ಕೊಪ್ಪಳ 22: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲ ತಂಡೆ ಕಾಲುವೆಗಳ ವ್ಯಾಪ್ತಿಯ ಹಿಂಗಾರು ಬೆಳೆಗಳು ಒಣಗದಂತೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು, ಕೃಷಿ ಮತ್ತು ಸಾರಿಗೆ ಸಚಿವರು ಹಾಗೂ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.
ಅವರು ಇಂದು (ನ.21) ಮುನಿರಾಬಾದ್ ಕಾಡಾ ಕಚೇರಿಯಲ್ಲಿ ನಡೆದ 113ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ನೀರು ಒದಗಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ಕ್ರಮ ವಹಿಸಬೇಕು. ಜಲಾಶಯದಿಂದ ಕಾಲುವೆಗಳಿಗೆ ಬಿಡುವ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮಕೈಗೊಳ್ಳಿ. ಪ್ರಸ್ತುತ ವಾಡಿಕೆ ಮಳೆ ಉತ್ತಮವಾಗಿದ್ದು, ತಲಾಶಯದಲ್ಲಿ ನೀರು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗಿದೆ. ಇದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅನಧೀಕೃತವಾಗಿ ನೀರು ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ನೀರು ಅನಧೀಕೃತವಾಗಿ ಬಳಕೆಯಾಗದಂತೆ ಅಚ್ಚು ಕಟ್ಟಾಗಿ ನೀರು ನಿರ್ವಹಣೆ ಮಾಡಬೇಕು. ಅಚ್ಚುಕಟ್ಟು ಪ್ರದೇಶವನ್ನು ಹೊರತು ಪಡಿಸಿ ಅನಧೀಕೃತ ಸ್ಥಳಕ್ಕೆ ನೀರು ಹೋಗುತ್ತಿರುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿಸೆಂಬರ್. 01 ರಿಂದ 31 ರವರೆಗೆ 3800 ಕ್ಯೂಸೆಕ್ಸನಂತೆ 31 ದಿನಗಳವರೆಗೆ ನೀರು ಬಿಡುಗಡೆ. ಈ ಅವಧಿಯಲ್ಲಿ ಡಿ. 15ರ ಬೆಳಗ್ಗೆ 08 ರಿಂದ 27ರ ಬೆಳಗ್ಗೆ 08 ರವರೆಗೆ ತಖ್ತೆ-1ರಲ್ಲಿ ತೋರಿಸಿದಂತೆ ವಡ್ಡರಹಟ್ಟಿ, ಸಿಂಧನೂರು ಮತ್ತು ಸಿರವಾರ ವಿಭಾಗಗಳ ವಿತರಣಾ ಕಾಲುವೆಗಳನ್ನು ಆನ್/ಆಫ್ ಮಾಡಿ ಮೈಲ್-104 ರಲ್ಲಿ ಬರುವ ಸಮತೋಲನ ಜಲಾಶಯಕ್ಕೆ ಪೂರೈಕೆ ಮಾಡಿ ಸಂಗ್ರಹಿಸಿಕೊಂಡು ಯರಮರಸ್ ವಿಭಾಗದ ಅಚ್ಚುಕಟ್ಟಿನಲ್ಲಿ ನಿಂತಿರುವ ಬೆಳೆಗಳನ್ನು ಸಂರಕ್ಷಿಸುವುದು ಹಾಗೂ ರಾಯಚೂರು ಮತ್ತು ಇತರೆ ಕುಡಿಯುವ ನೀರು ಯೋಜನೆಗಳಿಗೆ ನೀರು ಒದಗಿಸುವುದು.
2020ರ ಜನವರಿ. 01 ರಿಂದ 31 ರವರೆಗೆ 3400 ಕ್ಯೂಸೆಕ್ಸನಂತೆ, ಫೆಬ್ರವರಿ. 01 ರಿಂದ ಮಾಚರ್್. 31 ರವರೆಗೆ 3000 ಕ್ಯೂಸೆಕ್ಸನಂತೆ 60 ದಿನಗಳವರೆಗೆ ನೀರು ಬಿಡುಗಡೆ. ಏಪ್ರೀಲ್. 01 ರಿಂದ 10 ರವರೆಗೆ ನೀರು ನಿಲುಗಡೆ. ಈ ಅವಧಿಯಲ್ಲಿ ಫೆಬ್ರವರಿ. 16ರ ಬೆಳಗ್ಗೆ 08 ರಿಂದ 25ರ ಬೆಳಗ್ಗೆ 08 ರವರೆಗೆ ತಖ್ತೆ-2ರಲ್ಲಿ ತೋರಿಸಿದಂತೆ ವಡ್ಡರಹಟ್ಟಿ, ಸಿಂಧನೂರು ಮತ್ತು ಸಿರವಾರ ವಿಭಾಗಗಳ ವಿತರಣಾ ಕಾಲುವೆಗಳನ್ನು ಆನ್/ಆಫ್ ಮಾಡಿ ಮೈಲ್-104 ರಲ್ಲಿ ಬರುವ ಸಮತೋಲನ ಜಲಾಶಯಕ್ಕೆ ಪೂರೈಕೆ ಮಾಡಿ ಸಂಗ್ರಹಿಸಿಕೊಂಡು ಯರಮರಸ್ ವಿಭಾಗದ ಅಚ್ಚುಕಟ್ಟಿನಲ್ಲಿ ನಿಂತಿರುವ ಬೆಳಗಳನ್ನು ಸಂರಕ್ಷಿಸುವುದು ಹಾಗೂ ರಾಯಚೂರು ಮತ್ತು ಇತರೆ ಕುಡಿಯುವ ನೀರು ಯೋಜನೆಗಳಿಗೆ ನೀರು ಒದಗಿಸುವುದು.
