ಲೋಕದರ್ಶನವರದಿ
ಮಹಾಲಿಂಗಪುರ: ಧರ್ಮಸ್ಥಳ ಗ್ರಾಮೀಣಾಬೀವೃದ್ದಿ ಯೋಜನೆಯ ಮದ್ಯವರ್ಜನೆಯ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾಥರ್ಿಗಳು ಜೀವನದಲ್ಲಿ ಮುಂದೆ ಸಂಪೂರ್ಣ ವ್ಯವಸ ಮುಕ್ತರಾಗಿ ಬದುಕನ್ನು ಬಂಗಾರವಾಗಿಸಿಕೊಳ್ಳಿರಿ ಎಂದು ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ಜರುಗಿದ ಧರ್ಮಸ್ಥಳ ಗ್ರಾಮೀಣಾಭೀವೃದ್ದಿ ಯೋಜನೆಯ 1424ನೇ ಮದ್ಯವರ್ಜನ ಶಿಬಿರದ ಸಮಾರೋಪದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಅವರು ಅತ್ಯಂತ ದುರ್ಬಲವಾಗಿರುವ ಮಾನವ ಜನ್ಮವನ್ನು ವ್ಯರ್ಥ ವ್ಯಸನಾದಿಗಳಲ್ಲಿ ಕಳೆಯುದಕ್ಕಿಂತ ವ್ಯವಸಮುಕ್ತರಾಗಿ, ಸತ್ಸಂಗ, ಸನ್ಮಾರ್ಗದಲ್ಲಿ ನಡೆದು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ ದುಶ್ಚಟಗಳು ಮನುಷ್ಯನನ್ನು ದೈಹಿಕ, ಮಾನಸಿಕ, ಆಥರ್ಿಕವಾಗಿ ನಷ್ಟಗಳನ್ನು ಮಾಡುವದರಿಂದ, ಶಿಬಿರದ ಪ್ರಯೋಜನ ಪಡೆದವರು ಭವಿಷ್ಯದಲ್ಲಿ ಸಂಪೂರ್ಣ ವ್ಯವಸನಮುಕ್ತರಾಗಿ ನಿಮ್ಮ ಬದಕನ್ನು ಪರಿವರ್ತನೆ ಮಾಡಿಕೊಂಡು ಕುಟುಂಬ ಸದಸ್ಯರೊಂದಿಗೆ ಉತ್ತಮ ಜೀವನವನ್ನು ನಡೆಸಿರಿ ಎಂದರು.
ನಾಗರಾಳದ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಶ್ರೀಶೈಲಗೌಡ ಪಾಟೀಲ, ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡಿ ಒಂದು ಸರಕಾರ ಮಾಡಿದೇ ಇರುವಷ್ಟು ಜನೋಪಯೋಗಿ ಯೋಜನೆ ಮತ್ತು ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಮಾಡುತ್ತಿರುವದು ಶ್ಲಾಘನೀಯ. ಮನುಷ್ಯನಿಗೆ ಇರುವ ಆಯುಷ್ಯವನ್ನು ವ್ಯಸನಮುಕ್ತರಾಗಿ ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜ ಸೇವೆಯಲ್ಲಿ ಕಳೆದು ಮನುಷ್ಯನ ಬದುಕಿಗೆ ನಿಜವಾದ ಅರ್ಥವನ್ನು ಕಲ್ಪಿಸಿಕೊಡಬೇಕು ಎಂದರು.
ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ವಾಯ್.ಎ.ನಾಗೇಶ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿದರ್ೇಶಕ ಮಹೇಶ ಎಂ.ಡಿ., ಠಾಣಧಿಕಾರಿ ಆರ್. ವಾಯ್.ಬೀಳಗಿ, ಶಿಕ್ಷಕ ಬಸವರಾಜ ಮೇಟಿ ಮಾತನಾಡಿದರು. ಶಿಬಿರದಲ್ಲಿ 97 ಜನ ಶಿಬಿರಾಥರ್ಿಗಳು ಭಾಗವಹಿಸಿ, ಜೀವನದಲ್ಲಿ ಇನ್ನು ಮುಂದೆ ವ್ಯವಸಮುಕ್ತರಾಗಿ ಬಾಳುತ್ತೇವೆ ಎಂದು ಪ್ರಮಾಣ ಮಾಡಿದರು.
ಅಶೋಕ ಅಂಗಡಿ, ಕಲ್ಲಪ್ಪ ಕಡಬಲ್ಲವರ, ಅಸೋಕ ಬಾಣಕಾರ, ಎಫ್, ಎಚ್.ಕುಂಟೋಜಿ, ಶಂಕರ ಮುದೇನೂರ, ಶ್ರೀಶೈಲ ಕುರಿ, ಪುರಸಭೆ ಸದಸ್ಯ ರವಿ ಜವಳಗಿ, ಅಕ್ಕಿಮರಡಿಯ ಎಂ.ಎಸ್.ಕಂಬಿ, ಸುರೇಶ ಮಡಿವಾಳರ, ವಿರೇಶ ಆಸಂಗಿ, ಶ್ರೀಶೈಲ ಕೋಟಿ, ಮಹಾಲಿಂಗ ಹೊಸೂರ, ವಿಶಾಲ ಚೌದ್ರಿ, ಶಂಕರಗೌಡ ಪಾಟೀಲ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ತಾಲೂಕಾ ಯೋಜನಾಧಿಕಾರಿ ಧನಂಜಯಕುಮಾರ, ಶಿಬಿರದ ಆರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ, ಎಚ್. ಲೋಕೇಶ, ಮಹಾದೇವಿ ಮೇಡಂ ಸೇರಿದಂತೆ ಹಲವರು ಇದ್ದರು.
ಶಿಬಿರಾಧಿಕಾರಿ ದೇವಿಪ್ರಸಾದ ಸ್ವಾಗತಿಸಿದರು. ಮೇಲ್ವಿಚಾರಕ ಸೋಮಲಿಂಗ ಗರಗ ನಿರೂಪಿಸಿ-ವಂದಿಸಿದರು.