ಅಪ್ಘಾನಿಸ್ತಾನ: ನೆಲಬಾಂಬ್‌ ಸ್ಫೋಟ, 10 ಮಂದಿ ಸಾವುಖೋಸ್ಟ್,

ಅಫ್ಘಾನಿಸ್ತಾನ, ಡಿ.17 ಅಫ್ಘಾನಿಸ್ತಾನದ ಪೂರ್ವ ಖೋಸ್ಟ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ನೆಲಬಾಂಬ್‌ ಸ್ಫೋಟದಲ್ಲಿ ಮೂವರು ಮಕ್ಕಳು ಸೇರಿದಂತೆ ಹತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ಖಚಿತಪಡಿಸಿದ್ದಾರೆ.ಅಲಿ ಶಿರ್ ಜಿಲ್ಲೆಯಲ್ಲಿ ಸರಿಸುಮಾರು ಬೆಳಗ್ಗೆ ಗಂಟೆಗೆ (ಸ್ಥಳೀಯ ಕಾಲಮಾನ) ಸ್ಫೋಟ ಸಂಭವಿಸಿದೆ, ವಾಹನವೊಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ)ದ ಚಲಿಸಿದಾಗ ಸ್ಫೋಟ ಉಂಟಾಗಿ ಈ ದುರಂತ ಸಂಭವಿಸಿದೆ ಎಂದು ವಕ್ತಾರ ಹೈದರ್  ಆದಿಲ್ ಅವರು ಕ್ಸಿನ್ಹುವಾಕ್ಕೆ ತಿಳಿಸಿದರು.ರಸ್ತೆಯುದ್ಧಕ್ಕೂ ತಾಲಿಬಾನ್ ಉಗ್ರ ಗುಂಪು ಐಇಡಿ ನೆಟ್ಟಿದೆ ಎಂದು ಅಧಿಕಾರಿಗಳು ದೂರಿದ್ದಾರೆ. ರಸ್ತೆ ಬದಿಯ ಬಾಂಬ್ ಮತ್ತು ನೆಲ ಬಾಂಬ್‌ ಇಡಲು, ತಾಲಿಬಾನ್ ಉಗ್ರರು ಮನೆಯಲ್ಲಿ ತಯಾರಿಸಿದ ಐಇಡಿಗಳನ್ನು ಬಳಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