ಮತದಾರರ ಪಟ್ಟಿ ಪರಿಷ್ಕರಣೆಗೆ ಸಕ್ರಿಯ ಪಾಲ್ಗೊಳ್ಳಿ: ಮಹಾಂತೇಶ್ ದೊಡ್ಡಗೌಡರ ಕರೆ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಕ್ರಿಯ ಪಾಲ್ಗೊಳ್ಳಿ: ಮಹಾಂತೇಶ್ ದೊಡ್ಡಗೌಡರ ಕರೆ  Actively participate in the revision of the voter list: Mahantesh Dodda Gowda's call

ನೇಸರಗಿ 30: ಮಂಗಳವಾರದಿಂದ ಆರಂಭವಾಗಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ಅಗತ್ಯ ಅಧಿಕೃತ ದಾಖಲೆಗಳನ್ನು ಒದಗಿಸುವ ಮೂಲಕ ಚುನಾವಣಾ ಆಯೋಗದ ಪರಿಷ್ಕರಣೆ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಕರೆ ನೀಡಿದರು.  

ಮದನಬಾವಿ ಗ್ರಾಮದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, **"ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವೂ ಆಗಿದೆ. ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಿಎಲ್‌ಒ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಹಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು," ಎಂದು ಹೇಳಿದರು.  

ಈ ಸಂದರ್ಭದಲ್ಲಿ ಕಿತ್ತೂರು ತಹಸೀಲ್ದಾರ ಕೆ.ಆರ್‌. ಪಾಟೀಲ, ಕಿತ್ತೂರು ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಶಿವಪ್ಪ ಗುಜನಾಳ, ನಾಮದೇವ ಸಿದ್ದಮ್ಮನವರ, ಮಾಜಿ ಅಧ್ಯಕ್ಷ ಯಲ್ಲನಗೌಡ ದೊಡ್ಡಗೌಡರ, ರುದ್ರ​‍್ಪ ಕೊಳದುರ, ಅಡಿವೆಪ್ಪ ಪೂಜೇರಿ, ನಿಂಗನಗೌಡ ದೊಡ್ಡಗೌಡರ, ಶ್ರೀಶೈಲ್ ಕಮತಗಿ, ಸಿದ್ದು ಬೋಳನ್ನವರ, ಅಜ್ಜಪ್ಪ ಹಮ್ಮಿಣಿ, ರಾಮನಗೌಡ ದೊಡ್ಡಗೌಡರ, ಅಣ್ಣಯ್ಯ ನಂಜರಗಿ, ಬಸವರಾಜ್ ನಂಜರಗಿ, ಪ್ರದೀಪ ದೊಡ್ಡಗೌಡರ, ಬಸವರಾಜ್ ಬದ್ರಿ, ಪ್ರಕಾಶ್ ಹೊಸಮನಿ, ಕೆಚ್ಚೆಪ್ಪ ಕುರಬರ, ಪ್ರಕಾಶ್ ಹಳಮನಿ ಸೇರಿದಂತೆ ಬಿಎಲ್‌ಒ ಅಧಿಕಾರಿಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.