10 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ಸಂಭ್ರಮ
After 10 years, Gramadevi's fair is celebrated
ಈರಣ್ಣಾ ಹುಲ್ಲೂರ,
ಯರಗಟ್ಟಿ, 07 ; ಐತಿಹಾಸಿಕ ಹಿನ್ನೆಲೆ ಹೊಂದಿರುವ ಯರಗಟ್ಟಿ ತಾಲೂಕಿನ ಅಕ್ಕಿಸಾಗರ ಗ್ರಾಮದಲ್ಲಿ ಇದೀಗ 10 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ಸಂಭ್ರಮ ಮನೆ ಮಾಡಿದೆ. ಜಾತ್ರೆ ಆಚರಣೆ ಗ್ರಾಮಸ್ಥರು ಸನ್ನದ್ಧವಾಗಿದ್ದು, 9 ದಿನಗಳ ಕಾಲ ಗ್ರಾಮ ಭಂಡಾರಮಯವಾಗಲಿದೆ.
ಕೃಷಿ ಗ್ರಾಮದ ಮೂಲ ಉದೋಗ್ಯವಾಗಿದೆ. ಅದೇಷ್ಟೋ ಕುಟುಂಬಗಳು ಇಂದಿಗೂ ಕೃಷಿಯನ್ನೇ ನಂಬಿ ಜೀವ ನಡೆಸುತ್ತಿವೆ. ಐತಿಹಾಸಿಕ ದೇವಾಲಯ, ಬಾವಿ, ಜೈನಬಸದಿ, ಸಿದ್ದಾರೂಢ ಮಠ ಹೊಂದುವ ಮೂಲಕ ತನ್ನೊಡಲಿನಲ್ಲಿ ಅನೇಕ ರೋಚಕ ಇತಿಹಾಸವನ್ನು ಇಟ್ಟುಕೊಂಡು, ಕಾಯ್ದುಕೊಂಡು ಬಂದಿದೆ. 5 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿದ್ದೆ ಇನ್ನೂ ಯರಗಟ್ಟಿ ತಾಲೂಕಿನಲ್ಲಿ ಅಕ್ಕಿಸಾಗರ ಚಿಕ್ಕ ಗ್ರಾಮ ಪಂಚಾಯತ ಕ್ಷೇತ್ರ ಕೂಡ ಹೌದು, ಸತ್ತಿಗೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹಾಗೂ ಮುಗಳಿಹಾಳ ತಾಲೂಕು ಪಾಮಚಾಯತ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಅಕ್ಕಿಸಾಗರ, ಗೋವನಕೊಪ್ಪ, ಕೊಡ್ಲಿವಾಡ ಗ್ರಾಮಗಳು ಸೇರುತ್ತವೆ. ಸುಸಜ್ಜಿತವಾದ ಗ್ರಾಮ ಪಂಚಾಯಿತಿ ಕಟ್ಟಡ, ಎಲ್ಲವನ್ನು ಹೊಂದಿದೆ ತಾಲೂಕಿನ ಕಟ್ಟಕಡೆಯ ಹಳ್ಳಿಯಾಗಿದೆ.
ಐತಿಹಾಸಿಕ ದೇವಾಲಯ : ಅಕ್ಕಿಸಾಗರ ಗ್ರಾಮವೂ ದೇವಾಲಯಗಳ ತೊಟ್ಟಿಲಾಗಿದೆ. ಇಲ್ಲಿ ವಿಶಾಲವಾದ ಗ್ರಾಮದೇವಿ ದೇವಾಲಯಗಳು, ಸಿದ್ದಾರೂಡ ಮಠ, ವಿಠ್ಠಲ ಮಂದಿರ, ಮಾರುತಿ ದೇವಸ್ಥಾನ, ಲಕ್ಷ್ಮೀದೇವಿ ದೇವಸ್ಥಾನ, ಅಮೋಘ ಸಿದ್ದೇಶ್ವರ ದೇವಸ್ಥಾನ, ಜೈನ ಬಸದಿ ಇದ್ದವು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತವೆ. ಆದರೆ, ಕಾಲಾಂತರದಲ್ಲಿ ಇಲ್ಲಿ ಇದ್ದ ದೇವಾಲಯ, ಬಾವಿ ಕಣ್ಮರೆಯಾಗಿವೆ. ಆದರೂ, ಅನೇಕ ಐತಿಹಾಸಿ ದೇವಾಲಯಗಳು ನಮ್ಮ ಕಣ್ಮುಂದೆ ಇದ್ದು ಗತ ಇತಿಹಾಸ ಸಾರುತ್ತಿವೆ. ಇನ್ನೂ ಅನೇಕ ಧಾರ್ಮಿಕ ಕೇಂದ್ರಗಳಾದ ಮಠಗಳು ಗ್ರಾಮದಲ್ಲಿ ಇದ್ದು, ಇವು ಸರ್ವರಲ್ಲೂ ಸಾಮರಸ್ಯ ಮೂಡಿಸುತ್ತಿವೆ.
