ನವದೆಹಲಿ, ಜೂನ್ ೩೦: ಟಿಕ್ ಟಾಕ್ ಸೇರಿದಂತೆ ೫೯ ಮೊಬೈಲ್ ಆ?ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಟಿಕ್ ಟಾಕ್ ಇಂಡಿಯಾ ಮಂಗಳವಾರ ಹೇಳಿಕೆ ಬಿಡುಗಡೆಮಾಡಿ ದತ್ತಾಂಶ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ಕಾನೂನುಗಳಿಗೆ ಒಳಪಟ್ಟಿರುವುದಾಗಿ ಟಿಕ್ಟಾಕ್ ಇಂಡಿಯಾ ಸ್ಪಷ್ಟನೆ ನೀಡಿದೆ.ಭಾರತೀಯ ಬಳಕೆದಾರರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇತರ ವಿದೇಶಿ ಸರ್ಕಾರಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಅದು ಹೇಳಿದೆ. ಚೀನಾ ಸರ್ಕಾರಕ್ಕೂ ಕೂಡ ತಮ್ಮ ಮಾಹಿತಿಯನ್ನು ನೀಡಿಲ್ಲ. ಒಂದೊಮ್ಮೆ ಭವಿಷ್ಯದಲ್ಲಿ ಯಾರಾದರೂ ಮಾಹಿತಿ ಕೋರಿದರೂ ಅದನ್ನು ನಾವು ವಿರೋಧಿಸುತ್ತೇವೆ. ಬಳಕೆದಾರರ ಗೌಪ್ಯತೆ, ಮಾಹಿತಿ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ ಎಂದು ಟಿಕ್ಟಾಕ್ ಇಂಡಿಯಾ ಹೇಳಿದೆ.
ಟಿಕ್ ಟಾಕ್ ನಿಷೇಧಿಸಿದ ಹಿನ್ನಲೆಯಲ್ಲಿ ಭಾರತ ಸರ್ಕಾರಕ್ಕೆ ಬಳಕೆದಾರರ ಗೌಪ್ಯತೆ, ಮಾಹಿತಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿ ಒದಗಿಸಲು ತಾನು ಬದ್ದ ಎಂದು ಕಂಪನಿ ಹೇಳಿದೆ. ಅಪ್ ಸಂಬಂಧಿಸಿದಂತೆ ಕುರಿತು ತನಗೆ ವಿವರಣೆ ನೀಡಬೇಕು ಕಂಪನಿಯನ್ನು ಸರ್ಕಾರ ಕೋರಿದೆ ಎಂದು ಟಿಕೆಟ್ ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಟಿಕ್ಟಾಕ್ ಅಪ್ಲಿಕೇಶನ್ ಭಾರತದ ೧೪ ಭಾಷೆಗಳಲ್ಲಿ ಲಭ್ಯವಿದೆ. ಕಿರು ವೀಡಿಯೊ ಸೇವೆಯನ್ನು ಭಾರತದಾದ್ಯಂತ ಲಕ್ಷಾಂತರ ಜನರು ಬಳಸುತ್ತಿದ್ದಾರೆ. ಚೀನಾದ ಆ?ಯಪ್‌ಗಳಾದ ಟಿಕ್‌ಟಾಕ್, ಯುಸಿ ಬ್ರೌಸರ್, ವೀಚಾಟ್, ಶೇರ್ ಇಟ್ ಮತ್ತು ಕಾಮ್‌ಸ್ಕಾನರ್ ಅನ್ನು ಭಾರತ ಸರ್ಕಾರ ನಿಷೇಧಿಸಿದೆ. ಆಪ್‌ಗಳು ಭಾರತದ ಸಮಗ್ರತೆಗೆ ಹಾನಿ ಮಾಡುತ್ತವೆ ಎಂಬ ಕಾರಣಗಳನ್ನು ನೀಡಿ ಕೇಂದ್ರ ಸರ್ಕಾರ ನಿಷೇಧ ವಿಧಿಸಿದೆ.