನ್ಮಾನ
Agniveer Recruitment: Villagers Felicitate Youth Basavareddy M. Gonal
ಲೋಕದರ್ಶನ ವರದಿ
ಕೊಪ್ಪಳ 18: ತಾಲೂಕಿನ ಮಾಡಿನೂರು ಗ್ರಾಮದ ಯುವಕ ಬಸವರೆಡ್ಡಿ ಎಂ. ಗೋನಾಳ ಅವರು ಅಗ್ನಿವೀರ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಬೆಂಗಳೂರಿನಲ್ಲಿ ತರಬೇತಿ ಪೂರ್ಣಗೊಳಿಸಿದ ಬಳಿಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಭೋಪಾಲ್ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಣ್ಣ ಆಚಾರ ಪೂಜಾರ ಅವರು, ಬಸವರೆಡ್ಡಿ ದೇಶಸೇವೆಯಂತಹ ಮಹತ್ತರ ಹೊಣೆಗಾರಿಕೆಯನ್ನು ಸ್ವೀಕರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಅವರು ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿ, ಗ್ರಾಮಕ್ಕೆ ಕೀರ್ತಿ ತರಲಿ ಎಂದು ಶುಭಾಶಯ ಕೋರಿದರು.
ಸನ್ಮಾನ ಸ್ವೀಕರಿಸಿದ ಬಸವರೆಡ್ಡಿ ಎಂ. ಗೋನಾಳ ಮಾತನಾಡಿ, ಗ್ರಾಮಸ್ಥರು ತೋರಿದ ಪ್ರೀತಿ, ಆಶೀರ್ವಾದ ಮತ್ತು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ದೇಶಸೇವೆಯನ್ನು ಅತ್ಯುನ್ನತ ಕರ್ತವ್ಯವೆಂದು ಪರಿಗಣಿಸಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹಾಗೂ ತಮ್ಮ ಗ್ರಾಮಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದರು. ಈ ವೇಳೆ ಗ್ರಾಮದ ಯುವಕರು ಬಸವರೆಡ್ಡಿಗೆ ಅಭಿನಂದನೆ ಸಲ್ಲಿಸಿ, ಭಾರತ ಮಾತೆಗೆ ಜಯಘೋಷ ಮೊಳಗಿಸಿ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಅಪ್ಪಣ್ಣ ಆಚಾರ ಪೂಜಾರ, ಸಂತೋಷ್ ಪಾಟೀಲ, ಮುತ್ತಣ್ಣ ತಳಕಲ್, ಹನುಮರೆಡ್ಡಿ ಆಡೂರು, ಮಹಾಂತೇಶ್ ಗೋನಾಳ, ಬಸವರಾಜ್ ಗೋನಾಳ, ನಾಗರಾಜ್ ಬೃಂಗಿ, ಭರತೇಶ್ ತುಂಬಳ, ಹರ್ಷ ಪಾಟೀಲ, ಶಿವು ನಂದಾಪುರ, ರಾಜು ಪಾಟೀಲ, ಮಂಜುನಾಥ ಪಾಟೀಲ, ಶಿವು ಬೃಂಗಿ, ಸಾಗರ ತುಂಬಳ, ನಾಗರೆಡ್ಡಿ ನರಸಿಂಹನವರ, ಮನು ಶಿವಶಂಕರ, ಅಯ್ಯಪ್ಪ ಗೋನಾಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 