ಮಕ್ಕಳ ಶಿಕ್ಷಣಕ್ಕೆ ಮೂಲಸೌಲಭ್ಯ ಕೊರತೆಯಾಗದಂತೆ ಕ್ರಮ: ಶಾಸಕ ರಾಜುಗೌಡ
Action to ensure that there is no shortage of infrastructure for children's education: MLA Rajugowda
ದೇವರಹಿಪ್ಪರಗಿ 01: ಕ್ಷೇತ್ರದಲ್ಲಿ ಶಿಕ್ಷಣ ಸೇರಿದಂತೆ ಹಲವು ಮೂಲಭೂತ ಸೇವೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ತಾಲೂಕಿನ ಜಾಲವಾದ ಗ್ರಾಮದಲ್ಲಿ ಸೋಮವಾರದಂದು ಕೆ.ಪಿ.ಎಸ್. ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಯ ಸುಮಾರು 122.32ಲಕ್ಷ ರೂ ವೆಚ್ಚದ ಹಾಗೂ ಯಾಳವಾರ ಗ್ರಾಮದ ಸುಮಾರು 14 ಲಕ್ಷ ರೂ ವೆಚ್ಚದ ನೂತನ ಶಾಲಾ ಕೊಠಡಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ಕ್ಷೇತ್ರದ ವಿವಿಧೆಡೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸ ಲಾಗುತ್ತಿದೆ. ಯಾವುದೇ ಗ್ರಾಮದಲ್ಲಿ ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ ಕೊರತೆಯಾಗಬಾರದೆನ್ನುವುದು ನನ್ನ ಆಶಯ. ಅದಕ್ಕೆ ತಕ್ಕಂತೆ ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ತಿ, ಆಟದ ಮೈದಾನ, ಕಂಪೌಂಡ್ ನಿರ್ಮಾಣ, ಕ್ರೀಡಾ ಸಾಮಗ್ರಿ ಪೂರೈಕೆ, ಕುಡಿಯುವ ನೀರು ವ್ಯವಸ್ಥೆ, ಶಿಕ್ಷಕರ ನೇಮಕ ಎಲ್ಲದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ ಆದಷ್ಟು ಬೇಗ ಕೊಠಡಿಗಳನ್ನು ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಯಿತು. ಬರುವಂತ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಸಮರ್ಕ ಮೂಲ ಸೌಕರ್ಯ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರಲಾಗುತ್ತಿದೆ. ಹಂತ ಹಂತವಾಗಿ ಗ್ರಾಮಗಳ ಸಮಸ್ಯೆಗಳನ್ನು ಮುಖ್ಯ ಸಮಸ್ಯೆಗಳ ಆಧಾರದ ಮೇಲೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ ಅವರು ಮಾತನಾಡಿ, ಶಾಸಕರು ಕ್ಷೇತ್ರದ ಸೇವಕನಾಗಿ ಹಗಲಿರುಳು ಎನ್ನದೆ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಹಾಗಾಗಿ ಇಂತಹ ಶಾಸಕರನ್ನು ಹೊಂದಿರುವುದು ನಮ್ಮ ಕ್ಷೇತ್ರದ ಜನರ ಸೌಭಾಗ್ಯ. ಜೊತೆಗೆ ನಿಮ್ಮಂತ ಹೃದಯವಂತ ಜನರನ್ನು ಹೊಂದಿರುವ ನಾವೂ ಸಹ ಅದೃಷ್ಟವಂತರು ಬರುವಂತ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನವನ್ನು ತಂದು ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಹೇಳಿದರು.
ಸಿಂದಗಿ ಜಿ.ಪಂ ಎಇಇ ಜಿ.ವಾಯ್. ಮುರಾಳ ಅವರು ಮಾತನಾಡಿ, ಶಾಲಾ ಕೊಠಡಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಲಕ್ಷ್ಮಣ ಕೆಂಗುಟಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜು ಗುಂಡಗಿ, ಸದಸ್ಯರಗಳಾದ ಭೀಮರಾಯ ಹಂಗನಳ್ಳಿ, ಮಾಜಿ ತಾ.ಪಂ ಸದಸ್ಯರ ಪ್ರತಿನಿಧಿಯಾದ ಶ್ರೀಶೈಲ ಗೋಲಗೇರಿ,ಜಿ.ಪಂ ಅಭಿ ಯಂತ್ರರಾದ ಆರತಿ ಅಲ್ಲಿಬಾದಿ, ವಿಲಾಸ ರಾಠೋಡ ಸೇರಿದಂತೆ ಜಾಲವಾದ ಹಾಗೂ ಯಾಳವಾರ ಗ್ರಾಮದ ಪ್ರಮುಖರು, ಗಣ್ಯರು, ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 