ದುಸ್ತರವಾದ ಆರೋಗ್ಯ ಸೇವೆಗಳು ಗ್ರಾಮೀಣರಿಗೆ ವರದಾನ: ಗುರವ
Affordable health services are a boon for rural areas: Guruv
ಬೆಳಗಾವಿ 12: ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದಡಿ ನುಡಿದಂತೆ ನಡೆದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಎಂದು ಮಾಡಿಗುಂಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಸ್ವಾತಿ ಗುರವ ಹೇಳಿದರು.
ಅವರು ನಿನ್ನೆ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ಗ್ರಾಮ ಪಂಚಾಯತ ಗುಂಜಿಯ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಅಂಗವಾಗಿ ಮಾತನಾಡುತ್ತಿದ್ದರು.
ಕಳೆದ ಒಂದು ವಾರದಲ್ಲೇ ಈ ಯೋಜನೆಗೆ ಚಾಲನೆ ನೀಡಿದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಆಡಳಿತ ಮಂಡಳಿಯು ಕೇವಲ ಎಂಟೇ ದಿನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ನಿಜಕ್ಕೂ ಇದು ಕೆಎಲ್‌ಇ ಸಂಸ್ಥೆಯ ಕಾರ್ಯ ಧಕ್ಷತೆಗೆ ಕೈಗನ್ನಡಿಯಾಗಿದೆ. ದುಸ್ತರವಾದ ಆರೋಗ್ಯ ಸೇವೆಗಳು ನಮ್ಮ ಈ ಭಾಗದ ಗ್ರಾಮೀಣ ಜನರಿಗೆ ನಿಜಕ್ಕೂ ವರದಾನವಾಗಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಉಪಸ್ಥಿತರಿದ್ದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಫ್ಯಾಮಿಲಿ ಮೆಡಿಸಿನ್ ವಿಭಾಗದ ವೈದ್ಯೆ ಡಾ. ಟ್ವಿಂಕಲ್ ಭೆಲ್ ಅವರು ಮಾತನಾಡುತ್ತಾ ಆರೊಗ್ಯ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ನಮ್ಮ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಮಾನ್ಯ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನದ ನಿಮಿತ್ತವಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀನರಿಗೆ ವೈದ್ಯರೊಂದಿಗೆ ಉಚಿತ ಸಂದರ್ಶನ, ತಡೆರಹಿತ ಸಂದರ್ಶನ ಹಾಗೂ ಇನ್ನುಳಿದ ಚಿಕಿತ್ಸೆಗಳ ಮೇಲೆ ತಕ್ಕಮಟ್ಟದ ರಿಯಾಯತಿಯನ್ನು ನೀಡಲಾಗುವದು. ಈ ದತ್ತು ಯೋಜನೆಯಲ್ಲಿ 4 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ 28 ಹಳ್ಳಿಗಳಿಗೆ ಈ ಯೋಜನೆಯನ್ನು ನೀಡಲಾಗಿದೆ ಆದ್ದರಿಂದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಸುಮಾರು 130 ಜನ ನಾಗರಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಅದರಲ್ಲಿ 20 ಜನರಿಗೆ ವಿವಿಧ ಆರೋಗ್ಯ ಸಮಸ್ಯೆಗಳಿರುವದು ತಿಳಿದು ಬಂದಿತು. ಈ ಎಲ್ಲ ಜನರಿಗೆ ಕೆ ಎಲ್ ಇ ಶತಮಾನೋತ್ಸವ ಚಆರಿಟೆಬಲ್ ಆಸ್ಪತ್ರೆ ಕಾರ್ಯನಿರ್ವಹನಾಧಿಕಾರಿ ಪ್ರಶಾಂತ ದೇಸಾಯಿ ಅವರು ಆಸ್ಪತ್ರೆಯ ಅತ್ಯಲ್ಪ ದರದ ಸೇವೆಗಳನ್ನು ಉಪಯೋಗಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.
ಮಾಡಿಗುಂಜಿ ಗ್ರಾಮ ಪಂಚಾಯತನ ಸರ್ವ ಸದಸ್ಯರುಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ ಅಭಿವೃದ್ದಿ ಅಧಿಕಾರಿ ರೇಖಾ ಪತ್ತಾರ, ಆಸ್ಪತ್ರೆಯ ವೈದ್ಯ ವಿದ್ಯಾರ್ಥಿ ಡಾ. ದಿಶಾ ಪಟೇಲ, ಜನಸಂಪರ್ಕಾಧಿಕಾರಿ ಸಂತೋಷ ಇತಾಪೆ ಸೇರಿದಂತೆ ವೈದ್ಯಕೀಯ ತಂಡವು ಬಾಗವಹಿಸಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 