10 ವರ್ಷಗಳ ಬಳಿಕ ಗ್ರಾಮದೇವಿಯರ ಜಾತ್ರೆ
ಅಕ್ಕಿಸಾಗರ ಗ್ರಾಮದಲ್ಲಿ 10 ವರ್ಷಗಳ ನಂತರ ಗ್ರಾಮ ದೇವಿಯರ ಜಾತ್ರೆ ನಡೆಯುತ್ತಿದ್ದು, ಇದಕ್ಕಾಗಿ ಗ್ರಾಮ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಈಗಾಗಲೇ ಗ್ರಾಮ ದೇವತೆ ದ್ಯಾಮವ್ವ-ದುರ್ಗವ್ವ, ಮೂರ್ತಿಗಳನ್ನು ಗ್ರಾಮಸ್ಥರ ಸಹಕಾರದಿಂದ ಮರು ನಿರ್ಮಾಣ ಮಾಡಲಾಗಿದೆ. ಇದು ಗ್ರಾಮದೇವಿಯರ ಜಾತ್ರೆಗೆ ಮತ್ತಷ್ಟು ಮೆರಗು ತಂದಿದೆ. ತಾಲೂಕಿನಲ್ಲಿ ಅತೀ ವಿಧಿವತ್ತಾಗಿ ಗ್ರಾಮದೇವಿ ಜಾತ್ರೆ ಆಚರಣೆ ಮಾಡಲಾಗುತ್ತದೆ. ಇಡೀ ಗ್ರಾಮವನ್ನು ಮಡಿ ಮಾಡಲಾಗಿದೆ. ಹಿರಿಯರು-ಕಿರಿಯರು ಎನ್ನದೇ ಸಕಲರು ಗ್ರಾಮದೇವಿ ಜಾತ್ರೆ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ. ಜಾತ್ರಾಗೆ ಸ್ವಾಗತ ಕೋರುವ ಬ್ಯಾನರ್‌ಗಳು ಗ್ರಾಮದ ತುಂಬೇಲ್ಲ ರಾರಾಜಿಸುತ್ತಿವೆ.
ಮನರಂಜನೆ ರಸದೌತನ: 10 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ ಭಕ್ತಿಯ ಜತೆಗೆ ಮನರಂಜನೆಯನ್ನು ಒದಗಿಸಲು ಅಣಿಯಾಗಿದೆ. ಇದಕ್ಕಾಗಿ ಜು 08ರಿಂದ ಜು.12ವರೆಗೂ ನಾನಾ ಮನರಂಜನೆ ಕಾರ್ಯಕ್ರಮ ಸ್ಪಧೆಗಳನ್ನು ಆಯೋಜನೆ ಮಾಡಲಾಗಿದೆ.
ಹತ್ತು ವರ್ಷಗಳ ನಂತರ ಗ್ರಾಮದಲ್ಲಿ ಜರುಗುತ್ತಿತುವ ಗ್ರಾಮ ದೇವತೇಯ ಜಾತ್ರೆಯನ್ನು ಎಲ್ಲರೂ ಶ್ರದ್ದಾ-ಭಕ್ತಿ ಆಚರಿಸಿಕೊಂಡು ಬರುತ್ತಿರುವುದು ಸಂಪ್ರದಾಯ ಈ ನಿಟ್ಟಿನಲ್ಲಿ ಜಾತ್ರೆಗೆಂದೆ ಅಕ್ಕಿಸಾಗರ ಗ್ರಾಮದ ಬಹುತೇಕ ಕುಟುಂಬಗಳು ಉದ್ಯೋಗಕ್ಕಾಗಿ ಬೆಂಗಳೂರು, ಮಹಾರಾಷ್ಟ್ರ, ಗೋವಾ, ಸೇರಿದಂತೆ ಹೊರ ರಾಜ್ಯಗಳಿಗೆ ತೆರಳಿದ್ದ ಜನರು ತಮ್ಮ ಕುಟುಂಬ ಸಮೇತ ಆಗಮಿಸಿ ಜಾತ್ರೆಯನ್ನು ಸಂಭ್ರಮಿಸಿ ದೇವಿಯ ದರ್ಶಾನಾಶಿರ್ವಾದ ಪಡೆದು ಕೃಪೆಗೆ ಪಾತ್ರರಾಗುತ್ತಾರೆ.
ಅದರಲ್ಲೂ ಈ ಬಾರಿಯ ಜಾತ್ರೆ ಪ್ರತಿ ಸಲಕ್ಕಿಂತಲೂ ಅದ್ದೂರಿ ಹಾಗೂ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಜಾತ್ರೆಯನ್ನು ಉತ್ತಮ ರೀತಿಯಲ್ಲಿ ಆಯೋಜಿಸಿದ ಗಣ್ಯರು ಮುಖಂಡರು ಭಕ್ತಿ ಜತೆಗೆ ಮನರಂಜನೆ ಕ್ರೀಡೆ ಇತ್ಯಾದಿ ಕೊಡುಗೆ ನೀಡಿದ್ದಾರೆ ಇದರಿಂದ ಈ ಬಾರಿಯ ಜಾತ್ರೆ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.
ಗ್ರಾಮದೇವಿ ಜಾತ್ರಾ ಕಮೀಟಿ ಸದಸ್ಯರು. ಅಕ್ಕಿಸಾಗರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 