ಹದಿಹರೆಯವು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಪರಿವರ್ತನೆಯ ಹಂತ: ತಾವರಗೇರಿ
Adolescence is a transitional stage between childhood and adulthood: Thavarageri
ಧಾರವಾಡ 24: ಹದಿಹರೆಯವು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಪರಿವರ್ತನೆಯ ಹಂತವಾಗಿದ್ದು, ವಿವಿಧ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಮಕ್ಕಳು ಅನುಭವಿಸುತ್ತಾರೆ ಎಂದು ಹಿರಿಯ ತಜ್ಞೆ ಡಾ.ಶರಯೂ ತಾವರಗೇರಿ ಹೇಳಿದರು.
ಇಲ್ಲಿನ ಧಾರವಾಡ ಲಯನ್ಸ್ ಸಂಸ್ಥೆಯು ಸರಕಾರಿ ಮಾದರಿ ಪ್ರಾಥಮಿಕ ಪ್ರಾಯೋಗಿಕ ಶಾಲೆಯಲ್ಲಿ ಏರಿ್ಡಸಿದ ಹದಿಹರೆಯದ ಬಾಲಕಿಯರ ತಿಳುವಳಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಹದಿಹರೆಯದ ಹುಡುಗಿಯರ ದೇಹದಲ್ಲಿ ಉಂಟಾಗುವ ಋತುಚಕ್ರ, ಹಾರ್ಮೋನ್ ಬದಲಾವಣೆಗಳು ಮತ್ತು ಇತರ ಶಾರೀರಿಕ ಬೆಳವಣಿಗೆಯ ಪ್ರಕ್ರಿಯೆ ಬಗ್ಗೆ ಸ್ವಾರಸ್ಯಕರವಾಗಿ ಸೂಕ್ತ ಮಾಹಿತಿ ನೀಡಿದರು.
ಹೆಣ್ಣು ಮಕ್ಕಳು ಉತ್ತಮ ಪೌಷ್ಟಿಕಾಂಶ, ಸ್ವಚ್ಚತೆ ಮತ್ತು ನಿಯಮಿತ ವ್ಯಾಯಾಮದಂತಹ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಎಮ್. ಆರ್. ಹಿರೇಮಠ ಮಾತನಾಡಿ , ಧಾರವಾಡ ಲಯನ್ಸ್ ಸಂಸ್ಥೆಯವರ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 85 ಬಾಲಕಿಯರಿಗೆ ಸ್ಯಾನಟರಿ ನ್ಯಾಪಕಿನ್ಸ್ ಮತ್ತು ನೋಟಬುಕ್ಸ್ ಗಳನ್ನು ವಿತರಿಸಲಾಯಿತು.
ಕವಿತಾ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶ್ರೀಕಾಂತ ದೇವಗಿರಿ, ಡಾ.ಕೆ.ವಿ.ಅಚ್ಯುತ, ಅಮೃತಾ ಜೋಶಿ, ರಶ್ಮೀ ಭಾರದ್ವಾಜ್,ಸಂಧ್ಯಾ ಅರಬಟ್ಟಿ,ಶಶಿಕಲಾ ನಾಯ್ಕರ ಮತ್ತು ಶಾಲೆಯ ಸಿಬ್ಬಂದಿ ಹಾಜರಿದ್ದರು. ಕವಿತಾ ಅಂಗಡಿ ಸ್ವಾಗತಿಸಿದರು. ಶೈಲಾ ಕರಗುದರಿ ಪರಿಚಯಿಸಿದರು. ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ನಿರೂಪಿಸಿದರು. ಡಾ.ರಾಜಶ್ರೀ ಗುದಗನವರ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 