ಸುದ್ದಿಯ ಬಳಿಕ ಜಾಗೃತಗೊಂಡ ಪ ಪಂ: ಕಸದ ಪೆಟ್ಟಿಗೆ ತೆರವು!

ಸುದ್ದಿಯ ಬಳಿಕ ಜಾಗೃತಗೊಂಡ ಪ ಪಂ: ಕಸದ ಪೆಟ್ಟಿಗೆ ತೆರವು!  After the news publish, the Pattan Panchayat woke up

ಮುಂಡಗೋಡ 06: ಪಟ್ಟಣದ ಕಡಲ್ಗಿಕಟ್ಟೆ ಕೆರೆಗೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿ ಕಸದ ರಾಶಿಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದು, ದುರ್ವಾಸನೆ ಹರಡುತ್ತಿತ್ತು. ಕಸದ ಪೆಟ್ಟಿಗೆ ಅಳವಡಿಸಿದ್ದರೂ ಅದು ಓವರ್‌ಫ್ಲೋ ಆಗಿ ಸುತ್ತಮುತ್ತ ಕಸ ಸುರಿಯಲಾಗುತ್ತಿತ್ತು.  

ದಿ. 02ರಂದು  ಲೋಕದರ್ಶನ ಪತ್ರಿಕೆಯಲ್ಲಿ ಪ್ರಕಟವಾದ “ಇಲ್ಲಿ ಕಸ ಹಾಕಬೇಡಿ, ಫಲಕವೇ ದಂಡವಾಯಿತೇ?” ಎಂಬ ವರದಿಯ ಪರಿಣಾಮವಾಗಿ ಪಟ್ಟಣ ಪಂಚಾಯತ್ ಅಧಿಕಾರಿಗಳು ತಕ್ಷಣ ಸ್ಥಳ ಪರೀಶೀಲನೆ ನಡೆಸಿ ಕಸದ ಪೆಟ್ಟಿಗೆಯನ್ನು ತೆರವುಗೊಳಿಸಿದರು. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಕಸ ಎಸೆಯುವವರ ಮೇಲೆ ದಂಡ ವಿಧಿಸಲಾಗುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.  

ಅತ್ಯಧಿಕ ಓಡಾಟವಿರುವ ಈ ಪ್ರದೇಶದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದ್ದು, ಅಧಿಕಾರಿಗಳು ಹಾಗೂ ನಾಗರಿಕರ ಸಹಕಾರದಿಂದ “ಕ್ಲೀನ್ ಮುಂಡಗೋಡ” ಸಾಧ್ಯ ಎಂಬ ನಂಬಿಕೆ ವ್ಯಕ್ತವಾಗಿದೆ.