ಉಲ್ಬಣಿಸಿದ ಮಂಗನ ಕಾಯಿಲೆ: ಸಿದ್ದಾಪುರಕ್ಕೆ ವೆಂಟಿಲೆಟರ್ ಸೌಲಭ್ಯದಅಂಬುಲೆನ್ಸ್ – ಕಾಗೇರಿ

ಕಾರವಾರ, ಏ 19,ಮಲೆನಾಡು ಭಾಗದಲ್ಲಿ ಕೊರೋನಾ ವೈರಸ್ ಗಿಂತಲೂ ತೀವ್ರ ಆತಂಕ ಸೃಷ್ಟಿಸಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಅದರಲ್ಲೂ ಪ್ರಮುಖವಾಗಿ    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗನಕಾಯಿಲೆ ಚಿಕಿತ್ಸೆಗಾಗಿ ಕೃತಕ ಉಸಿರಾಟದ ತೊಂದರೆ ಇರುವ ಅಂಬುಲೆನ್ಸ್ ಮಂಜೂರಿ ಮಾಡಲಾಗಿದೆಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಹೆಚ್ಚಾಗಿರುವ ಕಾರಣ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್‌ ಅವರೊಂದಿಗೆ  ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ್ದರು.  ಅದರಂತೆ ಸಿದ್ದಾಪುರ ತಾಲೂಕಿಗೆ ವಿಶೇಷವಾಗಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ವೆಂಟಿಲೇಟರ್ ವ್ಯವಸ್ಥೆಇರುವಅಂಬುಲೆನ್ಸ್ ಗೆ ಬೇಡಿಕೆ ಬಂದಿತ್ತು. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್ ನಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ. ಮಂಗನ ಕಾಯಿಲೆಯ ಸೋಂಕಿತರ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.