ಕಾಬುಲ್, ಡಿ 1- ಅಫ್ಗಾನಿಸ್ತಾದ ಪೂರ್ಷ ಖೋಸ್ಟ್ ಪ್ರಾಂತ್ಯದ ಕಾರೊಂದರ ಮೇಲೆ ನಡೆಸಿದ ವಾಯುದಾಳಿಯಲ್ಲಿ ಒಂದು ಹಸುಗೂಸು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಆಗತಾನೇ ಮಗುವಿಗೆ ಜನ್ಮ ನೀಡಿದ ತಾಯಿಯನ್ನು ಮನೆಗೆ ಕರೆದೊಯ್ಯುತ್ತಿದ್ದ ಕಾರಿನ ಮೇಲೆ ಕೆಲ ವಿದೇಶಿ ಶಕ್ತಿಗಳು ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಸ್ಪುಟ್ನಿಕ್ ಗೆ ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು, ಒಂದು ಹಸುಗೂಸು, ಆ ಮಗುವಿನ ತಂದೆ ಮತ್ತೋರ್ವ ಆ ಗ್ರಾಮದ ನಿವಾಸಿಯಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಖೋಸ್ಟ್ ರಾಜ್ಯಪಾಲರ ವಕ್ತಾರ ತಾಲೆಬ್ ಮಂಗಲ್, ಮೃತರನ್ನು ಗುರುತಿಸುವ ಹಾಗೂ ಘಟನೆಯ ಹಿಂದಿನ ಕೈಗಳನ್ನು ಗುರುತಿಸುವ ತನಿಖೆ ನಡೆಸಲಾಗುವುದು ಎಂದಿದ್ದಾರೆ.