ಏಪ್ರೀಲ್. 10 ರಿಂದ 20 ರವರೆಗೆ 2000 ಕ್ಯೂಸೆಕ್ಸನಂತೆ 10 ದಿನಗಳಿಗೆ ಕುಡಿಯುವ ನೀರಿನ ಸಲುವಾಗಿ (ಎಡದಂಡೆ ವಿಜಯನಗರ ಕಾಲುವೆಗಳು ಒಳಗೊಂಡಂತೆ) ನೀರು ಬಿಡುಗಡೆ. ಏಪ್ರೀಲ್. 01 ರಿಂದ 10 ರವರೆಗೆ ಮತ್ತು ಏ. 21 ರಿಂದ ಮೇ. 10 ರವರೆಗೆ 100 ಕ್ಯೂಸೆಕ್ಸನಂತೆ 30 ದಿವಸಗಳಿಗೆ (ವಿಜಯನಗರ ಕಾಲುವೆಗಳಿಗಾಗಿ - ವಿತರಣಾ ಕಾಲುವೆ 1 ರಿಂದ 11ಎ ರವರೆಗೆ) ನೀರು ಬಿಡುಗಡೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲವೊ ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ: ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 01 ರಿಂದ 20 ರವರೆಗೆ 700 ಕ್ಯೂಸೆಕ್ಸನಂತೆ 20 ದಿನಗಳಿಗೆ ನೀರು ಬಿಡುಗಡೆ. ಡಿ. 21 ರಿಂದ 31 ರವರೆಗೆ ನೀರು ನಿಲುಗಡೆ. 2020ರ ಜನವರಿ 01 ರಿಂದ 15 ರವರೆಗೆ 750 ಕ್ಯೂಸೆಕ್ಸನಂತೆ 10 ದಿನಗಳಿಗೆ ಅಥವಾ ಆಂದ್ರಪ್ರದೇಶ ಕಾಲುವೆಯಡಿ ನೀರಿನ ಲಭ್ಯತೆಯ ಇರುವವರೆಗೆ ಮಾತ್ರ ಬಿಡುಗಡೆ, ಇದರಲ್ಲಿ ಯಾವುದು ಮೊದಲವೊ ಅದು ಅನ್ವಯಿಸುತ್ತದೆ. ಈ ಹರಿವಿನ ಪ್ರಮಾಣಗಳು ಟ್ರಾನ್ಸಮಿಷನ್ ಲಾಸ್ಗಳನ್ನೊಳಗೊಂಡಿರುತ್ತವೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 01 ರಿಂದ 20 ರವರೆಗೆ 700 ಕ್ಯೂಸೆಕ್ಸನಂತೆ 20 ದಿನಗಳಿಗೆ ನೀರು. ಡಿ. 21 ರಿಂದ 2020ರ ಜನವರಿ. 10 ರವರೆಗೆ 500 ಕ್ಯೂಸೆಕ್ಸನಂತೆ 20 ದಿನಗಳವರೆಗೆ, ಜನವರಿ. 11 ರಿಂದ 31 ರವರೆಗೆ 700 ಕ್ಯೂಸೆಕ್ಸನಂತೆ, ಫೆಬ್ರವರಿ. 01 ರಿಂದ ಮಾರ್ಚ್ . 31 ರವರೆಗೆ 650 ಕ್ಯೂಸೆಕ್ಸನಂತೆ 59 ದಿನಗಳವರೆಗೆ, ಮೇ. 01 ರಿಂದ 15 ರವರೆಗೆ 310 ಕ್ಯೂಸೆಕ್ಸನಂತೆ 15 ದಿನಗಳವರೆಗ ಕುಡಿಯುವ ನೀರಿನ ಸಲುವಾಗಿ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲವೊ ಅದು ಅನ್ವಯಿಸುತ್ತದೆ. ಈ ಹರಿವಿನ ಪ್ರಮಾಣಗಳು ಟ್ರಾನ್ಸಮಿಷನ್ ಲಾಸ್ಗಳನ್ನೊಳಗೊಂಡಿರುತ್ತವೆ.
