ಕಂಪ್ಲಿ ಪುರಸಭೆಗೆ ನೇಮಕಗೊಂಡ ಆಡಳಿತಾಧಿಕಾರಿ : ಬಳ್ಳಾರಿ ಎಸಿ ಪ್ರಮೋದ್ ನೇಮಕ
Administrative Officer appointed for Kampli Municipality : Bellary AC Pramod appointed
ಕಂಪ್ಲಿ 21: ಇಲ್ಲಿನ ಪುರಸಭೆಗೆ ಬಳ್ಳಾರಿ ಉಪ ವಿಭಾಗಾಧಿಕಾರಿ ಪಿ.ಪ್ರಮೋದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ, ಜಿಲ್ಲಾಧಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಚುನಾಯಿತ ಕೌನ್ಸಿಲ್ ಅವಧಿ ಮುಕ್ತಾಯವಾಗಿರುವ ನಗರ, ಪುರಸಭೆಯಲ್ಲಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ವರೆಗೂ ಅವುಗಳ ದಿನನಿತ್ಯದ ಕಾರ್ಯನಿರ್ವಹಣೆಗೆ ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದಾರೆ. ಪುರಸಭೆ ಚುನಾಯಿತ ಸದಸ್ಯರ ಅಧಿಕಾರ 5 ವರ್ಷ. ಇದನ್ನ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವಂತೆ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ 23 ಜನ ಸದಸ್ಯರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಪುರಸಭೆಗೆ 12.11.2019ರಂದು ಚುನಾವಣೆ ನಡೆಯಿತು. 14.11.2019ರಂದು ಫಲಿತಾಂಶ ಪ್ರಕಟವಾಯಿತು.
6.11.2020ರಂದು ಪುರಸಭೆಗೆ ಮೊದಲ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಇವರ ಅಧಿಕಾರ 10.3.2023ರಂದು ಕೊನೆ ಗೊಂಡಿತು. 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪ್ರಕಟ ಸೇರಿ, 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಾಗಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪಟ್ಟಿ ಪ್ರಕಟವಾಗಲಿಲ್ಲ ಎನ್ನಲಾಗುತ್ತದೆ. 17.5.2023ರಂದು ಪುರಸಭೆ ಆಡಳಿತ ಅಧಿಕಾರವನ್ನು ಸಹಾಯಕ ಆಯುಕ್ತರು ವಹಿಸಿಕೊಂಡರು. ಮತ್ತೆ 2ನೇ ಅವಧಿ ಮೀಸಲು ಪ್ರಕಟವಾಗುವವರೆಗೂ 22.1.2025ರವರೆಗೆ ಚುನಾಯಿತ ಸದಸ್ಯರಿಗೆ ಅಧಿಕಾರ ದೊರೆಯಲಿಲ್ಲ. ಪುರಸಭೆ 2ನೇ ಅವಧಿಗೆ 23.1.2025ರಂದು ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪ್ರಕಟವಾಯಿತು. ಇವರು 2ವರ್ಷ 6ತಿಂಗಳು ಅಧಿಕಾರ ನಡೆಸಬೇಕು.
ಹೀಗಾಗಿ ಇವರ ಅವಧಿ 22.7.2027ರಂದು ಪೂರ್ಣ ಗೊಳ್ಳಲಿದ್ದು, ಮೊದಲ ಅವಧಿಗೆ ದೊರೆಕಿದ ಕಾಲಾವಕಾಶ 2ನೇ ಅವಧಿಗೂ ನ್ಯಾಯಾಲಯದ ಮೊರೆ ಹೋಗಿದ್ದರು. ಮೊದಲ ಅವಧಿಗೆ ಅಧಿಕಾರ ವಹಿಸಿಕೊಂಡ ದಿನದಿಂದ ಇವರ ಅವಧಿ 6.11.2025ರಂದು ಕೊನೆಗೊಳ್ಳಲಿದೆ. ಆದರೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪ್ರಕಟ ವಿಳಂಬದಿಂದ ಕಳೆದುಕೊಂಡ ಸಮಯವನ್ನು ಮುಂದು ವರಿಸಬೇಕು. ಸರಕಾರ ಪುರಸಭೆಗೆ ಆಡಳಿತ ಅಧಿಕಾರಿ ನೇಮಿಸ ಬಾರದೆಂದು ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಮತ್ತೆ ಧಾರವಾಡ ಕೋರ್ಟ್‌ಗೆ: ಕಾಯಿದೆಯಂತೆ ಪುರಸಭೆ ಸದಸ್ಯರಿಗೆ ಪೂರ್ಣ ವರ್ಷ ಆಡಳಿತ ನಡೆಸಲು ಅವಕಾಶ ನೀಡುವಂತೆ ಧಾರವಾಡ ಹೈಕೋರ್ಟ್‌ನಲ್ಲಿ ಸದಸ್ಯರೆಲ್ಲರೂ ಮೊರೆ ಹೋಗಿದ್ದೇವು. ನ್ಯಾಯಾಲಯ ನ.4ರವರೆಗೆ ಆಡಳಿತಾಧಿಕಾರಿ ನೇಮಕ ಮಾಡದಂತೆ ಮಧ್ಯಾಂತರ ಆದೇಶ ನೀಡಿತ್ತು. ಆದರೆ, ಜಿಲ್ಲಾಧಿಕಾರಿಗಳು 7.11.2025ರಿಂದ ಜಾರಿಯಾಗುವಂತೆ ಆಡಳಿತಾಧಿಕಾರಿಗಳನ್ನು ನೇಮಿಸಿದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮತ್ತೆ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 