ಜಾಟ್‌ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ‘ಜಾಟ್‌–2’ ಸಿನಿಮಾ ಘೋಷಿಸಿದ ನಟ ಸನ್ನಿ ದೇವಲ್‌

Actor Sunny Deol announces 'Jaat-2' after the success of Jaat

ನವದೆಹಲಿ 18: ಜಾಟ್‌ ಸಿನಿಮಾದ  ಮುಂದುವರಿದ ಭಾಗವಾಗಿ ‘ಜಾಟ್‌–2’ ನಿರ್ಮಿಸಲಾಗುವುದು ಎಂದು ನಟ ಸನ್ನಿ ದೇವಲ್ ಹೇಳಿದ್ದಾರೆ. 

ಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಚಿತ್ರದ ವಿಷಯವನ್ನು  ಸನ್ನಿದೇವಲ್ ಹಂಚಿಕೊಂಡಿದ್ದಾರೆ. ‘ಜಾಟ್‌–2’ ಚಿತ್ರಕ್ಕೂ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ.

ಏ. 10ರಂದು ತೆರೆಕಂಡ ಜಾಟ್‌ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಂದೀಪ್‌ ಹೂಡಾ, ವಿನೀತ್ ಕುಮಾರ್ ಸಿಂಗ್ ಮತ್ತು ಸಯಾಮಿ ಖೇರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಈವರೆಗೂ ಈ ಚಿತ್ರ ₹70 ಕೋಟಿ ಗಳಿಕೆ ಕಂಡಿದೆ.