ಮುಂದುವರಿದ ನ್ಯೂಜಿಲ್ಯಾಂಡ್ ಕಾಡ್ಗಿಚ್ಚು

ವೆಲ್ಲಿಂಗ್ಟನ್, ಜ 08 ನ್ಯೂಜಿಲ್ಯಾಂಡ್ನಲ್ಲಿ ಸೋಮವಾರ ಕಾಣಿಸಿಕೊಂಡ ಕಾಡ್ಗಿಚ್ಚು ಮುಂದುವರಿದಿದ್ದು, 350 ಹೆಕ್ಟೇರ್ ವರೆಗೆ ವಿಸ್ತರಿಸಿದೆ ಅಗ್ನಿಶಾಮಕ ಸಿಬ್ಬಂದಿ ಕೆನ್ನಾಲಿಗೆಯನ್ನು ತಡೆಗಟ್ಟಲು ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಬಲವಾದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಿಸುತ್ತಿರುವ ಬೆಂಕಿಯನ್ನು ನಿಯಂತ್ರಿಸುವುದು ಅಗ್ನಿಶಾಮಕ ತಂಡಕ್ಕೆ ಪ್ರಯಾಸವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಕಾಡಿನ ಸ್ಕಿಡ್ ತಾಣಗಳು ಉರಿಯುತ್ತಿರುವುದರಿಂದ ಬೆಂಕಿಯಿಂದ ಇನ್ನೂ ಹೊಗೆ ಬರುತ್ತಿದೆ. ವಾರಾಂತ್ಯದವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಸ್ಥೆ ತಿಳಿಸಿದೆ. ಅಗ್ನಿಶಾಮಕ ದಳದವರು ಕನಿಷ್ಠ ವಾರದ ಕೊನೆಯವರೆಗೂ ಸೈಟ್ನಲ್ಲಿ ಉಳಿಯುವ ನಿರೀಕ್ಷೆಯಿದೆ. ಏತನ್ಮಧ್ಯೆ ನೆರೆಯ ಆಸ್ಟ್ರೇಲಿಯಾ ಈವರೆಗಿನ ಇತಿಹಾಸದಲ್ಲೆ ಅತಿದೊಡ್ಡ ಕಾಡ್ಗಿಚ್ಚನ್ನು ಕಂಡಿದ್ದು, ಈಗಾಗಲೇ ಕನಿಷ್ಠ 25 ಸಾವಿಗೆ ಕಾರಣವಾಗಿದೆ. ವಿನಾಶಕಾರಿ ಬೆಂಕಿಯನ್ನು ಎದುರಿಸುವ ಪ್ರಯತ್ನದಲ್ಲಿ ಆಸ್ಟ್ರೇಲಿಯಾಗೆ ಸಹಕರಿಸಲು ನ್ಯೂಜಿಲೆಂಡ್ ನಾಗರಿಕ ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆ ವಿಮಾನಗಳು ಮತ್ತು ಸೇನಾ ಸಿಬ್ಬಂದಿಯನ್ನು ಕಳುಹಿಸಿದೆ.