ನಟಿ ಐಂದ್ರಿತಾ ರೇ @ 35

ಬೆಂಗಳೂರು, ಏ 16, ಸ್ಯಾಂಡಲ್ ವುಡ್ ನಟಿ   ಐಂದ್ರಿತಾ ರೇ ಇಂದು 35 ನೇ ವರ್ಷಕ್ಕೆ ಕಾಲಿರಿಸಿದ್ದು, ಕೊರೋನಾ  ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್, ನಟಿ ಪ್ರಿಯಾಂಕಾ ಉಪೇಂದ್ರ   ಸೇರಿದಂತೆ ಚಿತ್ರರಂಗದ ಪ್ರಮುಖರು ಸಾಮಾಜಿಕ ಜಾಲತಾಣದ ಮೂಲಕ ಐಂದ್ರಿತಾಗೆ   ಶುಭ ಕೋರಿದ್ದಾರೆ.
ಐಂದ್ರಿತಾಗೆ ಶುಭ   ಕೋರಿರುವ ನಟ ಕಿಚ್ಚ ಸುದೀಪ್ "ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲು ನಗುತ್ತಿರಿ. ದಿಗಂತ್ ಅವರಿಗೂ ನನ್ನ ಪ್ರೀತಿ" ಎಂದು ಹೇಳಿದ್ದಾರೆ.