ರಾಯ ಬಸವಣ್ಣ ಕಾಲುವೆ: ರಾಯ ಬಸವಣ್ಣ ಕಾಲುವೆಗೆ ಡಿ. 01 ರಿಂದ 10 ರವರೆಗೆ 180 ಕ್ಯೂಸೆಕ್ಸನಂತೆ 10 ದಿನಗಳಿಗೆ, ಡಿ. 11 ರಿಂದ 2020ರ ಫೆಬ್ರವರಿ. 28 ರವರೆಗೆ (59 ದಿವಸಗಳು), ಮಾರ್ಚ್ 01 ರಿಂದ ಮೇ. 31 ರವರೆಗೆ 250 ಕ್ಯೂಸೆಕ್ಸನಂತೆ 113 ದಿನಗಳಿಗೆ ಕುಡಿಯುವ ನೀರಿನ ಸಲುವಾಗಿ ಕಾಯ್ದಿರಿಸಿದೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲವೊ ಅದು ಅನ್ವಯಿಸುತ್ತದೆ. ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ಲಭ್ಯತೆ ಅನುಸಾರ ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು.
ತುಂಗಭಧ್ರಾಎಡದಂಡೆ ಮೇಲ್ಮಟ್ಟದ ಕಾಲುವೆ: ತುಂಗಭಧ್ರಾಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 01 ರಿಂದ 25ಕ್ಯೂಸೆಕ್ಸ ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ನೀರು ಬೀಡುಗಡೆ ಇದರಲ್ಲಿ ಯಾವುದು ಮೊದಲವೊ ಅದು ಅನ್ವಯಿಸುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಸಂಸದ ದೇವೆಂದ್ರಪ್ಪ, ಕೃಷಿ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುಕರ್ಿ, ಮುನಿರಾಬಾದ್ ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ ತುರುವಿಹಾಳ, ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕೂಲ ಸೇರಿದಂತೆ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮುನಿರಾಬಾದ್ ಕಾಡಾ ಟಿ.ಬಿ.ಪಿ ಅಧಿಕಾರಿಗಳು ಉಪಸ್ಥಿತರಿದ್ದರು. ಉಪ ಮುಖ್ಯಮಂತ್ರಿಗಳು, ಕೃಷಿ ಮತ್ತು ಸಾರಿಗೆ ಸಚಿವರು ಹಾಗೂ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೊಪ್ಪಳ, ಬಳ್ಳಾರಿ, ರಾಯಚೂರು ಭಾಗದ ಶಾಸಕರು ಲೋಕಸಭೆ ಸದಸ್ಯೆರು, ಕಾಡಾ ಅಧ್ಯಕ್ಷರು, ನೀರಾವರಿ ಇಲಾಖೆ ಪ್ರಧಾನ ಕಾರ್ಯದಶರ್ಿಗಳು, ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಕೂಲಂಕುಶವಾಗಿ ಚಚರ್ೆ ಮಾಡಲಾಗಿದೆ. ಹಿಂಗಾರು ಮುಂಗಾರು ಬೆಳೆಗೆ ನೀರು ಕೊಡವ ಕುರಿತು ತೀಮರ್ಾನಿಸಲಾಗಿದೆ. ಈ ಭಾಗದ ಪ್ರದೇಶಗಳಲ್ಲಿ ಯಾವುದೇ ರೀತಿಯ ಬೆಳೆ ಹಾನಿಯಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
2020ರ ಜನವೆರಿ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಿ ಎರಡನೇ ಬೆಳೆಗೆ ಎಷ್ಟು ಪ್ರದೇಶಗಳಿಗೆ ನೀರನ್ನು ಕೊಡುವುದಕ್ಕೆ ಸಾಧ್ಯ ಇದೆ, ಎಂಬುದರ ಬಗ್ಗೆ ಚಚರ್ಿಸಿ, ಎರಡನೇ ಬೆಳೆಗೆ ಸಹ ನೀರನ್ನು ಅನುಕೂಲ ಮಾಡಿಕೊಡಲು ತೀಮರ್ಾನ ಮಾಡಿದ್ದೇವೆ. ಇದಕ್ಕಾಗಿ ಸಲಹಾ ಸಮಿತಿ ಕರೆದು ನೀರನ ಬಗ್ಗೆ ಲಭ್ಯತೆ, ಹಾಗೂ ಇನ್ನೊಂದು ಕಡೆಯಿಂದ ನೀರು ತರುವ ಸಾಧ್ಯತೆ ಬಗ್ಗೆ ಯೋಚಿಸಲಾಗುತ್ತದೆ. ನಮ್ಮ ಉದ್ದೇಶ ಈ ಬಾಗದಲ್ಲಿರುವ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು, ಮತ್ತು ನೀರು ಪೋಲಾಗಬಾರದು. ಯಾರ ಯಾರಿಗೆ ಎಷ್ಟು ನೀರು ಸಿಗಬೇಕು ನ್ಯಾಯ ಸಮ್ಮತವಾಗಿ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು.