ನವದೆಹಲಿ, ಜೂನ್ 14,ಮುಂಬರುವ 'ಮನ್ ಕಿ ಬಾತ್' ಬಾನುಲಿ ಕಾರ್ಯಕ್ರಮದ ಸಂಚಿಕೆಯಲ್ಲಿ ಮಾತನಾಡಬಯಸುವ ವಿಷಯಗಳು ಅಥವಾ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, '' ಈ ತಿಂಗಳ ಮನ್ ಕಿ ಬಾತ್ ಜೂ 28 ರಂದು ನಡೆಯಲಿದೆ. ಅದಕ್ಕೆ 2 ವಾರಗಳ ಸಮಯವಿದ್ದರೂ, ಈಗಲೇ ದಯವಿಟ್ಟು ನಿಮ್ಮ ಆಲೋಚನೆಗಳು ಮತ್ತು ಒಳಹರಿವು ಬರುವಂತೆ ನೋಡಿಕೊಳ್ಳಿ! ಇದು ಗರಿಷ್ಠ ಸಂಖ್ಯೆಯ ಕಾಮೆಂಟ್‌ಗಳು ಮತ್ತು ಫೋನ್ ಕರೆಗಳನ್ನು ಪಡೆಯಲು ನನಗೆ ಸಹಾಯ ಮಾಡುತ್ತದೆ, '' ಎಂದು ತಿಳಿಸಿದ್ದಾರೆ.
ಜನರೊಂದಿಗೆ ಮುಖ್ಯವಾದ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.ನಿಮಗೆ ಕೋವಿಡ್-19 ವಿರುದ್ಧದ ಹೋರಾಟ ಮತ್ತು ಇದಕ್ಕೆ ಹೆಚ್ಚುವರಿಯಾಗಿ ಹಲವು ವಿಷಯಗಳ ಕುರಿತು ಹೇಳಲು ಸಾಕಷ್ಟು ವಿಷಯಗಳಿಗೆ ಎಂಬುದು ನನಗೆ ಖಾತರಿಯಿದೆ ಎಂದು ಪ್ರಧಾನಿ ಹೇಳಿದ್ದಾರೆ.ಜನರು ತಮ್ಮ ಅಭಿಪ್ರಾಯಗಳನ್ನು Open Forum MyGov ಅಥವಾ ಟೋಲ್ ಫ್ರೀ ಸಂಖ್ಯೆ 1800-11-7800ಗೆ ಕರೆ ಮಾಡಿ ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿ ತಮ್ಮ ಭಾಷೆಯನ್ನು ಮುದ್ರಿಸಬಹುದಾಗಿದೆ.ಕೆಲವು ಮುದ್ರಿತ ಸಂದೆಶಗಳು ಪ್ರಸಾರದ ಭಾಗ ಕೂಡ ಆಗಬಹುದು. ಮಾಸಿಕ ಮನ್ ಕೀ ಬಾತ್ ಕಾರ್ಯಕ್ರಮ ಜೂ 28ರಂದು 11 ಗಂಟೆಗೆ ಪ್ರಸಾರವಾಗಲಿದೆ.