ಮಲ್ಲಿಗವಾಡ ಗ್ರಾಮ ಅಣ್ಣಿಗೇರಿ ತಾಲ್ಲೂಕಿಗೆ ಸೇರಿಸಿ: ಧೂಪದಮಠ ಒತ್ತಾಯ
Add Malligawad village to Annigeri taluk
ಹುಬ್ಬಳ್ಳಿ 03: ತಾಲೂಕಿನ ಮಲ್ಲಿಗವಾಡ ಗ್ರಾಮ ಪ್ರಸ್ತುತ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿದೆ. ಕೇವಲ 8 ಕಿ.ಮೀ ಅಂತರದಲ್ಲಿರುವ ಅಣ್ಣಿಗೇರಿ ತಾಲ್ಲೂಕಿಗೆ ಮಲ್ಲಿಗವಾಡ ಗ್ರಾಮ ಸೇರಿಸುವಂತೆ ವೀರೇಶ ಧೂಪದಮಠ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿನಾಂಕ 29-9-2023 ರಂದು ನೀಡಿದ ಅರ್ಜಿ ಎರಡು ವರ್ಷ ಸನ್ನಿಹಿತವಾಗಿದೆ. ಆದರೂ ಮಲ್ಲಿಗವಾಡ ಗ್ರಾಮ ಅಣ್ಣಿಗೇರಿ ತಾಲ್ಲೂಕಿಗೆ ಸೇರಿಸಿ, ಮಲ್ಲಿಗವಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮಜ್ಜಿಗುಡ್ಡ ಗ್ರಾಮ ಸೇರಿಸುವಂತೆ ಸಲ್ಲಿಸಿದ ಅರ್ಜಿಗೆ ಧಾರವಾಡ ಜಿಲ್ಲಾಧಿಕಾರಿ ಮತ್ತು ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಯಾವುದೇ ಉತ್ತರ ಬಂದಿಲ್ಲ. ರಾಜ್ಯ ಮಟ್ಟದ ಅಧಿಕಾರಿಗಳು ಮಲ್ಲಿಗವಾಡ ಗ್ರಾಮ ಅಣ್ಣಿಗೇರಿ ತಾಲ್ಲೂಕಿಗೆ ಸೇರಿಸಿ, ಮಲ್ಲಿಗವಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮಜ್ಜಿಗುಡ್ಡ ಗ್ರಾಮ ಸೇರಿಸುವಂತೆ ಸಲ್ಲಿಸಿದ ಮನವಿಗೆ, ಸದರಿ ವಿಷಯದ ಪ್ರಸ್ತಾವನೆ ಸಮಯೋಚಿತ ಮಾರ್ಗದಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಹುಬ್ಬಳ್ಳಿ ಗ್ರಾಮೀಣ ತಾಲೂಕು 40 ಕಿ.ಮೀ ದೂರ ಆಗಲಿದ್ದು, ಕೇವಲ 8 ಕಿ.ಮೀ ಅಂತರದಲ್ಲಿರುವ ಅಣ್ಣಿಗೇರಿ ತಾಲ್ಲೂಕಿಗೆ ಮಲ್ಲಿಗವಾಡ ಗ್ರಾಮ ಸೇರಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಆದ್ದರಿಂದ ಡಿಸೆಂಬರ್ 31 ರೊಳಗೆ ರಾಜ್ಯ ಸರ್ಕಾರ ಮತ್ತು ಧಾರವಾಡ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಅಣ್ಣಿಗೇರಿ ತಾಲ್ಲೂಕಿಗೆ ಮಲ್ಲಿಗವಾಡ ಗ್ರಾಮ ಸೇರಿಸಿ, ಮಲ್ಲಿಗವಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮಜ್ಜಿಗುಡ್ಡ ಗ್ರಾಮ ಸೇರಿಸಬೇಕು ಎಂದು ವಿನಂತಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 