ಅತಿಕ್ರಮಿಸಿದ ರಸ್ತೆಯನ್ನು ತೆರವುಗೊಳಿಸಿದ ಆಡಳಿತಾಧಿಕಾರಿ
Administrative officer clears encroached road
ಲೋಕದರ್ಶನ ವರದಿ
ಕಾರವಾರ 19:- ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿರಾಷ್ಟ್ರೀಯ ಹೆದ್ದಾರಿಯಿಂದ ಸದರಿ ಐಸ್ ಫ್ಯಾಕ್ಟರಿ ರವರೆಗೆ ಅನಾಧಿಕಾಲದಿಂದ ಇದ್ದ ರಸ್ತೆಯು ಕಾಲಕಾಲಕ್ಕೆ ಸುಧಾರಣೆಗೊಂಡು ಕಾಂಕ್ರೀಟ್ ರಸ್ತೆಯಾಗಿ ಮಾರ್ಾಡಾಗಿದ್ದು, ಆದರೆ ಇತ್ತಿಚಿಗೆ ಏಕಾಏಕಿ ಚೆಂಡಿಯಾ ಗ್ರಾಮದ ರುಕ್ಕಾಂಗದ ನಾಯ್ಕ ಇವರು ಸದರಿ ರಸ್ತೆಗೆ ಅಡ್ಡವಾಗಿ ಒಂದು ತಡೆಗೋಡೆಯನ್ನು ನಿರ್ಮಿಸಿ, ರಸ್ತೆಯಲ್ಲಿ ಬಂದು ಹೋಗುವ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಿರುತ್ತಾರೆ.
ಈ ಕುರಿತಂತೆ ಚೆಂಡಿಯಾ ಗ್ರಾಮದ ಗ್ರಾಮಸ್ಥರು ನೀಡಿದ ಅರ್ಜಿ, ಭೂದಾಖಲೆಗಳ ಸಹಾಯಕ ನಿರ್ದೇಶಕರು ಕಾರವಾರ ಅವರ ಪತ್ರ, ಉಪ ತಹಶೀಲಾರ ಬಾಡರವರ ವರದಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಕಾನೂನು ಸಲಹೆಗಾರರ ಸಲಹೆಯಂತೆ, ಚೆಂಡಿಯಾ ಗ್ರಾಮ ಪಂಚಾಯತ್‌ನ ಆಡಳಿತಾಧಿಕಾರಿ ಪ್ರಶಾಂತ್ ಎಚ್.ಎಸ್. ಅವರ ನೇತೃತ್ವದಲ್ಲಿ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಹಕಾರದೊಂದಿಗೆ ರಸ್ತೆಗೆ ಅಡ್ಡವಾಗಿ ಕಟ್ಟಿರುವ ಸದರಿ ತಡೆಗೋಡೆಯನ್ನು ಶುಕ್ರವಾರ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 