ಕಾಬೂಲ್, ಅ 09: ಕಳೆದ ತಿಂಗಳು ದಕ್ಷಿಣ ಅಫ್ಘಾನಿಸ್ತಾನದಲ್ಲಿ ಅಮೆರಿಕ-ಅಫ್ಘಾನ್ ಸೇನಾ ಜಂಟಿ ದಾಳಿಯಲ್ಲಿ ಅಲ್-ಖೈದಾದ ದಕ್ಷಿಣ ಏಷ್ಯಾ ಶಾಖೆಯ ನಾಯಕ ಅಸಿಮ್ ಉಮರ್ ಸಾವನ್ನಪ್ಪಿದ್ದಾನೆ ಎಂದು ಆಫ್ಘನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಾರತೀಯ ಉಪಖಂಡದಲ್ಲಿ 2014 ರ ಆರಂಭದಿಂದಲೂ ಅಲ್-ಖೈದಾವನ್ನು ಮುನ್ನಡೆಸಿದ ಅಸಿಮ್ ಉಮರ್, ಕಳೆದ ಸೆಪ್ಟೆಂಬರ್ 23 ರಂದು ಹೆಲ್ಮಂಡ್ ಪ್ರಾಂತ್ಯದ ಮೂಸಾ ಖಾಲಾ ಜಿಲ್ಲೆಯ ತಾಲಿಬಾನ್ ಕಾಂಪೌಂಡ್ ಮೇಲೆ ನಡೆಸಿದ ದಾಳಿಯಲ್ಲಿ ಬಲಿಯಾಗಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿದರ್ೆಶನಾಲಯವು ಉಮರ್ ಪಾಕಿಸ್ತಾನಿ ಪ್ರಜೆ ಎಂದು ಹೇಳಿದ್ದರೆ, ಕೆಲವು ವರದಿಗಳು ಆತ ಭಾರತದಲ್ಲಿ ಜನಿಸಿದನೆಂದು ಹೇಳಿಕೊಂಡಿದೆ.
ಕಾಯರ್ಾಚರಣೆಯ ಸಮಯದಲ್ಲಿ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ 40 ನಾಗರಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ತನಿಖೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.